ಇಂದು ಅಮೆರಿಕೆಯ ವಿರುದ್ಧ ನಡೆದ ಭೀಕರ ವೈಮಾನಿಕ kamikaze ಧಾಳಿಗಳ ವಾರ್ಷಿಕ ದಿನಾಚರಣೆ. ೨೦೦೧, ಸೆಪ್ಟೆಂಬರ್ ೧೧ ಅಮೆರಿಕೆಯ ಪಾಲಿಗೆ ಒಂದು ದುರ್ದಿನ ಮಾತ್ರವಲ್ಲ, ವಿಶ್ವದಾದ್ಯಂತ ಎಲ್ಲ ಜನರನ್ನು ಒಂದಲ್ಲ ಒಂದು ರೀತಿಯಲ್ಲಿ ಬಾಧಿಸಿದ ದುರ್ಘಟನೆ. ಚರಿತ್ರೆ ಬದಲಾಯಿತು ಈ ಧಾಳಿಯಿಂದ. ಅಮೆರಿಕೆಗೆ ಇಡೀ ವಿಶ್ವವೇ ಸಹಾನುಭೂತಿ ವ್ಯಕ್ತ ಪಡಿಸಿತು. ಅಮೇರಿಕ ದೇಶದ ವಿದೇಶಾಂಗ ನೀತಿಯ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸುತ್ತಿದ್ದವರೂ ಅಮೆರಿಕೆಯ ಬೆಂಬಲಕ್ಕೆ ನಿಂತರು. ಫ್ರಾನ್ಸ್ ದೇಶದ ಪತ್ರಿಕೆಯೊಂದು “ನಾವೆಲ್ಲರೂ ಅಮೆರಿಕನ್ನರು” ಎಂದು ಘೋಷಿಸಿ ಅನುಕಂಪ ವ್ಯಕ್ತ ಪಡಿಸಿತು. ೯/೧೧ ಈಗ ಚರಿತ್ರೆ. ಚರಿತ್ರೆ ಮರುಕಳಿ ಸುವುದು ಬೇಡ. ಅದೂ ರಕ್ತ ಸಿಕ್ತ ಚರಿತ್ರೆಯಂತೂ ಎಂದಿಗೂ ಮತ್ತೊಮ್ಮೆ ಕಾಣಲು, ಅನುಭವಿಸಲು ಸಿಗಕೂಡದು. ಕ್ರೈಸ್ತ, ಮುಸ್ಲಿಂ, ಹಿಂದೂ, ಬಿಳಿಯ ಕರಿಯ, ಬಡವ ಬಲ್ಲಿದ ಎಲ್ಲರೂ ಯಾವುದೇ ತಾರತಮ್ಯ ಎಸಗದೆ ಆ ಮಹಾಪ್ರಭು ಸೃಷ್ಟಿಸಿದ ಭೂಮಿಯ ಮೇಲೆ ನಿರಾತಂಕವಾಗಿ ಬದುಕಬೇಕು. ತಾನು ನಂಬಿದ ಆದರ್ಶಗಳ, ಧಾರ್ಮಿಕ ಮೌಯಗಳು ನಮಗೆ ಉರುಳಾಗಬಾರದು.
“ಲಿವ್ ಅಂಡ್ ಲೆಟ್ ಲಿವ್” ಎಲ್ಲರ ಮಂತ್ರವಾಗಬೇಕು.
Every Indian should feel proud about September 11.
http://ssnarendrakumar.blogspot.in/2012/09/swamy-vivekanandas-famous-chicago.html
http://ssnarendrakumar.blogspot.in/2012/09/vivekananda-rock-memorial-kanyakumari.html
I forgot to “subscribe to follow-up comments”.
So, adding this comment to get that done! 😉