body shopping

beauty-treatmentಮಹಿಳೆ ಮತ್ತು ಮೇಕ್ ಅಪ್ಪು ಅನ್ನುವುದು ಅವಳಿಜವಳಿಗಳು. ಮೇಕ್ ಅಪ್ ಇಲ್ಲದೆ ಹೊರಗಡಿ ಇಡಲು ಅಸಾಧ್ಯ. ಗಂಡಿಗೂ ಅಷ್ಟೇ, ಸೌಂದರ್ಯ ಎಂದ ಕೂಡಲೇ ಮಲೆನಾಡಿನ ಸುಂದರ ಬೆಟ್ಟ ಗುಡ್ಡಗಳೋ , ಪಚ್ಚೆ ಪೈರೋ, ರಮಣೀಯ ಜಲಪಾತವೋ ಕಣ್ಣ ಮುಂದೆ ಬರುವುದಿಲ್ಲ, ಬದಲಿಗೆ ಬರುವುದು ವೈಯಾರದ ನಟಿಯರು, ಮೊಡೆಲ್ಲುಗಳು. ಈ ಮೇಕ್ ಅಪ್ ನ ಹಾವಳಿ ಮೊದಲು beauty parlour ಗೆ ಹೋಗಿ ಬಣ್ಣ ಬಳಿದುಕೊಂಡು ಬರುವುದಕ್ಕಷ್ಟೇ ಸೀಮಿತವಾಗಿತ್ತು. ಈಗ ಹಾಗಲ್ಲ, ಕಾಲ ಬದಲಾಗಿದೆ, ಅದರೊಂದಿಗೆ ಒಂದಿಷ್ಟು ಕಾಂಚಾಣ ಸಹ ಓಡಾಡಲು ಆರಂಭಿಸಿದೆ. ಈಗ ಮಹಿಳೆಯರು ಮೊರೆ ಹೋಗುತ್ತಿರುವುದು operation theatre ಗೆ. beauty parlour, operation theatre ಆಯಿತು. ಹೇಗೆ ಅಂತೀರಾ? ಸುಂದರ ನಟಿಯರನ್ನು ನೋಡಿ ತಮಗೂ ಅವರಂತೆ ಆಗ ಬೇಕೆಂಬ ಆಸೆ ಮಹಿಳೆಯರು ತಮ್ಮ ಅಂಗಾಂಗಗಳನ್ನು surgical knife ಅಡಿ ಒಡ್ಡಿ ರಿಪೇರಿ ಮಾಡಿಸಿ ಕೊಳ್ಳಲು ಪ್ರೇರೇಪಿಸುತ್ತಿದೆ.  ಶ್ರೀ ದೇವಿಯಂಥ ಮೂಗು ಬೇಕೇ? ಐಶ್ವರ್ಯಳ ಗಲ್ಲ ಬೇಕೇ? why not? Botox ಅನ್ನೋ ಚಿಕಿತ್ಸೆ ಯಾಕೆ? ಮುಖದ ಒಂದು ಭಾಗ ಕೊಯ್ದು gel ತುಂಬಿದರೆ ಆದಳು ಐಶ್ವರ್ಯ. ಕಾಲುಗುರು ವಕ್ರ ವಾಗಿದೆಯ? ಇದೆಯಲ್ಲ, toenail repair. ಮೇಡಂ, ಹೌ ಅಬೌಟ್ “tummy tucking?”  ಇದು ವಾಶ್ ಬೋರ್ಡ್ ನಂಥ ಉದರಕ್ಕೆ. breast augmentation ತುಂಬಿದ ಎದೆಗಾಗಿ. ನಡುವಿನ ತುಂಬಾ ಕೊಬ್ಬು ತುಂಬಿ ಕೊಂಡಿದೆಯಾ? liposuction is simple. nuisance ಎಲ್ಲಿಗೆ ಬಂತು ತಲುಪಿದೆ ಅಂದ್ರೆ ಈಗ eye lash extension ಸಹ ಮಾಡ್ತಾರೆ. ಅಂದ್ರೆ ಕಣ್ ರೆಪ್ಪೆಗಳನ್ನು ಬೇಕಾದ ಅಳತೆಗೆ ಕತ್ತರಿಸಿಯೋ, ಅಂಟಿಸಿಯೋ ಮಾಡುವ ಚಿಕಿತ್ಸೆ.

ತನ್ನತನ ಅನ್ನೋದು ಬೇಡ ಅಂತಾನ? OK, ಇದು ನನ್ನ ಶರೀರ, ನನ್ನ ದುಡಿಮೆ ನಿನಗ್ಯಾಕೆ ಬೇಡದ ಉಸಾಬರಿ ಅನ್ನೋದಾದರೆ ಅನ್ನಿ ಪರವಾಗಿಲ್ಲ. ತಮ್ಮನ್ನು ನೋಡಿ ಅನುಕರಿಸಲಿಚ್ಚಿಸುವ ಮಕ್ಕಳ ಕತೆ? ಮಕ್ಕಳಿಗೆ ತಂದೆ ತಾಯಿಯರಲ್ವೆ role models? ತನ್ನ ರೂಪದ ಬಗೆಗಿನ ಕೀಳರಿಮೆಯಿಂದ ತಾಯಿ ಹೀಗೆ ತನ್ನ ಮೂಗು, ತುಟಿ, ಉಗುರು ಕತ್ತರಿಸಿಕೊಳ್ಳುತ್ತಾ ಸಾಗಿದರೆ ಅದನ್ನು ನೋಡುವ ಮಕ್ಕಳಿಗೆ ಅನ್ನಿಸೋದಿಲ್ವೇ ರೂಪವೇ ಮುಖ್ಯ, ರೂಪಕ್ಕೇ ಮೊದಲ ಆಧ್ಯತೆ ಕೊಡಬೇಕೆಂದು? 

ಮೇಲೆ ಹೇಳಿದ procedures ಒಂಥರಾ body shopping ಹಾಗೆ ಕಾಣುವುದಿಲ್ಲವೇ? ನನ್ನನ್ನು ಕೇಳಿದರೆ, ನನಗನ್ನಿಸುವುದು ಇದೊಂಥರಾ post mortem ಅಂತ. live post mortem!

ಆಧುನಿಕ ನಾರಿಗೆ ಜೈ ಹೋ!