ಹೀಗೇ ಬ್ರೌಸ್ ಮಾಡ್ತಾ ಇದ್ದಾಗ ಒಂದು ವೆಬ್ ತಾಣದಲ್ಲಿ release date TBA ಅಂತ ಕಣ್ಣಿಗೆ ಬಿತ್ತು. ಹಾಗೇ ಗೆಸ್ ಮಾಡ್ದೆ. ಏರ್ಲೈನ್ಸ್ ನ parlance ನಲ್ಲಿ ETA ಅಂದ್ರೆ EXPECTED TIME OF ARRIVAL. ಇದೇನಿರಬಹುದು TBA? ಸರಿ TBA ಅಂದ್ರೆ ಬಹುಶಃ TO BE ANNONCED ಅಂತ ಇರಬೇಕು ಎಂದು ಆ ವೆಬ್ ತಾಣದಲ್ಲಿ ಇದ್ದ ವಿಷಯವನ್ನ ಗ್ರಹಿಸಿ contextual ಆಗಿ ಊಹಿಸಿದೆ. ಊಹೆಗೆ ಒಂದು ಸಮರ್ಥನೆ ಬೇಕಲ್ಲ, ಅದಕ್ಕೆ ತಾನೇ ಗೂಗ್ಲ್ ಇರೋದು. ಬಾಕುಲ್ ತೆಗಿ ಸೇಸಮ್ಮ ಎಂದ ಕೂಡಲೇ ಗುಹೆಯ ಬಾಗಿಲು ತೆರೆದುಕೊಂಡ ಹಾಗೆ ಗೂಗ್ಲ್ ಮೊರೆ ಹೋದೆ. ಅರರೆ, ಸರಿಯಾಯಿತಲ್ಲ ನನ್ನ ಊಹೆ. ಹೌದ್ರೀ, TBA ಅಂದ್ರೆ to be announced. ಯಾವುದಾದರೂ ಚಿತ್ರ ಬಿಡುಗಡೆ ಯಾಗುವಾಗ, CD ಬಿಡುಗಡೆ ಆಗುವಾಗ TBA ಅಂತ ಕಣ್ಣಿಗೆ ಬಿದ್ರೆ ಅದರರ್ಥ ಬಿಡುಗಡೆ ದಿನಾಂಕ TO BE ANNOUNCED ಅಂತ. IAS ಪರೀಕ್ಷೆಯಲ್ಲಿ ಈ ಪ್ರಶ್ನೆ ಬಂದರೆ ಉತ್ತರಿಸುವಿರಿ ತಾನೇ?