ಹಡಗನ್ನು ಮುಳುಗಿಸಿದ ಶಾಂಪೇನ್

ನಮ್ಮ ಪಕ್ಕದ ಮನೆಯ ರಂಗಣ್ಣ ಹೊಸ “ಸುವೇಗ” ಮೊಪೆಡ್ ಕೊಂಡಾಗ ಮಾಡಿದ್ದು ಹೀಗೆ. ಒಂದು ಜಮಾನಾದಲ್ಲಿ ಸುವೇಗ ಕೊಳ್ಳೋದು ಒಂದು ಸಾಧನೆಯೇ. ಬಹಳ ಉತ್ಸಾಹ, ಹೆಮ್ಮೆಯಿಂದ ಮನೆಗೆ ತಂದಾಗ ಅವನ ಹೆಂಡತಿ ಆರತಿ ಎತ್ತಿ, ಕಾಯಿ ಒಡೆದು, ಹೂವಿನ ಹಾರ ಹಾಕಿದ ನಂತರ ಒಂದು ನಿಂಬೆ ಹಣ್ಣನ್ನು ಚಕ್ರದಡಿ ಇಟ್ಟು ಸುವೇಗ ಅದರ ಮೇಲೆ ಓಡಿಸಲು ಆದೇಶಿಸಿದಳು. ನನ್ನ ಸೋದರ ಮಾವ ಕಾರು ಕೊಂಡಾಗ ನಿಂಬೆ ಹಣ್ಣಿನ ಮೇಲೆ ಕಾರನ್ನು ಚಲಾಯಿಸಿ ‘ದರ್ಗಾ’ ದರ್ಶನ ಮಾಡಿಸಲು ಕಾರನ್ನು ಓಡಿಸಿ ಕೊಂಡು ಹೋಗಿದ್ದು ನೆನಪಿದೆ. ನಿಂಬೆ ಹಣ್ಣು ಸುವೇಗ ಭಾರಕ್ಕೆ burst ಆಗಿ ಅಪ್ಪಚ್ಚಿಯಾದರೆ ಒಳ್ಳೆಯದು, ಇಲ್ಲದಿದ್ದರೆ unlucky ಎಂದು ಅವಕೃಪೆ ಸುವೆಗಾದ ಮೇಲೂ, ಹೊಸ ಕಾರಿನ ಮೇಲೂ ಬೀಳಬಹುದೇನೋ? ಹೇಗೇ ಇರಲಿ, ಸಂಪ್ರದಾಯ ಎಂದ ಮೇಲೆ ಜನ ನಿಷ್ಠೆಯಿಂದ ಪರಿಪಾಲನೆ ಮಾಡುತ್ತಾರೆ, ಅದೆಷ್ಟೇ ನಗೆಪಾಟಲಾದರೂ ಕೂಡಾ. ಹಡಗಿನ ಶೀರ್ಷಿಕೆ ಕೊಟ್ಟು ಹಳೇ ಕಾಲದ ಬೆಡಗಿನ ಮೊಪೆಡ್ ಬಗ್ಗೆ ಏಕೆ ಪಂಚಾಯತಿ ಎಂದಿರೋ? ಇಲ್ಲಿದೆ ನೋಡಿ ಕಥೆ.

ಪ್ರತೀದಿನ ಮನೆಯಿಂದ, ಆಫೀಸು, ಆಫಿಸಿನಿಂದ ಮನೆ, ಅದರ ಮಧ್ಯೆ ಕೆಲಸದ ನಿಮಿತ್ತ ಓಡಾಟ, ಸರಾಸರಿ ದಿನಕ್ಕೆ ೨೦೦ ಕಿಲೋ ಮೀಟರ್ ಗಳಷ್ಟು. ಈ errand ಗಳಿಗೆ ಸಂಗಾತಿಯಾಗಿ ಕಾರಿನ ರೇಡಿಯೋ. ಸಂಗೀತ ಕೇಳಲು ಅಮೇರಿಕನ್ ಆರ್ಮ್ಡ್ ಫೋರ್ಸಸ್ ಚಾನಲ್, ಮತ್ತು ವಿಶ್ವದ ಆಗುಹೋಗುಗಳ ಬಗ್ಗೆ tuned ಆಗಿರಲು NPR. ಅಮೆರಿಕೆಯ NPR ತೆರನಾದ ರೇಡಿಯೋ ಭಾರತದಲ್ಲಿ ಇರಲು ಸಾಧ್ಯವಿಲ್ಲ ಎಂದು ಧೈರ್ಯವಾಗಿ ಹೇಳಬಲ್ಲೆ. ಅಷ್ಟೊಂದು ವೃತ್ತಿಪರತೆ ಮತ್ತು ಅಮೋಘ ಕಾರ್ಯಕ್ರಮಗಳು. ಇಟಲಿಯ (ನಮ್ಮ ಬೀಗರ ದೇಶ) ತೀರದಲ್ಲಿ ಲಕ್ಷುರಿ ಲೈನರ್ ಹಡಗು ತೀರಕ್ಕೆ ಅಪ್ಪಳಿಸಿ ಮೂರು ಜನ ಸತ್ತರು ಎನ್ನುವ ಸುದ್ದಿ ಬಂತು. ಒಂದೂವರೆ ಲಕ್ಷ ಟನ್ನು ಭಾರದ ಸರಕುಗಳನ್ನೂ, ನಾಲ್ಕು ಸಾವಿರ ಜನರನ್ನೂ ಹೊತ್ತು ಸಾಗಬಲ್ಲ ಈ floating village ಅತ್ಯಾಧುನಿಕ NAVIGATION ತಂತ್ರಜ್ಞಾನ ಹೊಂದಿತ್ತು. ಆಕಸ್ಮಾತ್ ಆಗಿ ಹಡಗಿಗೆ ಅಪಾಯಕಾರಿಯಾಗುವ ಯಾವುದೇ ಸನ್ನಿವೇಶವನ್ನೂ ಎದುರಿಸುವ ತಂತ್ರಜ್ಞಾನ ಇದ್ದೂ ಎಡವಿದ್ದು ಎಲ್ಲಿ ಎಂದು ತಜ್ಞರ ತಲೆಕೆರೆತ.

“ಕೋಸ್ಟ ಕಾನ್ಕೊರ್ಡಿಯಾ” ಹೆಸರಿನ ಹಡಗು ಮುಳುಗಲು ಆರಂಭವಾದ ಕೂಡಲೇ ಪ್ರಯಾಣಿಕರನ್ನು ರಕ್ಷಿಸುವ ಬದಲು ಎಲ್ಲರಿಗಿಂತ ಮುಂಚೆ ತೀರಕ್ಕೆ ಹಾರಿ ಬಚಾವ್ ಆದ ಶೂರ ೫೨ ರ ಪ್ರಾಯದ ಕ್ಯಾಪ್ಟನ್ ನನ್ನು ಬಂಧನದಲ್ಲಿರಿಸಿ ವಿಚಾರಣೆ ನಡೆಯುತ್ತಿದೆ. ಈ ಅತ್ಯಾಧುನಿಕ ಹಡಗು ಹೊಸತೂ ಹೌದು. ಇದರ ಚೊಚ್ಚಲ ಪ್ರಯಾಣದ ವೇಳೆ, ನಮ್ಮ ಸುವೇಗಾ ಥರ, ಹಡಗಿನ ಮೇಲ್ಮೆ ಮೇಲೆ ಶಾಂಪೇನ್ ಬಾಟಲಿ ಎಸೆಯುತ್ತಾರಂತೆ. ಇದು ಸಂಪ್ರದಾಯ. ನಮ್ಮ ನಿಂಬೆ ಹಣ್ಣಿನ ರೀತಿ. ಶಾಂಪೇನ್ ಬಾಟಲಿ ಒಡೆದು ಚೂರಾದರೆ ಶಕುನ. ಬಾಟಲಿ ಒಡೆಯದಿದ್ದರೆ unlucky. ಕೋಸ್ಟ ಕಾನ್ಕೊರ್ಡಿಯಾ ದ ಮೇಲೆ ಬಿದ್ದ ಶಾಂಪೇನ್ ಬಾಟಲಿ ಒಡೆಯಲಿಲ್ಲ. ಬಾಟಲಿ ಒಡೆಯದೆ ಹಡಗು ದುರಾದೃಷ್ಟ ದ ಹಣೆ ಪಟ್ಟಿ ಅಂಟಿಸಿಕೊಂಡಿತು. ಪ್ರಶಾಂತ “ಟಸ್ಕನ್” ದ್ವೀಪದ ಸನಿಹ ಮುಳುಗು ಹಾಕಿತು. ಈ ಹಡಗು ಸ್ಥಿಮಿತ ತಪ್ಪಿ ವಾಲುತ್ತಿದ್ದಂತೆ ಸುತ್ತಲೂ rescue boat ಗಳು, ಹೆಲಿಕಾಪ್ಟರ್ ಗಳು ಬಂದು ಅಪಾರ ಜೀವಹಾನಿಯನ್ನು ತಡೆದವು. ಕೆಲ ವರ್ಷಗಳ ಹಿಂದೆ ರಾಜಸ್ಥಾನದಲ್ಲಿ ಪ್ರವಾಹಕ್ಕೆ ಸಿಕ್ಕಿಹಾಕಿಕೊಂಡ ಏಳೆಂಟು ಜನರನ್ನು ಭಾರ್ತಿ ೪೮ ಘಂಟೆಗಳ ಸಮಯವಿದ್ದೂ ರಕ್ಷಿಸಲಾಗದೆ ಜಲಸಮಾಧಿ ಆಗಿದ್ದು ನೆನಪಿದೆ. ಇವರು ಜಲಸಮಾಧಿ ಆದಾಗ ಅಲ್ಲಿ ಮಂತ್ರಿ ಮಹೋದಯರೂ ಇದ್ದರು, ಇದರ ಬಗ್ಗೆ ಟೀಕೆ ಬಂದಾಗ ಮುಖ್ಯಮಂತ್ರಿ ವಸುಂಧರಾ ರಾಜೆ ಕೆರಳಿ ಮಂತ್ರಿ ಯೂ ಅವರ ಜೊತೆ ಮುಳುಗಿ ಸಾಯಬೇಕಿತ್ತೇನೋ ಎಂದು ಕೆರಳಿ ಕೇಳಿದ್ದೂ ನೆನಪಿದೆ. ನಮ್ಮಲ್ಲಿ ಮನುಷ್ಯನ ಜೀವಕ್ಕೆ ಬೆಲೆಯಿಲ್ಲ. ಮುಖ್ಯಮಂತ್ರಿಯ ಹೇಳಿ ಕಾಪ್ಟರ್ ಲ್ಯಾಂಡ್ ಆಗಲು ಒಂದೆರಡು ಘಂಟೆ ತಡವಾದರೆ ವಾಯುಪಡೆ, ಭೂಪಡೆ ಸೇರಿ ಇಡೀ ದೇಶದ ವ್ಯವಸ್ಥೆಯೇ ಸನ್ನದ್ಧ. ನಮ್ಮ ಪಕ್ಕದ ಮನೆಯ ರಂಗಣ್ಣ ಹೊಸ “ಸುವೇಗ” ಮೊಪೆಡ್ ಕೊಂಡಾಗ ಮಾಡಿದ್ದು ಹೀಗೆ. ಒಂದು ಜಮಾನಾದಲ್ಲಿ ಸುವೇಗ ಕೊಳ್ಳೋದು ಒಂದು ಸಾಧನೆಯೇ. ಬಹಳ ಉತ್ಸಾಹ, ಹೆಮ್ಮೆಯಿಂದ ಮನೆಗೆ ತಂದಾಗ ಅವನ ಹೆಂಡತಿ ಆರತಿ ಎತ್ತಿ, ಕಾಯಿ ಒಡೆದು, ಹೂವಿನ ಹಾರ ಹಾಕಿದ ನಂತರ ಒಂದು ನಿಂಬೆ ಹಣ್ಣನ್ನು ಚಕ್ರದಡಿ ಇಟ್ಟು ಸುವೇಗ ಅದರ ಮೇಲೆ ಓಡಿಸಲು ಆದೇಶಿಸಿದಳು. ನನ್ನ ಸೋದರ ಮಾವ ಕಾರು ಕೊಂಡಾಗ ನಿಂಬೆ ಹಣ್ಣಿನ ಮೇಲೆ ಕಾರನ್ನು ಚಲಾಯಿಸಿ ದರ್ಗಾ ದರ್ಶನ ಮಾಡಿಸಲು ಕಾರನ್ನು ಓಡಿಸಿ ಕೊಂಡು ಹೋಗಿದ್ದು ನೆನಪಿದೆ. ನಿಂಬೆ ಹಣ್ಣು ಸುವೇಗ ಭಾರಕ್ಕೆ burst ಆಗಿ ಅಪ್ಪಚ್ಚಿಯಾದರೆ ಒಳ್ಳೆಯದು, ಇಲ್ಲದಿದ್ದರೆ unlucky ಎಂದು ಅವಕೃಪೆ ಸುವೆಗಾದ ಮೇಲೂ, ಹೊಸ ಕಾರಿನ ಮೇಲೂ ಬೀಳಬಹುದೇನೋ? ಹೇಗೇ ಇರಲಿ, ಸಂಪ್ರದಾಯ ಎಂದ ಮೇಲೆ ಜನ ನಿಷ್ಠೆಯಿಂದ ಪರಿಪಾಲನೆ ಮಾಡುತ್ತಾರೆ, ಅದೆಷ್ಟೇ ನಗೆಪಾಟಲಾದರೂ ಕೂಡಾ. ಹಡಗಿನ ಶೀರ್ಷಿಕೆ ಕೊಟ್ಟು ಹಳೇ ಕಾಲದ ಬೆಡಗಿನ ಮೊಪೆಡ್ ಬಗ್ಗೆ ಏಕೆ ಪಂಚಾಯತಿ ಎಂದಿರೋ? ಇಲ್ಲಿದೆ ನೋಡಿ ಕಥೆ.

ಪ್ರತೀದಿನ ಮನೆಯಿಂದ, ಆಫೀಸು, ಆಫಿಸಿನಿಂದ ಮನೆ, ಅದರ ಮಧ್ಯೆ ಕೆಲಸದ ನಿಮಿತ್ತ ಓಡಾಟ, ಸರಾಸರಿ ದಿನಕ್ಕೆ ೨೦೦ ಕಿಲೋ ಮೀಟರ್ ಗಳಷ್ಟು. ಈ errand ಗಳಿಗೆ ಸಂಗಾತಿಯಾಗಿ ಕಾರಿನ ರೇಡಿಯೋ. ಸಂಗೀತ ಕೇಳಲು ಅಮೇರಿಕನ್ ಆರ್ಮ್ಡ್ ಫೋರ್ಸಸ್ ಚಾನಲ್, ಮತ್ತು ವಿಶ್ವದ ಆಗುಹೋಗುಗಳ ಬಗ್ಗೆ tuned ಆಗಿರಲು NPR. ಅಮೆರಿಕೆಯ NPR ತೆರನಾದ ರೇಡಿಯೋ ಭಾರತದಲ್ಲಿ ಇರಲು ಸಾಧ್ಯವಿಲ್ಲ ಎಂದು ಧೈರ್ಯವಾಗಿ ಹೇಳಬಲ್ಲೆ. ಅಷ್ಟೊಂದು ವೃತ್ತಿಪರತೆ ಮತ್ತು ಅಮೋಘ ಕಾರ್ಯಕ್ರಮಗಳು. ಇಟಲಿಯ (ನಮ್ಮ ಬೀಗರ ದೇಶ) ತೀರದಲ್ಲಿ ಲಕ್ಷುರಿ ಲೈನರ್ ಹಡಗು ತೀರಕ್ಕೆ ಅಪ್ಪಳಿಸಿ ಮೂರು ಜನ ಸತ್ತರು ಎನ್ನುವ ಸುದ್ದಿ ಬಂತು. ಒಂದೂವರೆ ಲಕ್ಷ ಟನ್ನು ಭಾರದ ಸರಕುಗಳನ್ನೂ, ನಾಲ್ಕು ಸಾವಿರ ಜನರನ್ನೂ ಹೊತ್ತು ಸಾಗಬಲ್ಲ ಈ floating village ಅತ್ಯಾಧುನಿಕ NAVIGATION ತಂತ್ರಜ್ಞಾನ ಹೊಂದಿತ್ತು. ಆಕಸ್ಮಾತ್ ಆಗಿ ಹಡಗಿಗೆ ಅಪಾಯಕಾರಿಯಾಗುವ ಯಾವುದೇ ಸನ್ನಿವೇಶವನ್ನೂ ಎದುರಿಸುವ ತಂತ್ರಜ್ಞಾನ ಇದ್ದೂ ಎಡವಿದ್ದು ಎಲ್ಲಿ ಎಂದು ತಜ್ಞರ ತಲೆಕೆರೆತ. “ಕೋಸ್ಟ ಕಾನ್ಕೊರ್ಡಿಯಾ” ಹೆಸರಿನ ಹಡಗು ಮುಳುಗಲು ಆರಂಭವಾದ ಕೂಡಲೇ ಪ್ರಯಾಣಿಕರನ್ನು ರಕ್ಷಿಸುವ ಬದಲು ಎಲ್ಲರಿಗಿಂತ ಮುಂಚೆ ತೀರಕ್ಕೆ ಹಾರಿ ಬಚಾವ್ ಆದ ಶೂರ ೫೨ ರ ಪ್ರಾಯದ ಕ್ಯಾಪ್ಟನ್ ನನ್ನು ಬಂಧನದಲ್ಲಿರಿಸಿ ವಿಚಾರಣೆ ನಡೆಯುತ್ತಿದೆ. ಈ ಅತ್ಯಾಧುನಿಕ ಹಡಗು ಹೊಸತೂ ಹೌದು. ಇದರ ಚೊಚ್ಚಲ ಪ್ರಯಾಣದ ವೇಳೆ, ನಮ್ಮ ಸುವೇಗಾ ಥರ, ಹಡಗಿನ ಮೇಲ್ಮೆ ಮೇಲೆ ಶಾಂಪೇನ್ ಬಾಟಲಿ ಎಸೆಯುತ್ತಾರಂತೆ. ಇದು ಸಂಪ್ರದಾಯ. ನಮ್ಮ ನಿಂಬೆ ಹಣ್ಣಿನ ರೀತಿ. ಶಾಂಪೇನ್ ಬಾಟಲಿ ಒಡೆದು ಚೂರಾದರೆ ಶಕುನ. ಬಾಟಲಿ ಒಡೆಯದಿದ್ದರೆ unlucky. ಕೋಸ್ಟ ಕಾನ್ಕೊರ್ಡಿಯಾ ದ ಮೇಲೆ ಬಿದ್ದ ಶಾಂಪೇನ್ ಬಾಟಲಿ ಒಡೆಯಲಿಲ್ಲ. ಬಾಟಲಿ ಒಡೆಯದೆ ಹಡಗು ದುರಾದೃಷ್ಟ ದ ಹಣೆ ಪಟ್ಟಿ ಅಂಟಿಸಿಕೊಂಡಿತು. ಪ್ರಶಾಂತ “ಟಸ್ಕನ್” ದ್ವೀಪದ ಸನಿಹ ಮುಳುಗು ಹಾಕಿತು. ಈ ಹಡಗು ಸ್ಥಿಮಿತ ತಪ್ಪಿ ವಾಲುತ್ತಿದ್ದಂತೆ ಸುತ್ತಲೂ rescue boat ಗಳು, ಹೆಲಿಕಾಪ್ಟರ್ ಗಳು ಬಂದು ಅಪಾರ ಜೀವಹಾನಿಯನ್ನು ತಡೆದವು.

ಕೆಲ ವರ್ಷಗಳ ಹಿಂದೆ ರಾಜಸ್ಥಾನದಲ್ಲಿ ಪ್ರವಾಹಕ್ಕೆ ಸಿಕ್ಕಿಹಾಕಿಕೊಂಡ ಏಳೆಂಟು ಜನರನ್ನು ಭಾರ್ತಿ ೪೮ ಘಂಟೆಗಳ ಸಮಯವಿದ್ದೂ ರಕ್ಷಿಸಲಾಗದೆ ಜಲಸಮಾಧಿ ಆಗಿದ್ದು ನೆನಪಿದೆ. ಇವರು ಜಲಸಮಾಧಿ ಆದಾಗ ಅಲ್ಲಿ ಮಂತ್ರಿ ಮಹೋದಯರೂ ಇದ್ದರು, ಇದರ ಬಗ್ಗೆ ಟೀಕೆ ಬಂದಾಗ ಮುಖ್ಯಮಂತ್ರಿ ವಸುಂಧರಾ ರಾಜೆ ಕೆರಳಿ ಮಂತ್ರಿ ಯೂ ಅವರ ಜೊತೆ ಮುಳುಗಿ ಸಾಯಬೇಕಿತ್ತೇನೋ ಎಂದು ಕೆರಳಿ ಕೇಳಿದ್ದೂ ನೆನಪಿದೆ. ನಮ್ಮಲ್ಲಿ ಮನುಷ್ಯನ ಜೀವಕ್ಕೆ ಬೆಲೆಯಿಲ್ಲ. ಮುಖ್ಯಮಂತ್ರಿಯ ಹೇಳಿ ಕಾಪ್ಟರ್ ಲ್ಯಾಂಡ್ ಆಗಲು ಒಂದೆರಡು ಘಂಟೆ ತಡವಾದರೆ ವಾಯುಪಡೆ, ಭೂಪಡೆ ಸೇರಿ ಇಡೀ ದೇಶದ ವ್ಯವಸ್ಥೆಯೇ ಸನ್ನದ್ಧ.

ಕುರಿಗಳು ಸಾರ್, ಕುರಿಗಳಲ್ಲಾ ಸಾರ್

ಪ್ರಾಣಿಗಳಿಗೆ ಹಿಂಸೆ ಆದಾಗ ಪ್ರಾಣಿ ದಯಾ ಸಂಘಕ್ಕೆ ಕರೆ ಕೊಡೋದು ವಾಡಿಕೆ. ಬಂದ್ ಗಾಗಿ ಕರೆ ಅಲ್ಲ, ಬಂದು ಪ್ರಾಣಿಯನ್ನು ಉಳಿಸಿ ಅಂತ ಹೇಳೋಕೆ ಕರೆ. ಜಟಕಾ ಗಾಡಿಯ ಮಾಲೀಕ ಬಳಲಿದ, ಹಸಿದ, ನಿತ್ರಾಣವಿಲ್ಲದೆ ಒಲ್ಲೆ ಎಂದರೂ ಬಿಡದೆ ಬಾರು ಕೋಲಿನಿಂದ ಬಾರಿಸಿ ತನ್ನ ಗಾಡಿಯಲ್ಲಿರುವ ಪೋಸ್ಟ್ ಮಾರ್ಟಂ ದಾರಿ ಹಿಡಿದ ಹೆಣ ವನ್ನು ಅದು ಸೇರಬೇಕಾದ ಸ್ಥಳ ತಲುಪಿಸಲು ಕುದುರೆಗೆ ಕೊಡುವ ಹಿಂಸೆ ನೋಡಿ, ನೋಡಲಾರದೆ ಪ್ರಾಣಿ ದಯಾ ಸಂಘಕ್ಕೆ ಬುಲಾವ್ ಕೊಡೋದು.  ಹೌದು ಪ್ರಾಣಿಗಳಿಗೆ ದಯೆ ತೋರಿಸಬೇಕಾದ್ದೆ. ಆದರೆ ಈ ಬುಲಾವ್ ಬರೀ ಕುದುರೆ ಕತ್ತೆ ನಾಯಿಗಳಿಗೆ ಮಾತ್ರ ಏಕೆ, ಕೋಳಿ ಕುರಿಗಳಿಗೂ ಏಕಿಲ್ಲ ಅವೂ ಪ್ರಾಣಿಗಳೇ ಅಲ್ಲವೇ ಎಂದು ಕೆಲವರ ಸಂಶಯ. ಒಬ್ಬರ ಸಂಶಯಕ್ಕೆ ಪಾರ್ಶ್ವ ಉತ್ತರವಾಗಿ ಮತೊಬ್ಬರು ಹೇಳಿದರು, ಕುರಿ ಏನೋ ಪ್ರಾಣಿಯೇ, ಆದರೆ ಕೋಳಿ ಪ್ರಾಣಿಯಲ್ಲ, ಅದು ಪಕ್ಷಿ ಎಂದು. ಪ್ರಾಣಿಯೋ , ಪಕ್ಷಿಯೋ ಪ್ರಾಣವಂತೂ ಇದೆಯಲ್ರೀ ಅಂತೀರಾ? ಸೊಳ್ಳೆಗೂ ಇದೆ ಪ್ರಾಣ, ಹಾಗೆಯೇ ತಿಗಣೆಗೂ ಸಹ, ಅಲ್ವರ? ಸೊಳ್ಳೆಯನ್ನು ಕೊಲ್ಲಲು ಈಗ ಚೀನೀ ತಂತ್ರಜ್ಞಾನ ಉಪಯೋಗಿಸುತ್ತಿಲ್ಲವೇ ನಾವು. ಟೆನ್ನಿಸ್ ಬೆಡಗಿ ಸಾನಿಯಾ ಥರ ಎಲೆಕ್ಟ್ರೋನಿಕ್ ಬ್ಯಾಟ್ ಹಿಡಿದು ಚಟ ಚಟ, ಚಟ, ಚಟಾ ಅಂತ ಅಟ್ಟಾಡಿಸಿಕೊಂಡು ಸುಡುತ್ತಿಲ್ಲವೇ ಸೊಳ್ಳೆ ಗಳನ್ನು?  ನಮ್ಮ ಕಿವಿಗಳ ಸುತ್ತಾ ಹಾರುತ್ತಾ, ತಪ್ಪಿಸಿಕೊಳ್ಳುತ್ತಾ, ಒಂದು ರೀತಿಯ ಅಣಕದ ಶಬ್ದ ಮಾಡಿ ನಂತರ ನಮ್ಮ ರಕ್ತ ಹೀರುವ  ಸೊಳ್ಳೆಗಳನ್ನು ಹಾಗೆ ಬಿಡಿ ಅಂತೀರಾ ಎಂದು ಕೇಳಬೇಡಿ. back hand, fore hand, ಹೀಗೆ ನಾನಾ ರೀತಿ ರಾಕೆಟ್ ತಿರುಗಿಸಿ ಫ್ರೈ ಮಾಡಿ ಸೊಳ್ಳೆಗಳನ್ನು.   ಹಾಗಾದರೆ ಈ ಮೇಲಿನ ಪುರಾಣ ಯಾಕೆ? ಕುರಿ, ಕೋಳಿ, ಪ್ರಾಣಿ ದಯೆ, ಬ್ಲಾ, ಬ್ಲಾ, ಬ್ಲಾ ಎಂದಿರಾ?

ಈಗ ಪ್ರಾಣಿ ಹಿಂಸೆ ವಿಷಯ ಬಂದಾಗ ಕೆಲವರು by choice ಅಥವಾ by taste ಕಾರಣ ಆರಿಸಿಕೊಂಡ ಆಹಾರ ಪದ್ಧತಿಗೆ ಕೊನೆ ಹಾಡಿ ಕುರಿ ಕೋಳಿ ಭಕ್ಷ್ಯ ಮಾಡುವ ಪರಿಪಾಠಕ್ಕೆ ನಾಂದಿ ಹಾಡಬೇಕು. ನಮ್ಮ ದೇಶದಲ್ಲಿ ಕುರಿ ಕೋಳಿ ಹಂದಿ ಮುಂತಾದುವುಗಳ ಹಿಂಸೆಗೆ ನಾಂದಿ ಹಾಡಿದರೆ ವಿಎಟ್ನಾಮ್, ಚೈನಾ, ಮುಂತಾದ ದೇಶಗಳಲ್ಲಿ ನಾಯಿ, ಜಿರಲೆ ಇವುಗಳ ಹತ್ಯೆಗೂ ಹಾಡಬೇಕು ಇತಿಶ್ರೀ. ಅಯ್ಯೋ ನಾಯ್ ತಿಂತಾರಾ ಚೈನಾದಲ್ಲಿ ಎಂದು ಮೂಗೆಳೆಯಬೇಡಿ. ಆರ್ಥಿಕ ಸಂಕಷ್ಟ ಜನರನ್ನು ಬಡಿದು ಕುರಿ ಕೋಳಿ, ಹಂದಿ ದುಬಾರಿ ಯಾದಾಗ ನಾಯಿಗಳು “ಮೆನ್ಯು ಪಟ್ಟಿ”- menu-  ಗೆ ಬಡ್ತಿ ಪಡೆದು ಕೊಳ್ಳುತ್ತವೆ ಕೆಲವು ದೇಶಗಳಲ್ಲಿ. ಕುರಿ ಕೋಳಿ ಹತ್ಯೆ ಕುರಿತ ಚರ್ಚೆಯಲ್ಲಿ ಓದುಗರೊಬ್ಬರು ಕೇಳಿದರು, “ಪ್ರಾಣ ಇರುವುದೆಲ್ಲ ಪ್ರಾಣಿಗಳೇ ….. ಜಗದೀಶ್ ಚಂದ್ರಬೋಸರು ತೋರಿಸಿದ್ದಾರೆ ಸಸ್ಯಗಳೀಗೂ ಪ್ರಾಣವಿದೆ ಹಾಗೂ ಅವೂ ಉಸಿರಾಡುತ್ತವೆ ಎಂದು. ಹಾಗಾಗಿ ಪ್ರಾಣಿ ದಯಾಸಂಘದವರು ಪ್ರಾಣವಿರುವ ಎಲ್ಲವನ್ನೂ ರಕ್ಷಿಸಲು ಮುಂದಾಗಬೇಕು ಎನ್ನುವುದು ನನ್ನ ಕೋರಿಕೆ!!!!!” ಓಹ್, ಇದೆಂಥಾ ಬಾಂಬ್ ಅಪ್ಪಾ! ಹಾಗಾದರೆ ನಾವು ತಿನ್ನೋದೇನನ್ನು? ನನಗೆ ಗೊತ್ತಿಲ್ಲ. ಆದರೆ ಅದುನ್ ತಿನ್ನೋದ್ ಬ್ಯಾನ್ ಮಾಡಿ, ಇದುನ್ ತಿನ್ನೋದನ್ ಬ್ಯಾನ್ ಮಾಡಿ ಎನ್ನುವವರಿಗೆ ಮತ್ತೊಂದು ಉತ್ತರ ಹೀಗೆ..

“ಅನುಕೂಲ ಶಾಸ್ತ್ರ” ದ proponent ಗಳಿಗೆ ತಮ್ಮದೇ ಆದ ತರ್ಕಗಳಿರುತ್ತವೆ, ಆ ತರ್ಕಗಳಿಗೆ ವಿವೇಚನೆ ಅಥವಾ reasoning ಕೆಲಸಕ್ಕೆ ಬಾರದ ಸಂಗತಿಗಳು, ಹಾಗೆಯೇ “ಅನುಕೂಲ ಶಾಸ್ತ್ರ” thrive ಆಗೋದು ನಂಬರ್ ಗೇಂ ನಲ್ಲಿ. ಸಂಖ್ಯೆ ಹೆಚ್ಚಿದ್ದರೆ ಅವರು ಹೇಳಿದ್ದೇ ಸರಿ, ಈ ವಿಷಯದಲ್ಲಿ ಮಾತ್ರ ಇವರುಗಳು truly democratic.
ತುರೇ ಮಣೆ ಕಯ್ಯಿಂದ ನಿರ್ದಯವಾಗಿ ತುರಿಸಿಕೊಳ್ಳುವ ತೆಂಗಿನಕಾಯಿ ಮತ್ತು ಹರಿಯುವ ಚಾಕುವಿನ ಅಡಿ ದಯನೀಯವಾಗಿ ನಲುಗುವ ಈರುಳ್ಳಿ ಬಗ್ಗೆ ಇವರುಗಳಿಗೆ ಕನಿಕರ ಭಾವ ತೋರಿದಾಗ ಅವುಗಳನ್ನು ಒಳಗೊಂಡ ತಿನಿಸಿಗೂ ಬರುತ್ತದೆ ಸಂಚಕಾರ.

ಈಗ ಚರ್ಚೆ ಪರಿಸಮಾಪ್ತಿ. ನಡೀರಿ ಮಿಲ್ಟ್ರಿ ಹೋಟೆಲ್ ಕಡೆ.  ಚೀನಿಯರು ನಮ್ಮ menu ಮೇಲೆ ಇನ್ನೂ ಧಾಳಿ ಮಾಡಿಲ್ಲ ತಾನೇ? ಇಲ್ದಿದ್ರೆ, ನಾಯ್, ಜಿರಲೆ….ಅಯ್ಯೋ….