ಬ್ರಿಟಿಷ್ ರಾಜಧಾನಿ ಲಂಡನ್ನಿನಲ್ಲಿ ಒಬ್ಬ ಪ್ರತಿಭಟನಾಕಾರನ ಕತೆ ಕೇಳಿ. ಯಾರ ಸಹಾಯವೂ ಇಲ್ಲದೆ ಶಸ್ತ್ರಾಸ್ತ್ರ ವಿದ್ಯೆ ಕಲಿತ ಏಕಲವ್ಯನಂತೆ ಈತ ಒಂಟಿಯಾಗಿ ಬ್ರಿಟಿಷ್ ಸರಕಾರದ ವಿದೇಶಾಂಗ ನೀತಿಯ ವಿರುದ್ಧ ಸಮರ ಸಾರಿದ್ದಾನೆ. ಸುಮಾರು ಎಂಟು ವರ್ಷಗಳಿಂದ ಬ್ರಿಟಿಷ್ ಸಂಸತ್ತಿನ ಎದುರು ಡೇರೆ ಹಾಕಿ ಕುಳಿತಿರುವ ಈತ ಮಾಜಿ ಪ್ರಧಾನಿ ಬ್ಲೇರ್ಗಿಂತ ಹೆಚ್ಚು ಜನಪ್ರಿಯ ವ್ಯಕ್ತಿ. ಈ ಆದುನಿಕ ಏಕಲವ್ಯನ ಹೆಸರು ಬ್ರಯನ್ ಹಾವ್,ಬಡಗಿ ಮತ್ತು ೭ ಮಕ್ಕಳ ತಂದೆ. ಅಮೇರಿಕೆಯಲ್ಲಿ ನಡೆದ ಸೆಪ್ಟೆಂಬರ್ ೧೧,೨೦೦೧ ಧಾಳಿಯ ೩ ತಿಂಗಳ ಮೊದಲೇ ಈತ ಇರಾಕಿನ ವಿರುದ್ಧದ ಆರ್ಥಿಕ ದಿಗ್ಬಂಧನದ ವಿರುದ್ಧ ಹೋರಾಟಕ್ಕಿಳಿದ. “Stop Killing Kids”, “Make Peace Not War”,“Let Iraqi Infants Live”,ಮುಂತಾದ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಜನರ ಗಮನ ತನ್ನೆಡೆ ಸೆಳೆದ. ವಿಶೇಷವಾಗಿ “Baby killers” and “Tony B Liar”ಎನ್ನೋ ಭಿತ್ತಿಚಿತ್ರ ಪ್ರದರ್ಶಿಸಿದ ಈತ ಇಷ್ಟು ವರ್ಷಗಳ ಕಾಲ ಈ ರೀತಿ ಪ್ರತಿಭಟನೆಗೆ ಇಳಿಯುತ್ತಾನೆಂದು ಯಾರೂ ಭಾವಿಸಿರಲಿಲ್ಲ. 
ಬ್ರಿಟಿಷ್ ಸಂಸತ್ತಿನ ಚೌಕದ ಮುಂದೆ ಮತ್ತು ಪ್ರಧಾನಿ ಅಧಿಕೃತ ನಿವಾಸ 10,Downing streetನ ಬಹು ಸಮೀಪ ಡೇರೆ ಹಾಕಿರುವ ಈತನನ್ನು ಒಮ್ಮೆ ಡಜನ್ಗಟ್ಟಲೆ ಪೊಲೀಸರು ಬಂದು ಓಡಿಸಲು ಪ್ರಯತ್ನ ಪಟ್ಟರೂ ಜುಮ್ಮೆನ್ನದೆ ಅಲ್ಲೇ ಬೀಡು ಬಿಟ್ಟಿದ್ದಾನೆ. ಈ ಪೋಲಿಸ್ ಕ್ರಮದ ಬಗ್ಗೆ ಅಲ್ಲಿನ ಪ್ರಸಿದ್ದ ಪತ್ರಿಕೆಗಳು ( The DailyTelegraph ran the story with a headline: “Police sent 78 to quell loneprotester.” )ವರದಿ ಮತ್ತು ಲೇವಡಿ ಮಾಡಿ ಬರೆದಾಗ ಸರಕಾರಕ್ಕೆ ಕಸಿವಿಸಿ ಆಗಿ ಆತನನ್ನು ಅವನ ಪಾಡಿಗೆ ಬಿಡಲು ನಿರ್ಧರಿಸಿತು.ಇಂಗ್ಲೆಂಡಿನ ಕ್ರೂರ ಚಳಿಗೂ ಸೊಪ್ಪು ಹಾಕದೆ ತನ್ನ ಡೇರೆಯಲ್ಲೇ ಕಳೆಯುವ ಈತ ಚಳಿ ಬಗ್ಗೆ ಕೇಳಿದರೆ ಆಫ್ಘಾನಿಸ್ತಾನದಲ್ಲಿ ಭೂಕಂಪದ ನಂತರ ಬೆಟ್ಟ ಗುಡ್ಡ ಮೇಲಿರುವ ಎಲ್ಲವನ್ನೂ ಕಳೆದುಕೊಂಡ ಪುಟ್ಟ ಬಾಲಕಿಯರ ಬಗ್ಗೆ ಮಾತನಾಡಿ ಈ ಚಳಿ ಅದಕ್ಕೆ ಹೋಲಿಸಿದರೆ ದೊಡ್ಡದೇನೂ ಅಲ್ಲ ಎನ್ನುತ್ತಾನೆ. ಹೀಗೆ ನಿಷ್ಠುರವಾಗಿ ತನ್ನ ಮತ್ತು ಅಮೆರಿಕೆಯ ಸರಕಾರಗಳನ್ನು ತರಾಟೆಗೆ ತೆಗೆದುಕೊಳ್ಳುವ ಬ್ರಯನ್ ಹಾವ್ ಎಷ್ಟು ದಯಾಮಯಿ ಎಂದು ಅನ್ನಿಸದಿರದೆ?
ಲಂಡನ್ನಿನ ಆಕರ್ಷಣೆಗಳಲ್ಲಿ ಬ್ರಯನ್ ಹಾವ್ ಒಬ್ಬ ಎಂದರೂ ಸರಿಯೇ.