ವಿಶ್ವವಿಖ್ಯಾತ ಭೌತಶಾಸ್ತ್ರಜ್ಞ, ಮತ್ತು cosmologist ಸ್ಟೀಫನ್ ಹಾಕಿಂಗ್, ಮೊನ್ನೆಯ ಭಾನುವಾರ ೭೦ನೆ ಜನ್ಮ ದಿನಾಚರಣೆ ಆಚರಿಸಿದರು. ಸರ್ ಐಸಾಕ್ ನ್ಯೂಟನ್ ನಂತರದ ಅತ್ಯಂತ ಪ್ರತಿಭಾವಂತ ವಿಜಾನಿ ಎಂದು ಪರಿಗಣಿಸಲ್ಪಡುವ ಸ್ಟೀಫನ್ ಹಾಕಿಂಗ್ ಬ್ರಿಟಿಶ್ ಪ್ರಜೆ.
ಭೌತಶಾಸ್ತ್ರ ಅಥವಾ ಬ್ರಹ್ಮಾಂಡ ಶಾಸ್ತ್ರ ನನ್ನ ಕೈಗೆಟುಕುವ ಮಾತಲ್ಲ. ಇವೆರಡೂ ಇಮಾಂ ಸಾಹೇಬರಿಗೂ, ಜನ್ಮಾಷ್ಠಮಿ ಗೂ ಇರುವ ಸಂಬಂಧ ಹೇಗೋ ಹಾಗೆ. ೧೯೮೮ ರಲ್ಲಿ ಪ್ರಕಟವಾದ ಸ್ಟೀಫನ್ ಹಾಕಿಂಗ್ ರ brief history of time ಪುಸ್ತಕ ಒಂದು ಕೋಟಿಗೂ ಹೆಚ್ಚು ಪ್ರತಿಗಳ ಮುದ್ರಣ ಕಂಡಿತು. ಇಷ್ಟು ಜನಪ್ರಿಯವಾದ ಪುಸ್ತಕದಲ್ಲಿ ಏನಿರಬಹುದು ಎಂದು ಆಸಕ್ತಿ ಕುದುರಿದ್ದರಿಂದಲೂ, ಮತ್ತು ಈ ಪುಸ್ತಕದಲ್ಲಿ ಹಾಕಿಂಗ್ ದೇವರ ಅಸ್ತಿತ್ವದ ಸಾಧ್ಯತೆ ಬಗ್ಗೆ ಬರೆದಿದ್ದರು ಎಂದು ಕೇಳಿದ್ದರಿಂದಲೂ ಪುಸ್ತಕ ಕೊಂಡೆ. ಓದಿದ ನಂತರ ಅರ್ಥವಾಗಿದ್ದು ಅಷ್ಟಕ್ಕಷ್ಟೇ, ಆದರೆ ಈ ವಿಜ್ಞಾನಿಯ ಬಗ್ಗೆ ಆಸಕ್ತಿ ಮಾತ್ರ ನನ್ನಲ್ಲಿ ಉಳಿದುಕೊಂಡಿತು.
೧೯೪೨ ರಲ್ಲಿ ಜನಿಸಿದ ಸ್ಟೀಫನ್ ಹಾಕಿಂಗ್ ಗೆ ೨೧ ನೇ ವಯಸ್ಸಿನಲ್ಲಿ ALS (Amyotrophic lateral sclerosis) ಅಥವಾ ಲೂ ಗೆಹ್ರಿಗ್ ಎಂದೂ ಕರೆಯಲ್ಪಡುವ, ಮೆದುಳನ್ನು ಮತ್ತು ಬೆನ್ನ ಹುರಿಯನ್ನು ಬಾಧಿಸುವ ವಾಸಿಯಾಗದ ನರರೋಗ ಇದೆ ದೃಢ ಪಟ್ಟ ನಂತರ ವೈದ್ಯರು ಇವರ ಬದುಕುವ ಕಾಲ ಕೇವಲ ಇನ್ನೆರಡು ವರ್ಷ ಎಂದಿದ್ದರು. ೨೩ ನೇ ವಯಸ್ಸಿನಲ್ಲಿ ಅಂತ್ಯ ಕಾಣಬೇಕಿದ್ದ ಈ ವಿಜ್ಞಾನಿ ಕಾಯಿಲೆ ವಾಸಿಯಾಗದಿದ್ದರೂ ೭೦ ನೇ ಜನ್ಮ ದಿನ ಆಚರಿಸುತ್ತಿದ್ದಾರೆ. ಉಲ್ಬಣಗೊಳ್ಳುತ್ತಾ (debilitating and degenerative disease) ಹೋಗುವ ಈ ಕಾಯಿಲೆ ಸ್ಟೀಫನ್ ರನ್ನು ಮಾತನಾಡಲೂ, ಬರೆಯಲೂ ಸಾಧ್ಯವಾಗದಂತೆ ಮಾಡಿತು. ಜನರೊಂದಿಗೆ ಸಂವಾದಿಸಲು ಅವರಿಗಾಗಿ ಪ್ರತ್ಯೇಕ ಯಂತ್ರವನ್ನ ಕಂಡು ಹಿಡಿಯಲಾಯಿತು. ಶರೀರದ ಕೆಲವೇ ಕೆಲವು ಸ್ನಾಯುಗಳನ್ನು ಉಪಯೋಗಿಸಿ ಗಣಕ ಯಂತ್ರದ ಕೀಲಿಮಣೆ ಮೂಲಕ ಸಂವಾದ ನಡೆಸುತ್ತಿದ್ದರು ಹಾಕಿಂಗ್. ಈಗ ಅದೂ ಕಷ್ಟವಾಗಿ ಕೇವಲ ಕೆನ್ನೆಗಳ ಸ್ನಾಯುಗಳ ಸಹಾಯದಿಂದ ಸಂವಾದ ನಡೆಸುತ್ತಿದ್ದಾರೆ.
ಮೆದುಳು ಮತ್ತು ಶರೀರ tandem ಆಗಿ ಕೆಲಸ ಮಾಡುತ್ತವೆ. ಶರೀರದ ಸ್ನಾಯುಗಳು ಕೆಲಸ ಮಾಡಲು ಸಹಾಯ ಮಾಡುವುದು ಮೆದುಳಿನಿಂದ ಹೊರಡುವ ಆಜ್ಞೆಗಳು. ಆದರೆ ALS ಖಾಯಿಲೆಯಲ್ಲಿ ಸ್ನಾಯುಗಳು ಕೆಲಸ ಮಾಡದಿದ್ದರೂ ಮೆದುಳು ಮಾತ್ರ pristine ಆಗಿಯೇ ಉಳಿಯುತ್ತದೆ. ಈ ಬೆಳವಣಿಗೆ ALS ಖಾಯಿಲೆಗೆ ಸೀಮಿತವಲ್ಲದಿದ್ದರೂ ಹಾಕಿಂಗ್ ವಿಷಯದಲ್ಲಿ ಮಾತ್ರ ಅನ್ವಯವಾಗುತ್ತಿದೆ. ಹಾಕಿನ್ ರ ಮೆದುಳು ಬುದ್ದಿ ಮತ್ತೆಯಲ್ಲಿ ಇಷ್ಟೊಂದು ಪ್ರಖರವಾಗಿದ್ದರೂ ಯಾವುದೇ ಶಾರೀರಿಕ ನ್ಯೂನತೆಯಿಲ್ಲದ ಹಾಕಿಂಗ್ ಶರೀರ ಮಾತ್ರ ಏಕೆ ಈ ರೀತಿ ವರ್ತಿಸುತ್ತಿರಬಹುದು? ಒಂದು ಲೋಟ ನೀರು ಬೇಕು ಎಂದು ಕೇಳಲೂ ಸಾಧ್ಯವಾಗದ ರೀತಿಯಲ್ಲಿ ಅವರ ಶಾರೀರಿಕ ಸಾಮರ್ಥ್ಯ ಕುಗ್ಗಲು ದೇವರಿಲ್ಲ ಎಂದು ಶತಸ್ಸಿದ್ಧ ಸಾಧಿಸಲು ಹೊರಟ ಅವರಿಗೆ ಪರಮಾತ್ಮ ಕೊಡಮಾಡಿದ ಶಿಕ್ಷೆ ಇರಬಹುದೋ ಎಂದು ಕೆಲವು ಸಂದೇಹ ವ್ಯಕ್ತಪಡಿಸುತ್ತಾರೆ.
ಭೌತ ಶಾಸ್ತ್ರಕ್ಕಿಂತಲೂ ಇವರ ಅಧ್ಯಯನ ಮತ್ತು ಸಂಶೋಧನೆ ನಭೋ ಮಂಡಲದ ಬಗ್ಗೆ. expanding universe, black hole ಹೀಗೆ ಮಾನವನ ಕುತೂಹಲ ಮತ್ತು ಅಚ್ಚರಿಯನ್ನು ಹಿಡಿದಿಟ್ಟ, ನಮ್ಮ ಭೂಮಿ ಮತ್ತು ಬ್ರಹ್ಮಾಂಡ ಹೇಗೆ ಅಸ್ತಿತ್ವಕ್ಕೆ ಬಂದಿರಬಹುದು ಎನ್ನುವ ಶಂಶೋಧನೆಯಲ್ಲಿ ಇವರ ಆಸಕ್ತಿ. ಒಂದೊಮ್ಮೆ ದೇವರ ಅಸ್ತಿತ್ವದ ಬಗ್ಗೆ ಸಕಾರಾತ್ಮಕ ವಾಗಿದ್ದ ಅವರ ನಿಲುವು ನಂತರ ಬದಲಾಯಿತು. ಸ್ವರ್ಗ ಎನ್ನುವುದು ಒಂದು fairy story ಮಾತ್ರ ಎಂದು ಹಾಕಿಂಗ್ ರ ಅಭಿಪ್ರಾಯ.
ವಿಸ್ತಾರ ಗೊಳ್ಳುತ್ತಿರುವ ಬ್ರಹ್ಮಾಂಡದ ಬಗ್ಗೆ ಚಿಂತಿಸುವ, black hole ಗಳ ನಿಗೂಢತೆ ಬಗ್ಗೆ ಬಗ್ಗೆ ಅಭ್ಯಸಿಸುವ, ಈ ವಿಜ್ಞಾನಿಗೆ ಭೌತಶಾಸ್ತ್ರದಷ್ಟೇ ಕಠಿಣ ಎಂದು ತೋರಿದ ಮತ್ತೊಂದು ವಿಷಯ ಹೆಣ್ಣು. women. they are a complete mystery. ದಾರ್ಶನಿಕರು, ಕವಿಗಳು, ಭಗ್ನ ಹೃದಯೀ ಪುರುಷರು ಹಳಿದ, ಹಲುಬಿದ, ಹೆಣ್ಣು ಸ್ಟೀಫನ್ ರಿಗೂ enigma ಆದಳು. black hole ಥರ.
ಸ್ಟೀಫನ್ ಹಾಕಿಂಗ್ ರಿಗೆ ಹುಟ್ಟು ಹಬ್ಬದ ಶುಭಾಶಯಗಳೊಂದಿಗೆ……
