ಜಪಾನ್ ದೇಶದ ಜನಸಂಖ್ಯೆ ವರ್ಷ ಕಳೆದಂತೆ ಇಳಿಮುಖ ವಾಗುತ್ತಿದ್ದು ಕಂಪೆನಿಗಳು, ಸರಕಾರಗಳು, ಮಾರುಕಟ್ಟೆಗಳು ಜನರನ್ನು ಹುರಿದುಂಬಿಸುತ್ತಿವೆ ಮಕ್ಕಳನ್ನು ಹೆರಲು. ತಮ್ಮ ಜೋಡಿಗಳೊಂದಿಗೆ ಹೆಚ್ಚಿನ ಸಮಯ ಕಳೆಯಲು ಕಂಪೆನಿಗಳ ಉತ್ತೇಜನದಿಂದ ಹಿಡಿದು ದೊಡ್ಡ ಕುಟುಂಬಕ್ಕೆ ಶಾಪಿಂಗ್ ವೌಚರ್ ಪ್ರದಾನ ಮಾಡುವವರೆಗೆ ಆಮಿಷಗಳು galore ಈ ದೇಶದಲ್ಲಿ.
ಜಪಾನೀಯರು ನೀರಸ ಸಂಭೋಗಿಗಳು. ತಮ್ಮ ಅಜೆಂಡಾ ದಲ್ಲಿ ಸಂಭೋಗಕ್ಕೆ ಕೊನೆಯ ಸ್ಥಾನ. ಜಪಾನೀ ಜೋಡಿ ಲೈಂಗಿಕವಾಗಿ ವರ್ಷದಲ್ಲಿ ೪೫ ಸಲ ಮಾತ್ರ ಕೂಡುತ್ತಾರಂತೆ. ಅದೇ ಸಮಯ ಜಾಗತಿಕ ಸರಾಸರಿ ವರ್ಷಕ್ಕೆ ೧೦೩ ಸಂಭೋಗ ಗಳು (ಅಷ್ಟೇನಾ.., ಏನಾಗಿದೆ ಹೈಕ್ಳುಗಳಿಗೆ? ). ಸರಾಸರಿಗಿಂತ ಅರ್ಧಕ್ಕೂ ಕಡಿಮೆ. ಈ ನಿರಾಸಕ್ತಿಗೆ ಸೋಮಾರಿತನವೋ, ಸಮಯದ ಅಭಾವವೋ (ಮೂರೂವರೆ ನಿಮಿಷಕ್ಕೂ ‘ಬರ’ ವೋ?) ಅಥವಾ ಮತ್ಯಾವುದಾದರೂ ಜೈವಿಕ ಕಾರಣವೋ ಅಲ್ಲ. ಶಯ್ಯಾ ಗೃಹದ ಚಟುವಟಿಕೆ ಚಾತುರ್ಯಕ್ಕಿಂತ ಬೋರ್ಡ್ ರೂಂ, ಕ್ಯೂಬಿಕಲ್ ಗಳಲ್ಲಿ ಹೆಚ್ಚು ಸಾಮರ್ಥ್ಯ ತೋರಿಸುವ “ಕೆರಿಯರ್ ಡ್ರಿವನ್” ಗುರಿ. ಅಷ್ಟು ಮಾತ್ರವಲ್ಲ, ಜಪಾನೀಯರು ತಡವಾಗಿ ಮದುವೆಯಾಗುತ್ತಾರೆ. ಮದುವೆಯಾಗಲು ತಡವಾದಾಗ ಎಲ್ಲವೂ ತಡವೇ. ಅಲ್ವಾ?
ಜಪಾನ್ ನ ಈಗಿನ ಜನಸಂಖ್ಯೆ ಸುಮಾರು ೧೩ ಕೋಟಿ. ಬೆಡ್ ರೂಂ ನ ಬಹಿಷ್ಕಾರ ಹೀಗೇ ಮುಂದುವರೆದರೆ 2105 ರ ಹೊತ್ತಿಗೆ ಜಪಾನ್ ಜನಸಂಖ್ಯೆ ಕೇವಲ ನಾಲ್ಕೂವರೆ ಕೋಟಿಯಾಗುತ್ತಂತೆ. ಹಾಗಾಗಿ ಸರಕಾರ, ಮತ್ತು ವ್ಯವಸ್ಥೆ ಹೇಗಾದರೂ ಜೋಡಿಗಳನ್ನು “ಚಂದ್ರ ಮಂಚ” ಕೆ ನೂಕಲು ಉತ್ಸುಕತೆ ತೋರಿಸುತ್ತಿರುವುದು.
ಕಾರ್ಮಿಕರ ಕೊರತೆ ನೀಗಿಸಲು “ರೋಬೋಟ್” ಕಂಡು ಹಿಡಿದ ಜಪಾನ್ ಜನಸಂಖ್ಯೆಯ ಇಳಿತವನ್ನು ತಡೆಯಲು ಯಾವ ಯಂತ್ರ ಕಂಡು ಹಿಡಿಯಬಹುದೇನೋ?