lonliest planet ನ passionate couple ಇವರು. backpacking ಅಡ್ವೆಂಚರ್ ಬಗೆಗಿನ ಈ ‘lonliest planet‘ ಚಿತ್ರದಲ್ಲಿ ನಿಗೂಢತೆ ಮನೆ ಮಾಡಿದೆಯಂತೆ. ರಷ್ಯಾದ ಕಾಕಸ್ ಬೆಟ್ಟಗಳ ಶ್ರೇಣಿಯ ತಪ್ಪಲಿನಲ್ಲಿ ನಡೆಸಿದ ಚಿತ್ರೀಕರಣ ಬದುಕಿನ ಡ್ರಾಮಾ ವನ್ನು ಸೊಗಸಾಗಿ ಪ್ರದರ್ಶಿಸುತ್ತದಂತೆ. ಈ ಚಿತ್ರದ ಬಗ್ಗೆ ಮತ್ತಷ್ಟು ಡೀಟೇಲ್ www.npr.org ವೆಬ್ ತಾಣದಲ್ಲಿ ಕಾಣಬಹುದು. ಹಾಗೆಯೇ ಈ ಮೇಲಿನ ಕುದುರೆ ತೆರನಾದ ಪಿರೀತಿಯ ಚಿತ್ರದ ಕ್ರೆಡಿಟ್ಸ್ ಸಹ ಮೇಲಿನ ತಾಣಕ್ಕೆ. ಈ ಪಿರೀತಿಯಲ್ಲಿ kinky ಸುಖ ಕಾಣೋದಾದರೆ why not give it a try?
ಕುತೂಹಲ
ಅಮ್ಮಾ, ನಾನ್ಹೇಗೆ ಹುಟ್ಟಿದೆ?
ಮಕ್ಕಳ ಹತ್ತು ಹಲವು ಕುತೂಹಲಗಳಲ್ಲಿ ಒಂದು ಮಕ್ಕಳು ಹೇಗೆ ಹುಟ್ಟುತ್ತವೆ ಎಂದು. ನಾನ್ಹೇಗೆ ಬಂಡೆ ಎನ್ನುವ ಈ ಮಕ್ಕಳ ಪ್ರಶ್ನೆ ನಮ್ಮನ್ನು ತಬ್ಬಿಬ್ಬು ಮಾಡುವುದು ಸಹಜವೇ. ಐದನೇ ಕ್ಲಾಸಿನಲ್ಲಿದ್ದಾಗ ನನ್ನ ಪೋಲಿ ಗೆಳೆಯನೊಬ್ಬ ವಿವರವಾಗಿ ತಿಳಿಸಿ ಹೇಳಿದರೂ ತಂದೆ ತಾಯಿ ಬಗೆಗಿನ ಅಪಾರವಾದ ಗೌರವ ಅವನ ಕಥೆಯನ್ನೂ ನಂಬದಂತೆ ತಡೆದಿತ್ತು. ನಾನು ಅಂದು ಕೊಂಡಿದ್ದು ಮಕ್ಕಳು ಬೇಕೆಂದಾಗ ತಂದೆ ತಾಯಿಗಳು ದೇವರಲ್ಲಿ ಕೇಳಿ ಕೊಳ್ಳುತ್ತಾರೆ ಮತ್ತು ಆ ಕರುಣಾಮಯನಾದ ದೇವರು ಮಕ್ಕಳನ್ನು ಕರುಣಿಸುತ್ತಾನೆ ಎಂದು, ಆದರೆ ಮೇಲೆ ಹೇಳಿದಂಥ ಪೋಲಿ ಪೋಕರಿಗಳು ವಕ್ಕರಿಸಿ ಹಾಗಲ್ಲ ಕಣೋ ಬೆಪ್ಪೆ ಹೀಗೆ ಎಂದು ಸವಿವರವಾಗಿ ಹೇಳಿದಾಗ ಅಪ್ಪ ಅಮ್ಮನ ನನ್ನು ಸಂಶಯ ದಿಂದ ನೋಡುವಂತಾಗುತ್ತಿತ್ತು.
ಈ ಚಿತ್ರ ನೋಡಿ. ಜರ್ಮನಿ ದೇಶದಲ್ಲಿ ಮಕ್ಕಳು ಹೇಗೆ ಬರುತ್ತಾರೆ ಎಂದು ಮಕ್ಕಳಿಗೆ ತಿಳಿ ಹೇಳಲು ಪುಸ್ತಿಕೆಗಳು. ಅದರಲ್ಲಿನ ಒಂದು ದೃಶ್ಯ ನೀವೀಗ ನೋಡುತ್ತಿರುವುದು.

