ಸೆಕ್ಸ್ ಬೇಕಾದರೂ ಬಿಟ್ಟೇನು, ಸರ್ಫಿಂಗ್ ಬಿಡೇ

ಹವ್ಯಾಸಗಳು ಹಲವು. ಕೆಲವರಿಗೆ ಓದುವ ಹವ್ಯಾಸವಾದರೆ ಇನ್ನು ಕೆಲವರಿಗೆ ಹಳೆ ಲೇಖನಿಗಳನ್ನು ಸಂಗ್ರಹಿಸುವ ಹವ್ಯಾಸ. ಅಂಚೆinternet-weather ಚೀಟಿ ಸಂಗ್ರಹ, ನಟ ನಟಿಯರ ಚಿತ್ರ ಸಂಗ್ರಹ, antique ಕಾರುಗಳು, ಇಲಿ ಸಾಕುವುದು, ಕ್ಯಾಲ್ಲಿಗ್ರಫಿ, ನಾಣ್ಯಗಳು ಹೀಗೆ ಸಾಗುತ್ತವೆ ಹವ್ಯಾಸಗಳ ಪಟ್ಟಿ. ಈಗಿನ rush rush ಯುಗದಲ್ಲಿ ಕೆಲವರಿಗೆ ಹವ್ಯಾಸಗಳ ಆಸಕ್ತಿ ಕಡಿಮೆಯಾದರೂ ಈಗಲೂ ಬಹಳಷ್ಟು ಜನ ತಮಗೆ ಇಷ್ಟವಾದ ವಿಷಯಗಳ ಮೇಲೆ ಕಾರ್ಯಮಗ್ನರಾಗಿರುತ್ತಾರೆ. ಚಿಕ್ಕವನಿದ್ದಾಗ ನನಗಿತ್ತು ಅಂಚೆಚೀಟಿಗಳ ಸಂಗ್ರಹದ ಗೀಳು. ನನ್ನ ಮಟ್ಟಿಗೆ ಹವ್ಯಾಸ ಸುಲಭವಾಗಿ ಚಟವಾಗಿ ಅಂಟಿ ಕೊಂಡು ಬಿಡುತ್ತದೆ. ರಣ ಬಿಸಿಲಿನಲ್ಲಿ ಬರುವ ಪೋಸ್ಟ್ ಮ್ಯಾನ್ ಹಿಂದೆ ಸುತ್ತಿ ಅಂಚೆ ಚೀಟಿಗಾಗಿ ಮನೆ ಮನೆಗಳಿಗೆ ತೆರಳಿ ಬೇಡುತ್ತಿದ್ದೆ. ಬೆಳಿಗ್ಗೆ ಎದ್ದು ಬ್ಯಾಂಕ್ ಹೊರಗೆ ಬಿಸುಟಿರುವ ಪತ್ರಗಳನ್ನು ಹೆಕ್ಕಿ ಬೇಕಾದ stamps ಕಿತ್ತುವುದು, ನನ್ನದೇ ಆಸಕ್ತಿಯ ಮಿತ್ರರನ್ನು ಮನೆಗೆ ಆಹ್ವಾನಿಸಿ ಅವರ ಸ್ಟಾಂಪ್ಗಳನ್ನು ಕದಿಯುವುದು ಮಜವೋ ಮಜಾ. ಈ ಚಟದ ನಂತರ ಸಿಕ್ಕಿದ್ದು ಹಳೆ ಆಂಗ್ಲ ಸಾಹಿತ್ಯ ಓದುವುದು. D.H.Lawrence, Jane Austen, Somerset maugham, Charles Dickens, palgrave’s golden treasury (ಕವಿತೆಗಳು) ಈಗ ಅಂಟಿ ಕೊಂಡಿರುವ, ಮನೆಯಲ್ಲಿ ಮಹಾಭಾರತಕ್ಕೆ ನಾಂದಿ ಹಾಡುತ್ತಿರುವ ಚಟ ಎಂದರೆ ಇಂಟರ್ನೆಟ್. 

ಅಂತರ್ಜಾಲವೋ, ಮಾಯಾಜಾಲವೋ ಒಟ್ಟಿನಲ್ಲಿ “ಜೇಡನ” ಕಡಿತದ ಸುಖ ಆಗಾಗ ಹೆಂಡತಿಯ ಕಡೆಯಿಂದ friction ಮತ್ತು sniping ಗೆ ದಾರಿ ಮಾಡಿಕೊಟ್ಟಿದ್ದು ನಿಜವೇ. ಒಮ್ಮೆ ನನ್ನ ಒಂದು ವರ್ಷದ ಮಗಳು ನನ್ನ ಲ್ಯಾಪ್ ಟಾಪ್ ಅನ್ನು ನೆಲಕ್ಕೆ ಕೆಡವಿದಾಗ ಅರ್ಧಾಂಗಿ ಕುಣಿದು ಸಂತಸಪಟ್ಟಳು ಲ್ಯಾಪ್ ಟಾಪ್ ಕತೆ ಮುಗಿಯಿತೆಂದು. ಲ್ಯಾಪ್ಟಾಪ್ಗೆ ಏನೂ ಆಗಲಿಲ್ಲ.

ಕಾಲ ಮೇಲೆ ಬೀಳಿಸಿಕೊಂಡ ಮಗಳು ಪೆಟ್ಟು ತಿಂದಳು.

ಬೆಳಗ್ಗೆದ್ದು facebook ಓಪನ್ ಮಾಡಿ ಯಾರ್ಯಾರು ಆಕಳಿಸುತ್ತಿದ್ದಾರೆ, ಯಾರು ತಮ್ಮ ಹೆಂಡತಿಯರಿಂದ ತಿವಿಸಿ ಕೊಂಡು ಬಂದಿದ್ದಾರೆ ಎಂದು ನೋಡದಿದ್ದರೆ ಸಮಾಧಾನವಿಲ್ಲ. ನಂತರ twitter ಕಡೆ ಪಯಣ. ಇವತ್ತು ಗುಬ್ಬಚ್ಚಿಗಳ ಗಡಿಬಿಡಿ ಎಂಥದು ಎಂದು ನೋಡಲು. ಅಲ್ಲೊಂದು ಸ್ವಲ್ಪ ಮನಸ್ಸಿಗೆ ತೋಚಿದ್ದು, ಮಗನ ತುಂಟತನ, ಸ್ವಲ್ಪ ರಾಜಕೀಯ ಗೀಚಿ, Newsvine ಮತ್ತು Diggs ಗಳಲ್ಲಿ ಏನಾದರೂ ಲೇಖನಗಳನ್ನು ಸೇರಿಸಿ yahoo IM ಒಂದು ಸ್ಟಾಪ್ ಕೊಡುವುದು. ಇಲ್ಲಿ ಮಿತ್ರರ ಪಡೆಯೇ ಇರುತ್ತದೆ. ಅಮೆರಿಕೆಯ, ದೂರದ ನಾರ್ವೆ, ಮೆಕ್ಸಿಕೋ ಹೀಗೆ ಹಲವು ರಾಷ್ಟ್ರಗಳ ಮಿತ್ರರಿಗೆ good morning, good ಡೇ ಹೇಳಿ ಒಂದಿಷ್ಟು ಹರಟೆ ಹೊಡೆದು sampada, kannada blogers corner, times of india, huffington post, independent, mayo clinic, NPR ಹೀಗೆ ಕೆಲವು ವೆಬ್ ತಾಣಗಳಿಗೆ ಭೆಟ್ಟಿ.

ಸೆಕ್ಸ್ ಬೇಕಾದರೂ ಬಿಟ್ಟೇನು, ಸರ್ಫಿಂಗ್ ಬಿಡೇ ಎನ್ನುವವರ ಗುಂಪಿಗೆ ನಾನು ಸೇರದಿದ್ದರೆ ಸಾಕು.

ಒಟ್ಟಿನಲ್ಲಿ monotonous ಆಗುತ್ತಿದ್ದ ನನ್ನ ಬದುಕಿಗೆ ಒಂದು ಹೊಸ ಆಯಾಮ ನೀಡಿದ ಮಾಧ್ಯಮ ಇಂಟರ್ನೆಟ್.

ಕಾರ್ಮೋಡಗಳ ತೂರಿ ಹೊಂಗಿರಣ

ಗ್ವಾನ್ಟಾನಾಮೋ ಹೆಸರು ಕೇಳದವರು ವಿರಳ. ಅಮೆರಿಕೆಯ ಹತ್ತು ಹಲವು “ಸುಂದರ” project ಗಳಲ್ಲಿ ಒಂದು guantanamo.  ಕ್ಯೂಬಾ ದೇಶದ ದ್ವೀಪದಲ್ಲಿರುವ ಈ guantanamo-iguanaತಾಣದಲ್ಲಿ ಅಮೇರಿಕ “ಶಂಕಿತ” ಭಯೋತ್ಪಾದಕರನ್ನು ಪಿಕ್ನಿಕ್ ಮೇಲೆ ಕಳಿಸುತ್ತದೆ. 9/11, 2001 ನಂತರ ಭ್ರಾಂತ ಸ್ಥಿತಿಯಲ್ಲಿರುವ ಅಮೇರಿಕೆಗೆ ತೋಚಿದ್ದು ಒಂದಿಷ್ಟು ಜನರನ್ನು guantanamo ಅಂಥ ಸ್ಥಳಗಳಿಗೆ ಕಳಿಸಿಬಿಟ್ಟರೆ ನಾವು ಲಾಸ್ ವೇಗಸ್ ನಲ್ಲಿ ಸುರಕ್ಷಿತವಾಗಿ ಕೂತು ಮಜವಾಗಿ ಜೂಜಾಡಬಹುದು ಎಂದು. ಅಮೆರಿಕೆಯ ಈ ಕ್ರಮದ ಉದ್ದೇಶ ಎಷ್ಟು ಸಫಲವಾಯಿತು ಎಂದು ಕಾಲವೇ ಹೇಳಬೇಕು. ಆದರೆ ಒಂದಂತೂ ಸತ್ಯ. ಅಲ್ಲಿನ ಸೆರೆಯಾಳುಗಳನ್ನು ಅತ್ಯಂತ ಕ್ರೂರವಾಗಿ ನಡೆಸಿಕೊಂಡರೂ, ಅದಕ್ಕಾಗಿ ವಿಶ್ವದ ಛೀ ಥೂ ಕೇಳಬೇಕಾಗಿ ಬಂದರೂ ಕಾರ್ಮೋಡಗಳ ತೂರಿ ಹೊಂಗಿರಣ ಸೂಸಲೇಬೇಕು. cuba ದ್ವೀಪದ ಕೆಲವು ಪ್ರಾಣಿಗಳು ಈಗ ಮಜವಾಗಿ ಸುರಕ್ಷಿತವಾಗಿ ಬದುಕುತ್ತಿವೆ. ನಾವು ಕೇಳದ, ಪರಿಚಯವಿಲ್ಲದ ಹಲವು ಪ್ರಾಣಿಗಳು ಈಗ ಸುರಕ್ಷಿತವಾಗಿ ಅಡ್ಡಾಡಿ ಕೊಂಡಿವೆ. ಅವುಗಳ ಹೆಸರು “Hutia”, groundhog-like rodents nicknamed banana rats and Cuban rock “iguana” (ಉಡ), ಇವರುಗಳು ಆಶ್ರಯ ಪಡೆದುಕೊಂಡ ಅದೃಷ್ಟವಂತರು. ಹುತಿಯ, ಮತ್ತು ಉಡಗಳನ್ನು ವಿಟಮಿನ್ ವಂಚಿತ ಕ್ಯುಬನ್ನರು ತಿಂದು ಖಾಲಿ ಮಾಡುತ್ತಿದ್ದರಂತೆ. ಪಾಪ ಕ್ಯೂಬಾ ಅಧ್ಯಕ್ಷ ಫಿಡೆಲ್ ಕಾಸ್ಟ್ರೋ ಕೂಳಿಗೂ ಸಂಚಕಾರ ಅಮೇರಿಕನ್ನರಿಂದ.  ಈಗ ಆ ಪ್ರಾಣಿಗಳು safe.
ಹಾಗಾದರೆ ಮನುಷ್ಯರು ಮೃಗಗಳಂತೆಯೂ, ಮೃಗಗಳು ಐಶಾರಾಮ ವಾಗಿಯೂ ನೆಲೆಸುವ ತಾಣಕ್ಕೆ ” guantanamo ” ಎಂದು ಹೆಸರು.

ಗುಳ್ಳೆ ನರಿಯ ಊಳು

ನಿನ್ನೆ ಉತ್ತರ ಕೊರಿಯಾ ವಿಶ್ವದ ಮನವಿಯನ್ನೂ ಮತ್ತು ಎಚ್ಚರಿಕೆಯನ್ನೂ ಕಡೆಗಣಿಸಿ ಕ್ಷಿಪಣಿ ಪರೀಕ್ಷಣೆ ನಡೆಸಿತು. ಉತ್ತರ ಕೊರಿಯದ ಆಸುಪಾಸಿನಲ್ಲಿರುವ ದಕ್ಷಿಣ ಕೊರಿಯಾ ಮತ್ತು ಜಪಾನ್ ಮತ್ತು ಇತರ ರಾಷ್ಟ್ರಗಳಿಗೆ ಆತಂಕ ಹುಟ್ಟಿಸಿದ ಈ ಪರೀಕ್ಷೆ ಅಮೆರಿಕೆಯ ತಾಕೀತಿನಿಂದಲೂ ನಿಲ್ಲಲಿಲ್ಲ. G20 ದೇಶಗಳ ಶೃಂಗ ಸಭೆಯಲ್ಲಿ ಭಾಗವಹಸಲು ಬಂದ ಅಮೆರಿಕೆಯ ಅಧ್ಯಕ್ಷ ಒಬಾಮ ಕೊರಿಯದ ಈ ನಿಲುವನ್ನು, ವಿಶ್ವಕ್ಕೆ ಹೊಡೆದ ಸದ್ದನ್ನು ಖಂಡಿಸಿ ಇದು ವಿಶ್ವ ಸಂಸ್ಥೆಯ ನಿರ್ಣಯಗಳಿಗೆ ವಿರುದ್ಧವಾದ ನಡವಳಿಕೆ ಎಂದು ಟೀಕಿಸಿದರು. ವಿಶ್ವ ಸಂಸ್ಥೆಯ ನಿರ್ಣಯಗಳನ್ನು ಹೇಗೆ ಪಾಲಿಸಬೇಕೆಂಬ ಪಾಠವನ್ನು ಅಮೇರಿಕ ವಿಶ್ವಕ್ಕೆ ಹೇಳಿ ಕೊಡುವ ಅರ್ಹತೆಯನ್ನು ಎಂದೋ ಕಳೆದುಕೊಂಡಿತು. ಕಳೆದ ೩೦ ವರ್ಷಗಳಲ್ಲಿ ಸತತವಾಗಿ ತನ್ನ ದುಸ್ಸಾಹಸಗಳಿಗೆ ಮತ್ತು ತನ್ನ ಆಪ್ತ ಮಿತ್ರ ಇಸ್ರೇಲ್ ನ ಪುಂಡಾಟಿಕೆಗೆ  ಅಡ್ಡ ಬರುವ ವಿಶ್ವ ಸಂಸ್ಥೆಯ ನಿರ್ಣಯಗಳನ್ನು ರಾಜಾರೋಷವಾಗಿ ಉಲ್ಲಂಘಿಸುತ್ತಾ ಬಂದ ಅಮೇರಿಕ ಈಗ ಉತ್ತರ ಕೊರಿಯಾಕ್ಕೆ ಉಪದೇಶ ಹೇಳಲು ಹೊರಟಿದ್ದು ಹಾಸ್ಯಸ್ಪದವೇ.

ಸುಳ್ಳಿನ ಕಂತೆಗಳ ಆಧಾರದ ಮೇಲೆ, ತನ್ನ ಬಾಲಂಗೋಚಿ ಮಿತ್ರ ಇಂಗ್ಲೆಂಡ್ನೊಂದಿಗೆ ಸೇರಿ ಇರಾಕನ್ನು ಸರ್ವ ನಾಶ ಮಾಡಿದ ಅಮೇರಿಕ ಅಂದಿನ  ವಿಶ್ವ ಸಂಸ್ಥೆಯ ನಿರ್ಣಯಗಳನ್ನು ಮಾತ್ರವಲ್ಲ, ವಿಶ್ವ ರಾಷ್ಟ್ರಗಳ ಮನವಿಗಳನ್ನು ಧಿಕ್ಕರಿಸಿ ಲಕ್ಷಾಂತರ ಜನರನ್ನು ಇರಾಕಿನಲ್ಲಿ ವಧಿಸಿತು. ಅಮೆರಿಕೆಯ ಈ ಎಲ್ಲಾ ಗೂಂಡಾ ವರ್ತನೆಗಳಿಗೆ ಸಾಕು ನಾಯಿಯಂತೆ ಬೆಂಬಲಕ್ಕೆ ನಿಂತದ್ದು ಇಂಗ್ಲೆಂಡ್. ಈ ಎರಡು ರಾಷ್ಟ್ರಗಳ ಪುಂಡಾಟಿಕೆಗಳಿಗೆ ಇತಿಶ್ರೀ ಹಾಡದಿದ್ದರೆ ವಿಶ್ವ ಇನ್ನಷ್ಟು ಗಂಡಾಂತರವನ್ನು ಎದುರಿಸಬೇಕಾದೀತು.

ತಡವಾಗಿ ಬಂದ ಮರುಕ

ಅಮೆರಿಕೆಯ ಎಲ್ವಿನ್ ಹೋಪ್ ವಿಲ್ಸೋನ್ನಿನ ಫೋನು ಒಂದೇ ಸಮನೆ ದಿನವಿಡೀ ರಿಣಗುಟ್ಟುತ್ತಿತ್ತು. ಯಾರೀ ಎಲ್ವಿನ್? ನಟನಾ? ರಾಜಕಾರಣಿಯಾ ಅಥವಾ ಖ್ಯಾತ base ಬಾಲ್  ಆಟಗಾರನಾ? ಅಲ್ಲ, ಆತ ನಮ್ಮ ನಿಮ್ಮಂಥ obba  ಸಾಧಾರಣ ಮನುಷ್ಯ, ordinary folk. ಹಾಗಾದರೆ ಅವನಿಗೇಕೆ ಇಷ್ಟೊಂದು ಪಬ್ಲಿಸಿಟಿ. ಯಾಕೆಂದರೆ ಆತನಲ್ಲಿರು ಅಪರೂಪದ ಗುಣ. ಅದೆಂದರೆ ಕರಿಯರನ್ನು ಕಂಡರೆ ಕೆಂಡಾ ಮಂಡಲನಾಗುವುದು. ಯಾವುದೇ ಕಾರಣವಿಲ್ಲದಿದ್ದರೂ ಕರಿಯರನ್ನು ಹೀಗಳೆಯುತ್ತಿದ್ದ, ಸಿಡಿಮಿಡಿಗೊಳ್ಳುತ್ತಿದ್ದ. ದಾರಿ ಹೋಕರನ್ನೂ, ತನ್ನ ಪುತ್ರನ ಸ್ನೇಹಿತರನ್ನೂ ಬಿಡುತ್ತಿರಲಿಲ್ಲ ಆತ.

ಈಗ ೭೧ ವಯಸ್ಸಿನ, ಡಯಾಬಿಟಿಸ್ ರೋಗದಿಂದ ನರಳುತ್ತಿರುವ ಈತನಿಗೆ ಬಂತು ತಡವಾಗಿ ಬುದ್ಧಿ. ಈತನ ಈ ಕರಿಯರನ್ನು ದ್ವೇಷಿಸುವ ಗುಣದಿಂದ ರೋಸಿ ಹೋಗಿದ್ದ ಆತನ ಮಗನಿಗೆ ಈಗ ತಂದೆಯ ಮೇಲೆ ಅಭಿಮಾನ. ತಡವಾಗಿಯಾದರೂ ತಿದ್ದಿ ಕೊಂಡನಲ್ಲ ಅಪ್ಪ ಎಂದು.   

೬೦ರ ದಶಕದವರೆಗೂ ಕರಿಯರನ್ನು ಪೀಡಿಸುವುದು ಬಿಳಿಯರಿಗೆ ಒಂದು ಮೋಜು. ಬಸ್ಸಿನಲ್ಲಿ ಮುಂದಿನ ಬಾಗಿಲಿನಿಂದ ಹತ್ತುವಂತಿಲ್ಲ, ಶಾಲೆಗಳಲ್ಲಿ ಪ್ರವೇಶವಿಲ್ಲ. ಕರಿಯರ ಚರ್ಚೇ ಬೇರೆ, ಕೆಲಸ ಸಿಗುವುದು ಅಪರೂಪ. ಇಂಥ ವಾತಾವರಣದಲ್ಲಿ ಬೆಳೆದ ಎಲ್ವಿನ್ ಮಿತ್ರರೊಂದಿಗೆ ಸೇರಿ ಕರಿಯರನ್ನು ಹೊಡೆಯುವುದು, ಅಪಹಾಸ್ಯ ಮಾಡುವುದು ಕಲಿತ. ಅಷ್ಟು ಮಾತ್ರ ಅಲ್ಲ, ಕರಿಯರನ್ನು, ಯಹೂದಿಗಳನ್ನು ಧ್ವೇಷಿಸುವುದೇ ಕಸುಬಾಗಿಸಿಕೊಂಡ ku klux klan ಎಂಬ ಸಂಘಟನೆಯ ಸದಸ್ಯನೂ ಆಗಿದ್ದ. ಈ ರೀತಿಯ ಕರಿಯರನ್ನು ದ್ವೇಷಿಸುವ ಚಾಳಿ ಎಲ್ಲಿಂದ ಬಂತು ಎಂದು ಕೇಳಿದಾಗ ತನಗೆ ಗೊತ್ತಿಲ್ಲ ಆದರೆ ತನ್ನ ತಂದೆ ku klux klan ಸದಸ್ಯ ಆಗಿದ್ದ ಎಂದು ಉತ್ತರವಿತ್ತ.

ಈತನ ಔದಾರ್ಯವನ್ನು ಮೆಚ್ಚಿ ಪತ್ರಗಳ ಮಹಾಪೂರವೂ, ಪ್ರಶಂಸಿಸುವ ಮಾತುಗಳೂ ಕೇಳಿ ಬರುತ್ತಿವೆ.

ಈತನ bio data ದಲ್ಲಿ ಬರೀ ಕರಿಯರನ್ನು ಹೀಯಾಳಿಸಿದ ಕಥೆಯಲ್ಲದೆ ಇನ್ನೂ ಹಲವು ಘಟನೆಗಳಿವೆ. ಕರಿಯರ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಒಬ್ಬ ನಾಯಕನ ಮೇಲೆ ಹಲ್ಲೆ, ಕರಿಯರ ಮೇಲೆ ಮೊಟ್ಟೆ ಮತ್ತಿತರ ವಸ್ತುಗಳನ್ನು ಎಸೆಯುವುದು, ಯಾವನಾದರೂ ಕರಿಯ ಈತನೊಂದಿಗೆ ಮಾತಿಗೋ, ತಗಾದೆಗೋ ನಿಂತರೆ ಹಿಗ್ಗಾ ಮುಗ್ಗಾ ಥಳಿಸುವುದು, ಶಾಲೆಗೆ ಹೋಗುವ ವಿದ್ಯಾರ್ಥಿಗಳನ್ನು ಅಪಮಾನಿಸುವುದು ಹೀಗೆ ಒಂದೇ ಎರಡೇ ಈ ಮನುಷ್ಯನ ಹೆಗ್ಗಳಿಕೆಗಳು.

ಕೊನೆಗೆ,  ಈ ಇಳಿ ವಯಸ್ಸಿನಲ್ಲಿ ಜ್ಞಾನೋದಯವಾಗಲು ಕಾರಣವೇನೆಂದು ಕೇಳಿದಾಗ, ಈ ಪಾಪವನ್ನು ಹೊತ್ತು ಸ್ವರ್ಗ  ಸೇರಲು ಸಾಧ್ಯವಿಲ್ಲ, ಅದಕ್ಕಾಗಿ ನಾನು ಪೀಡಿಸಿದವರನ್ನೆಲ್ಲಾ ಭೆಟ್ಟಿಯಾಗಿ ಕ್ಷಮೆ ಕೇಳುತ್ತಿದ್ದೇನೆ ಎನ್ನುತ್ತಾನೆ ಎಲ್ವಿನ್.

ಕಾಲ ನೋಡಿ ಹೇಗೆ ಬದಲಾಯಿತು. ಅಂದಿನ ಸ್ಥಿತಿಗೂ ಇಂದಿನ ಸ್ಥಿತಿಗೂ ಎಷ್ಟೊಂದು ವ್ಯತ್ಯಾಸ. ಕರಿಯರು ಇಂದು ಎಲ್ಲಾ ರಂಗಗಳಲ್ಲೂ ಮುಂದುವರೆದಿದ್ದಾರೆ.

ಈಗ ಅಮೇರಿಕೆಗೆ ಒಬ್ಬ ಕರಿಯ ಅಧ್ಯಕ್ಷ. world’s most powerful man, a black.   

body shopping

beauty-treatmentಮಹಿಳೆ ಮತ್ತು ಮೇಕ್ ಅಪ್ಪು ಅನ್ನುವುದು ಅವಳಿಜವಳಿಗಳು. ಮೇಕ್ ಅಪ್ ಇಲ್ಲದೆ ಹೊರಗಡಿ ಇಡಲು ಅಸಾಧ್ಯ. ಗಂಡಿಗೂ ಅಷ್ಟೇ, ಸೌಂದರ್ಯ ಎಂದ ಕೂಡಲೇ ಮಲೆನಾಡಿನ ಸುಂದರ ಬೆಟ್ಟ ಗುಡ್ಡಗಳೋ , ಪಚ್ಚೆ ಪೈರೋ, ರಮಣೀಯ ಜಲಪಾತವೋ ಕಣ್ಣ ಮುಂದೆ ಬರುವುದಿಲ್ಲ, ಬದಲಿಗೆ ಬರುವುದು ವೈಯಾರದ ನಟಿಯರು, ಮೊಡೆಲ್ಲುಗಳು. ಈ ಮೇಕ್ ಅಪ್ ನ ಹಾವಳಿ ಮೊದಲು beauty parlour ಗೆ ಹೋಗಿ ಬಣ್ಣ ಬಳಿದುಕೊಂಡು ಬರುವುದಕ್ಕಷ್ಟೇ ಸೀಮಿತವಾಗಿತ್ತು. ಈಗ ಹಾಗಲ್ಲ, ಕಾಲ ಬದಲಾಗಿದೆ, ಅದರೊಂದಿಗೆ ಒಂದಿಷ್ಟು ಕಾಂಚಾಣ ಸಹ ಓಡಾಡಲು ಆರಂಭಿಸಿದೆ. ಈಗ ಮಹಿಳೆಯರು ಮೊರೆ ಹೋಗುತ್ತಿರುವುದು operation theatre ಗೆ. beauty parlour, operation theatre ಆಯಿತು. ಹೇಗೆ ಅಂತೀರಾ? ಸುಂದರ ನಟಿಯರನ್ನು ನೋಡಿ ತಮಗೂ ಅವರಂತೆ ಆಗ ಬೇಕೆಂಬ ಆಸೆ ಮಹಿಳೆಯರು ತಮ್ಮ ಅಂಗಾಂಗಗಳನ್ನು surgical knife ಅಡಿ ಒಡ್ಡಿ ರಿಪೇರಿ ಮಾಡಿಸಿ ಕೊಳ್ಳಲು ಪ್ರೇರೇಪಿಸುತ್ತಿದೆ.  ಶ್ರೀ ದೇವಿಯಂಥ ಮೂಗು ಬೇಕೇ? ಐಶ್ವರ್ಯಳ ಗಲ್ಲ ಬೇಕೇ? why not? Botox ಅನ್ನೋ ಚಿಕಿತ್ಸೆ ಯಾಕೆ? ಮುಖದ ಒಂದು ಭಾಗ ಕೊಯ್ದು gel ತುಂಬಿದರೆ ಆದಳು ಐಶ್ವರ್ಯ. ಕಾಲುಗುರು ವಕ್ರ ವಾಗಿದೆಯ? ಇದೆಯಲ್ಲ, toenail repair. ಮೇಡಂ, ಹೌ ಅಬೌಟ್ “tummy tucking?”  ಇದು ವಾಶ್ ಬೋರ್ಡ್ ನಂಥ ಉದರಕ್ಕೆ. breast augmentation ತುಂಬಿದ ಎದೆಗಾಗಿ. ನಡುವಿನ ತುಂಬಾ ಕೊಬ್ಬು ತುಂಬಿ ಕೊಂಡಿದೆಯಾ? liposuction is simple. nuisance ಎಲ್ಲಿಗೆ ಬಂತು ತಲುಪಿದೆ ಅಂದ್ರೆ ಈಗ eye lash extension ಸಹ ಮಾಡ್ತಾರೆ. ಅಂದ್ರೆ ಕಣ್ ರೆಪ್ಪೆಗಳನ್ನು ಬೇಕಾದ ಅಳತೆಗೆ ಕತ್ತರಿಸಿಯೋ, ಅಂಟಿಸಿಯೋ ಮಾಡುವ ಚಿಕಿತ್ಸೆ.

ತನ್ನತನ ಅನ್ನೋದು ಬೇಡ ಅಂತಾನ? OK, ಇದು ನನ್ನ ಶರೀರ, ನನ್ನ ದುಡಿಮೆ ನಿನಗ್ಯಾಕೆ ಬೇಡದ ಉಸಾಬರಿ ಅನ್ನೋದಾದರೆ ಅನ್ನಿ ಪರವಾಗಿಲ್ಲ. ತಮ್ಮನ್ನು ನೋಡಿ ಅನುಕರಿಸಲಿಚ್ಚಿಸುವ ಮಕ್ಕಳ ಕತೆ? ಮಕ್ಕಳಿಗೆ ತಂದೆ ತಾಯಿಯರಲ್ವೆ role models? ತನ್ನ ರೂಪದ ಬಗೆಗಿನ ಕೀಳರಿಮೆಯಿಂದ ತಾಯಿ ಹೀಗೆ ತನ್ನ ಮೂಗು, ತುಟಿ, ಉಗುರು ಕತ್ತರಿಸಿಕೊಳ್ಳುತ್ತಾ ಸಾಗಿದರೆ ಅದನ್ನು ನೋಡುವ ಮಕ್ಕಳಿಗೆ ಅನ್ನಿಸೋದಿಲ್ವೇ ರೂಪವೇ ಮುಖ್ಯ, ರೂಪಕ್ಕೇ ಮೊದಲ ಆಧ್ಯತೆ ಕೊಡಬೇಕೆಂದು? 

ಮೇಲೆ ಹೇಳಿದ procedures ಒಂಥರಾ body shopping ಹಾಗೆ ಕಾಣುವುದಿಲ್ಲವೇ? ನನ್ನನ್ನು ಕೇಳಿದರೆ, ನನಗನ್ನಿಸುವುದು ಇದೊಂಥರಾ post mortem ಅಂತ. live post mortem!

ಆಧುನಿಕ ನಾರಿಗೆ ಜೈ ಹೋ!

mother-in-law sandwich

sandwichಬೆಳ್ಳಂ ಬೆಳಗೇ, ದಾರಿ ಬಿಡು…. ಅತ್ತೆ ಸ್ಯಾಂಡ್ವಿಚ್ಗೆ ದಾರಿ ಬಿಡು. ಏನಣ್ಣ, ಅತ್ತೆ ಸ್ಯಾಂಡ್ವಿಚ್ ಅಂತೀಯ? ಮೊನ್ನೆ ತಾನೇ intercourse ಆಯಿತು, ಈಗೇನು ಹೊಸ ವರಸೆ?

ವರಸೆ ಗಿರಸೆ ಏನೂ ಇಲ್ಲ, ಸುಮ್ನೆ ಶಕುನಿ ಥರ ಪಾರ್ಟಿ ಹಾಳು ಮಾಡದೆ ತಿಂದು ಹೋಗು ಸ್ಯಾಂಡ್ವಿಚ್ನ.

ಅಮೆರಿಕೆಯ ಶಿಕಾಗೋ ನಗರದಲ್ಲಿ ಮಾರಲ್ಪಡುತ್ತದೆ  “mother-in-law sandwich. ಎಳ್ಳು ಲೇಪಿತ ಬನ್ನಿನೊಳಗೆ ಮಸಾಲೆ ಮತ್ತು ಮೆಕ್ಸಿಕೋ ಶೈಲಿಯ “ಟಮಾಲೀ” ಅನ್ನುವ ಮಾಂಸದ ಪದಾರ್ಥದೊಂದಿಗೆ ತಯಾರಿಸುವ ಈ ಸ್ಯಾಂಡ್ವಿಚ್ ಬಹು ಜನಪ್ರಿಯ. ಆದರೆ ಹೆಸರೇಕೆ ಹೀಗೆ ಎಂದರೆ ಯಾರಲ್ಲೂ ಉತ್ತರವಿಲ್ಲ.

ಬಹುಶಃ ಅತ್ತೆ, ತನ್ನ ಮಗಳು ಭದ್ರವಾಗಿರಲೆಂದು ಪ್ರೀತಿಯಿಂದ ಅಳಿಯಂದಿರಿಗೆ ಮಾಡಿ ಕೊಡುವ ಅಡುಗೆ ಹೇಗೆ ರುಚಿಕರವೋ ಹಾಗೆ ಈ ತಿಂಡಿಯೂ ಅಷ್ಟೇ ರುಚಿಕರವಾಗಿರಬೇಕು. ಅದಕ್ಕೇ ಇರಬೇಕು ಈ ಹೆಸರು.

ಮಗಳು ತನ್ನ ಗಂಡನೆಡೆಗೆ ಬಿಸುಡುವ ಅಡುಗೆಗಿಂತ ಅತ್ತೆಯ ಊಟ ಬಹು ರುಚಿಕರ ಅಲ್ವೇ?

ಸ್ಯಾಂಡ್ವಿಚ್ ಎನ್ನುವ ಪದ ಬಂದಿದ್ದು ಇಂಗ್ಲೆಂಡಿನಿಂದ. ಸ್ಯಾಂಡ್ವಿಚ್ ಒಂದು ಪ್ರದೇಶ. ಅಲ್ಲಿಯ ಆಳುವ ಮನೆತನಕ್ಕೆ ಸೇರಿದ ಜಾನ್ ಮೊಂಟಗು ಬ್ರೆಡ್ ನೊಳಗೆ ಮಾಂಸ ಇಟ್ಟು ತಿನ್ನುತ್ತಿದ್ದರಿಂದ ಆತನ ಹೆಸರು ತಿಂಡಿಗೆ ಬಂದಿತು.  

ಸ್ಯಾಂಡ್ವಿಚ್ನ ಸರಿಯಾದ ಉಚ್ಛಾರ “ಸ್ಯಾನ್ವಿಜ್” ಎಂದು. ‘d’ ಉಚ್ಚಾರವಾಗುವುದಿಲ್ಲ.

ಒಂದೆತೆರನಾದ ಎರಡು ವಸ್ತುಗಳ ನಡುವೆ ಬೇರೆಯದೊಂದನ್ನು ಇಟ್ಟಾಗ ಅದು sandwich ಎನಿಸಿಕೊಳ್ಳುತ್ತದೆ.sandwich-girls

A motorbike got  sandwiched between two speeding trucks.

I was “sandwich”ed between two pretty girls in the train. ಆಹಾ, ತುಂಟ ಆಸೆಯೇ.          

ಬನ್ನಿ, intercourse ಗೆ…

ಬನ್ನಿ, intercourse ಗೆ… ಹೇಯ್ ಏನಯ್ಯಾ ತಲೆ ಗಿಲೆ ಸರಿ ಇದ್ಯೋ ಇಲ್ವೋ? ಬ್ಲಾ, ಬ್ಲಾ, ಬ್ಲಾ… ತಡಿಯಪ್ಪ, ಹಾಡು ಕೇಳಿಲ್ವಾ, ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು. intercourse1

intercourse  ಅಮೆರಿಕೆಯ ಪೆನ್ಸಿಲ್ವೇನಿಯಾ ರಾಜ್ಯದ ಲಂಕಾಸ್ಟೆರ್ ವ್ಯಾಪ್ತಿಯ ಹಳ್ಳಿಯ ಹೆಸರು. ಅರಚಾಡದೆ, ಕೋಪಗೊಳ್ಳದೆ ಕೇಳೋದಾದರೆ ಇನ್ನಷ್ಟು ಹೆಸರುಗಳಿವೆ ಮಡಿವಂತರನ್ನು ಮೈಲು ದೂರ ಓಡಿಸಲು.

fucking ಅಂತ ಒಂದು ಹಳ್ಳಿ, ಆಸ್ಟ್ರಿಯ ದಲ್ಲಿ. ಈ ಹೆಸರಿನ ನಾಮಫಲಕದ ಮುಂದೆ ಭಾವಚಿತ್ರ ತೆಗೆಸಿಕೊಳ್ಳಲು ಪ್ರವಾಸಿಗಳು ಆಸಕ್ತರು. ನೂರಾರು ವರ್ಷಗಳ ಹಿಂದೆ fockers ಎನ್ನುವ ಕುಟುಂಬಸ್ತರು ಇಲ್ಲಿ ವಾಸವಾಗಿದ್ದರಂತೆ, ಅದಕ್ಕೆ ಹಾಗಂತ ಹೆಸರು.

convict hill, slaughter lane (ಚಾರ್ಲ್ಸ್ ಶೋಭರಾಜ್ ಗೆ ಇಷ್ಟವಾಗಬಹುದು), ಇವು ಟೆಕ್ಸಾಸ್ ನ ಸ್ಥಳಗಳು.

middle fart ಡೆನ್ಮಾರ್ಕ್ ನಲ್ಲಿ.

ಅಣ್ಣೆಪ್ಪ, ನಿಂಗೆ ಒಳ್ಳೆ ಹೆಸರಾವುದೂ ಕಾಣೋಲ್ವೋ ಹೇಗೆ?

ಖಂಡಿತ ಕಾಣುತ್ತೆ. hot coffee, no name ಅಮೆರಿಕೆಯಲ್ಲಿ ಇರುವಂಥವು. normal, OK ಸಹ ಅಮೆರಿಕೆಯವು.

ಇನ್ನು ಸ್ವದೇಶಕ್ಕೆ ವಾಪಸಾಗೋಣ. ಜೋಡಿ ಗುಬ್ಬಿ, ಚಿಕ್ಕಮಗಳೂರು, ಸೋಮವಾರಪೇಟೆ, ಬೆಂದಕಾಳೂರು (ಈಗ ಬೆಂಗ್ಳೂರು). ನನ್ನ ಹುಟ್ಟೂರು ಭದ್ರಾವತಿ ಒಂದೊಮ್ಮೆ ಬೆಂಕಿಪುರ ಆಗಿತ್ತಂತೆ. ನಿಮಗೂ ಸ್ವಾರಸ್ಯಕರವಾದ ಹೆಸರುಗಳು ಗೊತ್ತಿದ್ದರೆ ಬರೆಯಿರಿ.     

ಒಂದು ಎರಡು ಬೇಕು…

family-planningಒಂದು ಎರಡು ಬೇಕು ಮೂರು ಮಕ್ಕಳು ಸಾಕು. ೭೦ ರ ದಶಕದಲ್ಲಿ ನಮ್ಮ ನಿಶಾ ಚಟುವಟಿಕೆ ಜೋರಾದಾಗ ಸರಕಾರ ನಿಷೇಧಾಜ್ಞೆ ಜಾರಿ ಮಾಡಿದ್ದು ಹೀಗೆ. ತದನಂತರ ಇಲಿ ಹೆಗ್ಗಣಗಳು FCI ಗೋಡೌನ್ನಿನ ದವಸ ಧಾನ್ಯಗಳನ್ನು ನುಂಗಿ ಹಾಕಿದಾಗ ಆ ಪ್ರಮಾದವನ್ನು ಮರೆಮಾಚಲು ಮತ್ತೊಂದು ಬಾಣ ಬಿಟ್ಟಿತು ಸರಕಾರ; food grain shortage ಇದೆ, ಮ್ಯಾಟಿನೀ, ಫರ್ಸ್ಟ್ ಶೋ ಎರಡು ದೆಖಾವೆಗಳು ಸಾಕು, ಆರತಿಗೊಬ್ಬ, ಕೀರ್ತಿಗೊಬ್ಬಳು ಅಂತ. ಸ್ವಲ್ಪ ವರ್ಷಗಳ ನಂತರ ರಾಜೀವ್ ಗಾಂಧಿಯ ವಿದೇಶ ಪ್ರವಾಸ ಜಾಸ್ತಿಯಾಗಿ ಮುಂದುವರಿದ ರಾಷ್ಟ್ರಗಳನ್ನು ನೋಡಿ one is fun ಎಂದು ನಮ್ಮ ಚೇಷ್ಟೇಗಳಿಗೆ ಪೂರ್ಣ ವಿರಾಮ ಹಾಕಿತು. ಇದ್ಯಾವುದರ ರಗಳೆಯೂ ಬೇಡ let us find middle course ಎಂದು ೨ ಮಕ್ಕಳಿಗೆ ಇನಿಂಗ್ಸ್ ಡಿಕ್ಲೇರ್ ಮಾಡಿದೆವು ನಾವು.

ಪಾಲಿಗೆ ಬಂದಿದ್ದು…

ಆಫೀಸಿನಿಂದ ಸಂಜೆ ಮನೆಗೆ ಬಂದೆ. ೫ ವರುಷದ ನನ್ನ ಮಗ ಹಿಶಾಮ್ ಮಿತ್ರನ ಪಾರ್ಟಿಗೆ ಮಾಲಿಗ್ ಹೋಗಿದ್ದ. ೧ ವರ್ಷದ hyper active ಪುತ್ರಿ “ಇಸ್ರಾ”  ನಿದ್ದೆ ಹೋಗಿದ್ದಳು. ಲ್ಯಾಪ್ಟಾಪ್ ತೆರೆದು ಇನ್ನೂ ಕೂತಿಲ್ಲ, ಒಳಗೆ ಬಂದ ಕೂಡಲೇ ಶುರುವಾಯಿತಾ ನಿಮ್ಮದು ಎಂದು ಮಡದಿ ದೂರಿದಳು. ಮಕ್ಕಳಿಲ್ವಲ್ಲಾ, ಅದಕ್ಕೇ ಎಂದೆ. ಕೆರಳಿದ ಆಕೆ, ನಾನೇನೂ ಮೂಕಿಯಾ ಮಾತನಾಡದೆ ಇರೋಕೆ ಅಥವಾ ಸತ್ತಿದ್ದೀನ ಎಂದು ಮೇಲೆ ಬಿದ್ದಳು. ಅವಳ ರೂಪ ಕಂಡು ಬೆದರಿದ ನಾನು ನನ್ನ ಲ್ಯಾಪ್ ಟಾಪಿಗೆ ಏನೋ ಬಂದಿದೆ ಗ್ರಹಚಾರ ಎಂದು ಕೂಡಲೇ ಅದನ್ನು ಮಡಚಿ ಅವಳೊಂದಿಗೆ ಮಾತಿಗಿಳಿದೆ.

ಅಲ್ಲಾ, ಎಲ್ರ ಹೆಂಡ್ರೂ ಹೀಗೋ ಅಥವಾ ನನ್ನ ಪಾಲಿಗೆ ಬಂದ ಪ್ರಸಾದ ಮಾತ್ರ ಹೀಗೋ, ಕೊಂಚ ಬಿಡಿಸಿ ಹೇಳಣ್ಣ.           

ಗೋಲ್ಡಿನ ಗೋಳು

Truth is the first casualty in war, ಹಾಗಂತ ಒಂದು ಕಹಾವತ್ ಇದೆ. ಸತ್ಯವೂ ಹೌದು. ಆದರೆ ಈ ಆಧುನಿಕ ಯುಗದಲ್ಲಿ gold is the first casualty, ಏನಂತೀರಾ? ಕೆಲ ವರ್ಷಗಳ ಹಿಂದೆ ನನ್ನ ಸಂಬಂಧಿಯೊಬ್ಬರು ಆತುರದಿಂದ ಎಲ್ಲೋ ಹೊರಟಿದ್ದ ನನ್ನನ್ನು ತಡೆದು  ಕೇಳಿದರು, ಅಲ್ಲಾ, ಅಮೆರಿಕೆಯಲ್ಲಿನ ಕಟ್ಟಡಗಳು ಉರುಳಿದಾಗ (sept 11,2001) ಚಿನ್ನದ ಬೆಲೆ ಏಕೆ ತಾರಕಕ್ಕೇರಿತು ಅಂತ. ನನಗೆ ಒಂದೆಡೆ ನಗು, ಅಲ್ಲಿ ಜನ ಸತ್ತು ಬಿದ್ದಿದ್ದಾರೆ, ಇಲ್ಲಿ ನೋಡಿದರೆ ಈ ಎಪ್ಪನಿಗೆ ಚಿನ್ನದ ಚಿಂತೆ. ಮತ್ತೊಂದೆಡೆ ಅವರ ದುಗುಡವೂ ಅರ್ಥವಾಗುವಂಥದ್ದೇ. ೩ ಹೆಣ್ಣು ಮಕ್ಕಳ ತಂದೆ ಆತ. ಚಿನ್ನದ ಬೆಲೆ ಗಿಲೆ ನೋಡದೆ ನಾಚಿಕೆ ಬಿಟ್ಟು ಅಷ್ಟು ತೊಲ ಕೊಡು, ಇಷ್ಟು ತೊಲ ಕೊಡು ಅಂತ ತೋಳಗಳ ರೀತಿ ಹರಿದು ತಿನ್ನುತ್ವೆ ಮದುವೆ ಆಗುವ ಗಂಡು ಎನ್ನಿಸಿ ಕೊಂಡವನ ಮಾತಾ, ಪಿತರು.

ಈಗ ಗೋಲ್ಡ್ ಏಣಿಯ ಸಹಾಯವೇ ಇಲ್ಲದೆ ಅಟ್ಟ ಹತ್ತಿ ಕೂತಿದೆ. ಕಾರಣ credit crunch, financial turmoil, market woes, ಆಹಾ ಎಂತೆಂಥ ಹೆಸರುಗಳು ನಮ್ಮ ಮೇಲೆ ನಾವೇ ತಂದುಕೊಂಡ ಅನಿಷ್ಟಗಳಿಗೆ. ಅತಿಯಾಸೆ, ಮಿತಿಮೀರಿದ ಖರ್ಚು, ಆದಾಯಕ್ಕಿಂತ ಹೆಚ್ಚಿನ ಶಾಪಿಂಗ್ ಟ್ರಿಪ್ಗಳು, ಬ್ಯಾಂಕುಗಳ, ಕಂಪೆನಿಗಳ ಕಳ್ಳ ವಹಿವಾಟು ಇತ್ಯಾದಿ, ಇತ್ಯಾದಿ.

ಮಾಡಿದ್ದುಣ್ಣೋ ಮಹಾರಾಯ…