ವಿಶ್ವ ರೂಪವೋ, ನಿಜ ರೂಪವೋ? ವಿಶ್ವರೂಪಂ ಚಿತ್ರ ಈಗ ವಿವಾದದಲ್ಲಿ. ಕಮಲ್ ಹಾಸನ್ ನಿರ್ಮಿತ ಈ ಚಿತ್ರ ಮುಸ್ಲಿಂ ಸಮುದಾಯವನ್ನು ಕೀಳಾಗಿ ಬಿಂಬಿಸಿದೆ ಎಂದು ಅದರ ವಿರುದ್ಧ ಮುಸ್ಲಿಂ ಸಾಂಸ್ಕೃತಿಕ ಸಂಘಟನೆಗಳು ತಮಿಳು ನಾಡಿನಲ್ಲಿ ಪ್ರದರ್ಶನ ನಡೆಸುತ್ತಿವೆ.
ಕಮಲ ಹಾಸನ್ ಓರ್ವ ಪ್ರತಿಭಾವಂತ ನಟ, ಆತನ ಪ್ರತಿಭೆಯ ಮಟ್ಟವನ್ನು ಗಣನೆಗೆ ತೆಗೆದುಕೊಂಡರೆ ಆತ ಬಾಲಿವುಡ್ ನಲ್ಲಿ ಮಹಾ ತಾರೆಯಾಗ ಬಹುದಿತ್ತು ಎಂದು ಸಿನಿ ಪ್ರಿಯರ ಅಭಿಪ್ರಾಯ. ದಕ್ಷಿಣ ಭಾರತೀಯನಾದ ಒಂದೇ ಕಾರಣಕ್ಕೆ ಆತ ಬಾಲಿ ವುಡ್ ನಲಿ ಮಿಂಚಲು ಆಗಲಿಲ್ಲ ಎಂದು ಆತನ ಅಭಿಮಾನಿಗಳ ಅಂಬೋಣ. ಆದರೆ ಬಾಲಿವುಡ್ ಗೆ ದಕ್ಷಿಣದ ಷೋಡಶಿಯರ ಬಗ್ಗೆ ತಕರಾರಿಲ್ಲ, ಪ್ರಾಬ್ಲಂ ಇರೋದು ‘ನಟ’ರ ಬಗ್ಗೆ ಮಾತ್ರ ಇರಬೇಕು.
ಕಮಲ ಹಾಸನ್ ಓರ್ವ ಟ್ಯಾಲೆಂಟೆಡ್ ನಟ ಎಂದು ನಾನೂ ಒಪ್ಪುತ್ತೇನೆ. ನಾನು ಅವನ ಚಿತ್ರ ನೋಡಿದ್ದು ಒಂದೇ ಒಂದು; ‘ಮರೋ ಚರಿತ್ರ’. ಈ ತೆಲುಗು ಚಿತ್ರ ದೊಡ್ಡ ದಾಖಲೆಯನ್ನೇ ಸೃಷ್ಟಿಸಿತ್ತು ೧೯೭೯ ರ ಸುಮಾರಿನಲ್ಲಿ. ಭಾವುಕತೆಗೆ, ಭಾವನೆಗೆ, ಭಾಷೆಯ ತೊಡಕು ಇಲ್ಲ ಎಂದು ಈ ಚಿತ್ರ ಅಮೋಘವಾಗಿ ಸಾರಿತ್ತು. ಚಿತ್ರದ ಕೊನೆಯಲ್ಲಿ ಹೀರೋ ಮತ್ತು ಹೀರೋಯಿನ್ ಸಾವನ್ನಪ್ಪುವ ದೃಶ್ಯ ಮನ ಕಲಕುವಂತಿತ್ತು.
‘ಮರೋ ಚರಿತ್ರ’ ಚಿತ್ರದ ನಂತರ ಕಮಲ ಹಾಸನ್ ದಕ್ಷಿಣದಲ್ಲಿ ದೊಡ್ಡ ಹೆಸರನ್ನೇ ಮಾಡಿದ. ಈಗ ವಿವಾದದ ಸುಳಿಯಲ್ಲಿ ಸಿಲುಕಿದ್ದಾನೆ, ವಿಶ್ವರೂಪಂ ಚಿತ್ರದ ಮೂಲಕ. ಸುಲಭ ಹಣ ಗಳಿಸಲು ಈತ ಒಂದು ಸಮುದಾಯದವರ ಭಾವನೆಗಳನ್ನು ಘಾಸಿ ಗೊಳಿಸಲು ಏ ಚಿತ್ರ ಮಾಡಿರ ಬಹುದೇ ಎನ್ನುವ ಸಂಶಯ ಜನರಲ್ಲಿ. ಪತ್ರಿಕೋದ್ಯಮದಲ್ಲೂ, ಸಾಹಿತ್ಯ ಕ್ಷೇತ್ರದಲ್ಲೂ ಹಗೆ, ಸಂಶಯ, ಧ್ವೇಷ, ಹರಡಲು ಟೊಂಕ ಕಟ್ಟಿ ನಿಂತ ಸಮೂಹದ ಜೊತೆ ಸಿನಿಮಾ ಮಂದಿಯೂ ಸೇರಿಕೊಂಡಾಗ ಆಗುವ ಪರಿಣಾಮ ನೆನೆದರೆ ಮೈ ನಡುಗುತ್ತದೆ.
Uncategorized
ಕೋಣೆಯೊಳಗಿನ ಆನೆ
ಕೋಣೆಯೊಳಗೆ ಆನೆ. ಕಣ್ಣ ಮುಂದೆ ಧುತ್ತೆಂದು ಪ್ರತ್ಯಕ್ಷ ವಾಗಿದ್ದರೂ, ಅಥವಾ ಕಂಡೂ ಕಾಣದಂತೆ ಇದ್ದು ಅದರ ಉಪಸ್ಥಿತಿ ಕೋಣೆ ಯಲ್ಲಿ ಇಲ್ಲ ಎನ್ನುವ ಭ್ರಮೆಯನ್ನು ಪ್ರದರ್ಶಿಸುವುದಕ್ಕೆ, ಆಂಗ್ಲ ಭಾಷೆಯಲ್ಲಿ elephant in the room ಎನ್ನುತ್ತಾರೆ. ಏಕೆಂದರೆ ಕೋಣೆಯೊಳಗೆ ಅಕಸ್ಮಾತ್ ಆನೆಯೊಂದಿದ್ದರೆ ಅದನ್ನು ನಮ್ಮ ಕಣ್ಣಿಗೆ ಕಾಣದಂತೆ ವರ್ತಿಸುವುದು ಅಸಾಧ್ಯ. ಆನೆಯ ಗಾತ್ರ ಅಂಥದ್ದು ನೋಡಿ.
‘ವಿಕಿ’ ಯಲ್ಲಿ ಸಿಕ್ಕ ಮಾಹಿತಿಯಂತೆ ‘ಆಕ್ಸ್ ಫರ್ಡ್’ ಆಂಗ್ಲ ನಿಘಂಟಿನ ಪ್ರಕಾರ ‘ಕೋಣೆಯೊಳಗೆ ಆನೆ’ ಗಾದೆಯನ್ನು ಪ್ರಪ್ರಥಮವಾಗಿ ಉಪಯೋಗಿಸಿದ್ದು ೧೯೫೯ ರಲ್ಲಿ new york times ಅಂಕಣದಲ್ಲಿ. ಶಾಲೆಗಳಿಗೆ ಧನಸಹಾಯ ದ ಬಗೆಗಿನ ಚರ್ಚೆಯಲ್ಲಿ ‘ ಈ ಸಮಸ್ಯೆ ಕೋಣೆಯೊಳಗಿನ ಆನೆಯ ಥರ, ಇದು ಎಷ್ಟು ದೊಡ್ಡದು ಎಂದರೆ ನಿಮ್ಮಿಂದ ಇದನ್ನ ನಿರ್ಲಕ್ಷಿಸಲು ಸಾಧ್ಯವಿಲ್ಲ” ಎನ್ನುವ ಮಾತನ್ನು ಉಪಯೋಗಿಸಲಾಯಿತು.
ಇನ್ನು ನಮ್ಮ ಕನ್ನಡದಲ್ಲಿ ಇದಕ್ಕೆ ಪರ್ಯಾಯವಾಗಿ ಜಾಣ ಕುರುಡು ಎನ್ನುತ್ತಾರೆ. ಆದರೆ ಜಾಣ ಕುರುಡು ಎನ್ನುವ ಮಾತು ‘ಎಲಿಫಂಟ್ ಇನ್ ದ ರೂಂ’ ನಷ್ಟು ಪರಿಣಾಮಕಾರಿಯಲ್ಲ. ನಮಗೆ ಆನೆಯ ಉಪಮೆಯೇ ಮೇಲು. ಚಿಕ್ಕ ಪುಟ್ಟ, ದೊಡ್ಡ ವಿವಾದ ಎಬ್ಬಿಸದ ವಿಷಯದ ಬಗ್ಗೆ ಜಾಣ ಕುರುಡನ್ನು ಪ್ರದರ್ಶಿಸಿ, ಹೆ..ಹೆ ಎಂದು ಹಲ್ಲು ಕಿರಿದು ತಪ್ಪಿಸಿ ಕೊಳ್ಳಬಹುದು. ಸಾಕ್ಷಾತ್ ಆನೆಯೇ ಕೋಣೆಯೊಳಗೆ ವಕ್ಕರಿಸಿ ಕೊಂಡಾಗ ಚರ್ಮ ಉಳಿಸಿ ಕೊಳ್ಳುವುದು ಸ್ವಲ್ಪ ಕಷ್ಟದ ಪಾಡೇ ಸರಿ.
ಭಾಷೆ ಮತ್ತು ಅದು ಒಳಗೊಳ್ಳುವ ಗಾದೆ ಉಪಯೋಗ ಪ್ರಸಕ್ತ ಪರಿಸ್ಥಿಗೆ, ಬೆಳವಣಿಗೆಗೆ ಅಳವಡಿಸಿದಾಗ ಅದರ ಪರಿಣಾಮ ಮನ ಮುಟ್ಟುವಂತಿರುತ್ತದೆ. ವಿಚಾರವನ್ನು ಸಲೀಸಾಗಿ ಗ್ರಹಿಸಲೂ ಸಾಧ್ಯವಾಗುತ್ತದೆ. ಮಾತುಗಳಲ್ಲಿ ಗಾದೆಯನ್ನು ಒಳಪಡಿಸಿ ಕೊಂಡು ಮಾತನ್ನಾಡುವ ರಾಜಕಾರಣಿ, ಜನರನ್ನು ಮಂತ್ರ ಮುಗ್ಧ ಗೊಳಿಸಲು ಸಮರ್ಥನಾದಾಗ ಅವನು ‘ಒರೇಟರ್’ ಎನಿಸಿ ಕೊಳ್ಳುತ್ತಾನೆ, ತನ್ನ ರಾಜಕೀಯ ಅಥವಾ ವೈಚಾರಿಕ ಧಂಧೆಯಲ್ಲಿ ಯಶಸ್ಸು ಕಾಣುತ್ತಾನೆ.
ಈಗ ಬನ್ನಿ, ಭಾಷೆಯ ‘ಬಾಳೆಲೆ’ ಯಿಂದ ರಾಜಕೀಯದ ಬಾಣಲೆಗೆ. ಪ್ರವಾಸಿಗರ ಅಚ್ಚುಮೆಚ್ಚಿನ ನಗರ ರಾಜಸ್ಥಾನದ ಜೈಪುರದಲ್ಲಿ ನಮ್ಮನ್ನಾಳು ತ್ತಿರುವ ಕಾಂಗ್ರೆಸ್ ಪಕ್ಷದ “ಚಿಂತನ್ ಶಿವಿರ್” ( ಚಿಂತನ ಶಿಬಿರ) ಸಮಾವೇಶ. ಇಲ್ಲಿ ಕಾಂಗ್ರೆಸ್ ನ ಯುವರಾಜ ಎಂದು ಗುರುತಿಸಲ್ಪಡುತ್ತಿರುವ ರಾಹುಲ್ ಗಾಂಧಿ ಪಕ್ಷದ ಉಪಾಧ್ಯಕ್ಷ ಸ್ಥಾನಕ್ಕೆ ಚುನಾಯಿತರಾದರು. ನೆಹರೂ ಕುಟುಂಬದವರ ಕೈಯ್ಯಲ್ಲೇ ತಾನೇ ಕಾಂಗ್ರೆ ಇರೋದು. ಇದು ಬಹಿರಂಗ ಗುಟ್ಟು. ಪ್ರಶ್ನಿಸಿದರೆ, ಜನರೇ ಇದಕ್ಕೆ ಕ್ಯಾತೆ ತೆಗೆಯದೆ ತೆಪ್ಪಗಿರುವಾಗ ನೀವ್ಯಾರು ಪ್ರಶ್ನಿಸಲು ಎಂದು ಕಾಂಗ್ರೆಸ್ಸಿಗರ ಎದಿರೇಟು. ಸರಿ ರಾಹುಲ್ ಚುನಾಯಿತ ರಾದರು, ಮುಂದಿನ ಮಹಾ ಚುನಾವಣೆಯಲ್ಲಿ ಪಕ್ಷವನ್ನ ಮುನ್ನಡೆಸಲು. ಆದರೆ ಪ್ರಜಾಪ್ರಭುತ್ವದಲ್ಲಿ ವಂಶ ಪರಂಪರೆ ಬಗ್ಗೆ ದೇಶದ ಅತಿ ದೊಡ್ಡ ವಿರೋಧ ಪಕ್ಷ ಭಾಜಪ ತಕರಾರು ತೆಗೆಯುತ್ತಾ ನೇತಾರ ಅರುಣ್ ಜೆತ್ಲೀ ದೇಶವನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆಗಳಿಗೆ ಕಾಂಗ್ರೆಸ್ ಪಕ್ಷದಲ್ಲ್ಲಿ ಇರುವ ಉತ್ತರ ಎಂದರೆ ವಂಶಪರಂಪರೆಯನ್ನು ಪ್ರಜಾಪ್ರಭುತ್ವದ ಮೇಲೆ ಹೇರುವುದು ಮಾತ್ರ ಎಂದು ಟೀಕೆ ಮಾಡಿದರು. ‘ಚಿಂತನ ಶಿಬಿರ’ ನಮ್ಮ ದೇಶಕ್ಕೆ ‘ಚಿಂತಾಜನಕ’ ರಾಜಕಾರಣದ ಮುಂದುವರಿಕೆಗೆ ಎಡೆ ಮಾಡೀತೆಂದು ಪಂಡಿತರ ಅಳಲು. ಭಾಜಪ ದಿಂದ ಈ ಕಟು ಟೀಕೆ ಯನ್ನು ಕಾಂಗ್ರೆಸ್ಸಿಗರು ಖಂಡಿತ ನಿರೀಕ್ಷಿಸಿಯೇ ಇರುತ್ತಾರೆ. ಸ್ವತಂತ್ರ ಭಾರತದ ಬಹುಪಾಲು ಅವಧಿ ಇವರ ಆಳ್ವಿಕೆಯನ್ನೇ ತಾನೇ ದೇಶ ಕಂಡಿರೋದು. ಎಲ್ಲಾ ತಂತ್ರ ಕುತಂತ್ರಗಳ ವರಸೆಯೇ ಇವರಲ್ಲಿ ಇರುತ್ತದೆ. ರಾಹುಲ್ ರನ್ನು ಪಟ್ಟಾಭಿಷೇಕ ಮಾಡಿ ಭಾಜಪದ ತಕರಾರಿಗೆ ತನ್ನದೇ ಆದ ಮದ್ದನ್ನು ಅರೆಯಿತು ಕಾಂಗ್ರೆಸ್. ಅದೆಂದರೆ ನಮ್ಮ ದೇಶದಲ್ಲಿ ಭಾಜಪ-ಆರೆಸ್ಸೆಸ್ ನೇತೃತ್ವದಲ್ಲಿ ದೇಶವನ್ನು ಅಸ್ಥಿರಗೊಳಿಸಲು ಹಿಂದೂ ಭಯೋತ್ಪಾದನಾ ಕ್ಯಾಂಪ್ ಗಳು ಕೆಲಸ ಮಾಡುತ್ತಿವೆ ಎಂದು. ದೇಶದ ಭದ್ರತೆಯ ಜವಾಬ್ದಾರಿ ಹೊತ್ತ ಗೃಹ ಮಂತ್ರಿಗಳ ಬಾಯಿಂದ ಬಿತ್ತು ಸಿಡಿಲಿನಂಥ ಮಾತು. ಆದರೆ ಇಂಥ ಮಾತುಗಳು ಆಗಾಗ ಕೇಳಿ ಬರುತ್ತಾ ಇರುವುದು ನಾವು ಓದಿದ್ದೇವೆ. ಕಾಂಗ್ರೆಸ್ ನ ದಿಗ್ವಿಜಯ ಸಿಂಗ್ ರಿಂದ ಹಿಡಿದು ಮಾಜಿ ಗೃಹ ಮಂತ್ರಿ ಚಿದಂಬರಂವರೆಗೆ ಎಲ್ಲರೂ ಈ ಕುರಿತು ಹೇಳಿಕೆ ನೀಡಿದ್ದಾರೆ. ದೇಶದ ಹಲವೆಡೆ ಬಾಂಬ್ ಸ್ಫೋಟಗಳು ನಡೆದು ಅದರ ಹಿಂದಿನ ಕೈವಾಡವನ್ನು ಬಹಿರಂಗಗೊಳಿಸಿದ ಪೊಲೀಸ್ ಅಧಿಕಾರಿ ಹುತಾತ್ಮ ಹೇಮಂತ್ ಕರ್ಕರೆ ದೇಶವಾಸಿಗಳ ಹುಬ್ಬೇರುವಂತೆ ಮಾಡಿದ್ದರು. ಹೇಮಂತ್ ಕರ್ಕರೆ ನೇತೃತ್ವದಲ್ಲಿ ನಡೆದ ವಿಚಾರಣೆ ಹಲವು ಜನರ ಬಂಧನಕ್ಕೂ ಕಾರಣವಾಯಿತು. ವಿಚಾರಣೆಯಲ್ಲಿ ಕಹಿ ಸತ್ಯ ಸಹ ಹೊರ ಬಂದಿತು. ಆದರೆ ಭಾಜಪದ ಲಾಲ್ ಕೃಷ್ಣಾ ಅಡ್ವಾಣಿ ಯಾಗಲೀ ಪಕ್ಷದ ಬೇರಾವುದೇ ನಾಯಕರಾಗಲೀ ಈ ವಿಚಾರಣೆಯನ್ನು ಕಾಂಗ್ರೆಸ್ ಪ್ರೇರಿತ ಎಂದು ಟೀಕಿಸಿದ ರೇ ಹೊರತು ಆತ್ಮಾವಲೋಕನ ಮಾಡಿಕೊಳ್ಳುವ ಗೊಡವೆಗೆ ಹೋಗಲಿಲ್ಲ. ದೇಶದ ಅತೀ ಜವಾಬ್ದಾರೀ ಹುದ್ದೆಗಳಲ್ಲಿ ಇರುವ ಗೃಹ ಮಂತ್ರಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು, ಇವರು ನಡೆಸಿದ ವಿಚಾರಣೆಗಳುಮ ಬಂಧಿತರು ನೀಡಿದ ಹೇಳಿಕೆಗಳು, ಇವೆಲ್ಲವೂ ಸುಳ್ಳಿನ ಸರಮಾಲೆ ಯಾಗಲು ಸಾಧ್ಯವೇ? ಎಂದು ಪ್ರಶ್ನಿಸಿ ಕೊಳ್ಳಲಿಲ್ಲ. ಭಯೋತ್ಪಾದನೆಗೆ ಧರ್ಮದ ಲೇಪ ಬೇಡ ಎಂದು ಎಲ್ಲಾ ಪ್ರಜ್ಞಾವಂತರ ಅಭಿಪ್ರಾಯ. ಇಸ್ಲಾಮಿ ಭಯೋತ್ಪಾದನೆ, ಹಿಂದೂ ಭಯೋತ್ಪಾದನೆ ಎಂದು ಕೃತ್ಯ ಎಸಗಿದವರ ಧರ್ಮ ವನ್ನು ಸೇರಿಸಿ ವರ್ಣಿಸುವ ಅಗತ್ಯ ಇಲ್ಲ. ಯಾವ ಧರ್ಮವೂ ಹೊಡೀ, ಬಡೀ, ಕಡೀ ಎಂದು ಹೇಳಿ ಕೊಡುವುದಿಲ್ಲ. ಮುಸ್ಲಿಮರು ನಡೆಸಿದ ಹಿಂಸೆಯ ವಿರುದ್ಧ ಮುಸ್ಲಿಂ ವಿಧ್ವಾಂಸರು ಬಹಿರಂಗ ಹೇಳಿಕೆ ಕೊಟ್ಟಿದ್ದಾರೆ. ಸಮುದಾಯವನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಭಯೋತ್ಪಾದನೆ ಪರಿಹಾರವಲ್ಲ ಎನ್ನುವ ಕಿವಿ ಮಾತನ್ನೂ ಹೇಳಿದ್ದಾರೆ. ಈ ನಿಲುವು ಸ್ವಾಗತಾರ್ಹ. ಆದರೆ ಭಾಜಪ ಮತ್ತು ಅದನ್ನು ಬೆಂಬಲಿಸುವ ಸಂಘಟನೆಗಳು ಕೋಣೆಯೊಳಗಿರುವ ಆನೆಯ ರೀತಿ ಕುರುಡು ಭಾವವನ್ನು ತಳೆಯುವುದು ತರವಲ್ಲ. ಆನೆಯ ಇರುವು ಬಹಿರಂಗವಾಗಿದೆ. ಅದರ ಬಗ್ಗೆ ಮಾಡಬೇಕಾದ, ತಳೆಯಬೇಕಾದ ನಿಲುವಿನ ಬಗ್ಗೆ ಪಕ್ಷ ಗಂಭೀರವಾಗಿ ಯೋಚಿಸಿ ಕ್ರಮ ತೆಗೆದುಕೊಳ್ಳಬೇಕು. ನಿರಾಕಾರಣಾ ಮನೋಭಾವದಿಂದ ಯಾರಿಗೂ ಲಾಭವಾಗದು.
ಬದಲಾಗುತ್ತಿರುವ ವಿಶ್ವ ರಾಜಕಾರಣದಲ್ಲಿ ಭಾರತದ ಪಾತ್ರ ಹಿರಿದು. ಪ್ರಜಾಪ್ರಭುತ್ವ, ಜಾತ್ಯಾತೀತ ಮೌಲ್ಯಗಳು ನಮ್ಮ ರಾಜಕಾರಣದಲ್ಲಿ ಪ್ರತಿಫಲಿಸಬೇಕು. ಅಸಹನೆ, ಮತಾಂಧತೆಯ ಸುಳಿಯಲ್ಲಿ ಸಿಕ್ಕ ದೇಶಗಳ ಅವಸ್ಥೆಯಲ್ಲಿ ನಮಗೂ ಪಾಠವೊಂದಿದೆ ಎನ್ನುವುದನ್ನು ಮನಗಾಣಬೇಕು.
೯೬ ರ ಲೈಂಗಿಕ ಶಕ್ತಿ

ಉತ್ತರ ಭಾರತದ ಹರಿಯಾಣ ಎಂದರೆ ಬರೀ ‘ಖಾಪ್’ ಪಂಚಾಯತಿ ಅಲ್ಲ. ಹರಿಯಾಣದ ರಾಮ್ ಜೀತ್ ರಾಘವ್ ವಿಶ್ವದ ಅತೀ ಹಿರಿಯ ತಂದೆ. ವಯಸ್ಸು ೯೬. ಎರಡು ಮಕ್ಕಳ ತಂದೆ. ಬಾಳ ಸಂಗಾತಿಯನ್ನು ಕಂಡು ಕೊಂಡಿದ್ದು ೮೬ ನೇ ವಯಸ್ಸಿನಲ್ಲಿ. ಅಲ್ಲಿಯರೆಗೆ ಅವಿವಾಹಿತ. ರೈತನೂ, ಪೈಲ್ವಾನನೂ ಆದ ಈತನಿಗೆ ಈಗಲೂ ತನ್ನ ಮಲಗುವ ಕೋಣೆ ‘ಅಖಾಡ’ ಮತ್ತು ತನ್ನ ಸಂಗಾತಿ ಒಂದು ಹೊಲದಂತೆ. ಪ್ರತೀ ರಾತ್ರಿ ಮೂರ್ನಾಲ್ಕು ಸಲ ಸಂಭೋಗಿಸುತ್ತೇನೆ ಎಂದು ಹೇಳುವ ಈತನ ಮೇಲೆ ನೆರೆಯ ಗಂಡುಗಳಿಗೆ ಉರಿ, ಮತ್ಸರ. ಪಿಕ್ ಪಾಕೆಟ್ ಮಾಡುವಂತೆ ಒದ್ದು ಕಸಿದು ಓಡಿ ಹೋಗುವಂಥದ್ದು ಅಲ್ಲವಲ್ಲ ಆತನಲ್ಲಿ ಇರುವ ಲೈಂಗಿಕ ಸಾಮರ್ಥ್ಯ. ಹೋಗಲಿ, ನೀನೇನನ್ನು ತಿನ್ನುತ್ತೀಯ ಅದನ್ನಾದರೂ ಹೇಳು ಎಂದರೆ ಆತ ಹೇಳೋದು, ಹಾಲು, ಬೆಣ್ಣೆ, ಮತ್ತು ಬಾದಾಮಿ.
ಈ ಬಾದಾಮಿ ಸ್ವಲ್ಪ ತಕರಾರಿನ ‘ಬೀಜ’ವೇ ಅನ್ನಿ. ಗಂಡನ್ನು ನಿಜಕ್ಕೂ nut ಆಗಿಸುತ್ತದೆ. ಆದರೆ ಈ ತೊಂಭತ್ತೈದರ ಮೇಲಿನ ಪ್ರಾಯದಲ್ಲೂ…ದಿನಕ್ಕೆ ಮೂರೂ, ನಾಕೂ ಸಲ….ಅದೇನೋ ನಾನರಿಯೆ.
ಎಷ್ಟು ತೋರಿಸಿದರೆ ಪ್ರಚೋದನಕಾರೀ?
ಅತ್ಯಾಚಾರ ಮತ್ತು ಈ ನೀಚ ಕೃತ್ಯದ ಹಿಂದೆ ಇರುವ ಮನಸ್ಥಿತಿ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ನವ ದೆಹಲಿಯಲ್ಲಿ ನಡೆದ ಅತಿ ಕ್ರೂರ ಅತ್ಯಾಚಾರ ದೇಶದ ಮಾತ್ರವಲ್ಲ ಹೊರದೇಶದ ಜನರನ್ನೂ ಕ್ರುದ್ಧ ರನ್ನಾಗಿಸಿದೆ. ರಾತ್ರಿ ಹೊತ್ತು ಹೆಣ್ಣೊಬ್ಬಳು ಹೊರಹೋಗುವ ಔಚಿತ್ಯದಿಂದ ಹಿಡಿದು ಆಕೆ ತೊಡುವ ಉಡುಗೆ ವರೆಗೆ ಎಲ್ಲವೂ ‘ಸ್ಕ್ಯಾನ್’ ಆಗುತ್ತಿವೆ. ದೇವರು ಎರಡೂ ಲಿಂಗಗಳಿಗೆ ಸದ್ಬುದ್ಧಿ ದಯಪಾಲಿಸಲಿ.
ಈಗ ಒಂದು ಪ್ರಶ್ನೆ. ಯಾವ ತೆರನಾದ ಬಟ್ಟೆ ತೊಟ್ಟಾಗ ಗಂಡಿಗೆ ರೇಪ್ ಎಸಗುವ ಪೈಶಾಚಿಕ ಭಾವನೆ ಕೆರಳಿಸುತ್ತದೆ? ಒಬ್ಬೊಬ್ಬರದು ಒಂದೊಂದು ಟೇಸ್ಟು (taste). ಕೆಲವರಿಗೆ ಹೆಣ್ಣಿನ ಮೂಗುತಿಯೂ ಒಂದು ತೆರನಾದ ‘ಕಿಕ್’ ಕೊಡುತ್ತಂತೆ. ಕಾಲುಂಗುರ ಸಹ ಅದೇ ರೀತಿಯ ಕಿಕ್ ಕೊಡುತ್ತೋ ಇಲ್ಲವೋ ಗೊತ್ತಿಲ್ಲ. ಕೆನಡಾದ ಒಬ್ಬ ಹುಡುಗಿ ಮೇಲೆ ತೋರಿಸಿದ ಒಂದು ಚಿತ್ರ ಕೊಟ್ಟು ಅದರ ಮೇಲೆ ಗುರುತು ಹಾಕಿ ಯಾವ್ಯಾವ ಪಾಯಿಂಟ್ ಗಳಲ್ಲಿ ಮಹಿಳೆಯ ‘ಗರತಿ’ತ್ವ ಅಳೆಯಬಹುದು ಎಂದು ತೋರಿಸಿದ್ದಳು. ಗೋಡೆಗೆ ಆತು ನಿಂತ ಹದಿಹರೆಯದ ಹೆಣ್ಣು ತನ್ನ ಸ್ಕರ್ಟ್ ಎತ್ತಿ ತೋರಿಸುತ್ತಾ ಸ್ಕರ್ಟ್ ನ ವಿವಿಧ ಅಳತೆಗಳು ಮೂಡಿಸುವ ಭಾವನೆ ಕುರಿತು ಬರೆದು ಪ್ರಸಿದ್ಧಳಾದಳು ಅಂತರ್ಜಾಲದಲ್ಲಿ.
whore: ಎಂದರೆ ‘ಸಿಂಪ್ಲಿ’ ವೇಶ್ಯೆ.
slut: ಹೆಚ್ಚೂ ಕಡಿಮೆ ಇದೂ ಸಹ ವೇಶ್ಯೆಯೇ ಅನ್ನಿ.
asking for it:ಎಂದರೆ, ಏನ್ ಉಡ್ಗಿ, ಬೇಕಾ?
provocative: ಪ್ರಚೋದನಕಾರೀ.
cheeky: ಅಂದ್ರೆ ‘ತುಂಟಿ’
ನಾನು ಕೇಳೋದು ಇಷ್ಟೇ. ಅವಳೇನನ್ನೇ ತೊಡಲಿ, ತೊಡದೆಯೂ ಇರಲಿ, ಅಲೆಮಾರೀ ಕಣ್ಣುಗಳಿಗೆ ಕಡಿವಾಣ ಹಾಕಿ ಅವು ನೆಲ ನೋಡುವಂತೆ ಮಾಡಬಾರದೇ?
pic courtesy: huffingtonpost, usa
ರಾಜಧಾನಿಯಲ್ಲಿ ನಡೆದ ಅತ್ಯಾಚಾರಕ್ಕೆ ಕಾರಣ ಯಾರು?
ನವದೆಹಲಿಯಲ್ಲಿ ನಡೆದ ಅಮಾನುಷ ಅತ್ಯಾಚಾರದ ವಿರುದ್ಧ ದೇಶದಲ್ಲಿ ದೊಡ್ಡ ರೀತಿಯಲ್ಲಿ ಪ್ರತಿಭಟನೆಗಳು ನಡೆದವು, ಮಹಿಳೆಯರು ಮಾನವಾಗಿ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ವಾದುದಕ್ಕೆ ನ್ಯಾಯಾಲಯಗಳನ್ನೂ, ರಾಜಕಾರಣಿ, ಪೊಲೀಸರನ್ನು ನೇರವಾಗಿ ದೂರಿದ ಜನ ಅತ್ಯಾಚಾರಿಗಳಿಗೆ ಗಲ್ಲಿನ ಶಿಕ್ಷೆ ಕೊಡಲು ಆಗ್ರಹಿಸಿದರು. ಕಾಮಪಿಪಾಸು ಪಶುಗಳ ಕೈಗೆ ಸಿಕ್ಕು ಜರ್ಜರಿತಳಾದ ಯುವತಿ ಸಾವಿನೊಂದಿಗೆ ವ್ಯರ್ಥವಾಗಿ ಸೆಣಸಿ ಕೊನೆಯುಸಿರೆಳೆದಳು.
ಟೈಮ್ಸ್ ಆಫ್ ಇಂಡಿಯಾದಲ್ಲಿ ಒಂದು ಲೇಖನ (why Indian men rape – Anand Soondas) ಓದಲು ಸಿಕ್ಕಿತು. ‘ಭಾರತೀಯ ಗಂಡು ಅತ್ಯಾಚಾರವನ್ನೇಕೆ ಎಸಗುತ್ತಾನೆ?’ ರೈಲಿನಲ್ಲಿ ಕಳೆದ ಜುಲೈ ತಿಂಗಳಿನಲ್ಲಿ ಅಸ್ಸಾಮಿನಲ್ಲಿ ನಡೆದ ಹೆಣ್ಣು ಮಗಳೊಬ್ಬಳ ಮೇಲೆ ನಡೆದ ದೌರ್ಜನ್ಯದ ಕುರಿತ ನಡೆದ ವಿದ್ಯಾವಂತರ ಚರ್ಚೆಯಲ್ಲಿ ಒಬ್ಬ ಹೆಣ್ಣಿನ ಕುರಿತು ಹಗುರವಾಗಿ ಮಾತನಾಡಿದ ಬಗ್ಗೆ ಬರೆದಿದ್ದರು ಲೇಖಕರು. ಹಲ್ಲೆಯ ಬಗ್ಗೆ ಮಾತನಾಡುತ್ತಾ ವಾಯು ಸೇನೆಯ ಅಧಿಕಾರಿ ಕೇಳಿದ್ದು ಆಕೆಗೆ ರಾತ್ರಿಯಲ್ಲಿ ಹೊರಗೇನು ಕೆಲಸ ಎಂದು. ಆ ಯುವತಿ ಮದ್ಯ ಸೇವಿಸುತ್ತಿದಳು ಮತ್ತು ಕೆಲವು ಪುರುಷರೊಂದಿಗೆ ಆಕೆ ಚೆಲ್ಲಾಟ ವಾಡುತ್ತಿದ್ದಳು, ಅದಕೆ ತಕ್ಕ ಶಾಸ್ತಿ ಯಾಯಿತು ಎಂದು ಆತ ಹೇಳಿದಾಗ ಕ್ರುದ್ಧನಾದ ಸಹ ಪ್ರಯಾಣಿಕ ಅಧಿಕಾರಿಯನ್ನು ಉದ್ದೇಶಿಸಿ. ಮುಂದಿನ ಸಲ ನಿನ್ನ ಸೋದರಿಯ ಪೃಷ್ಠಗಳನ್ನು ಯಾರಾದರೂ ಹಿಂಡಿದಾಗ ನಿನ್ನ ಸೋದರಿ ಎಷ್ಟು ಮರ್ಯಾದಸ್ಥಳು ಎನ್ನುವುದರ ಬಗ್ಗೆ ಮೊದಲು ಪೊಲೀಸರು ತನಿಖೆ ನಡೆಸಲಿ ಎಂದು ಹೇಳಿದನಂತೆ. ದೌರ್ಜನ್ಯಕ್ಕೊಳಗಾದ ಹೆಣ್ಣುಮಗಳ ಬಗೆಗಿನ ಆ ಅಧಿಕಾರಿಯ ಅಭಿಪ್ರಾಯ ನೋಡಿದಿರಲ್ಲ, ಇದು ವಿದ್ಯಾವಂತರ ಕಥೆ.
ಸಮಾಜವನ್ನು, ದೇಶವನ್ನು ಕಂಗೆಡಿಸುವ ಅತ್ಯಾಚಾರದಂಥ ಘಟನೆಗಳನ್ನು ತಡೆಯಲು ಸಮಾಜ ತನ್ನ ಯುವಜನರ ನೈತಿಕ ಮೌಲ್ಯಗಳು ಪತನಗೊಳ್ಳುತ್ತಿರುವ ಕಡೆ ಗಮನ ನೀಡಬೇಕು. ಗತಿಸಿಹೋದ ವೈಭವದ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸುವುದರಿಂದಲೋ, ಉತ್ಸವಗಳನ್ನು ಆಚರಸುವುದರಿಂದಲೋ ಸಮಾಜದ ಏಳಿಗೆ ಅಥವಾ ಸುರಕ್ಷತೆ ಅಸಾಧ್ಯ. ನವ ದೆಹಲಿಯ ಸಾಮೂಹಿಕ ಅತ್ಯಾಚಾರ ಮತ್ತು ಕಗ್ಗೊಲೆ ನಮ್ಮ ದೇಶದಲ್ಲಿ ಅತ್ಯಚಾರದ ಕುರಿತು ಬಹು ದೊಡ್ಡ ಚರ್ಚೆಯನ್ನೇ ಆರಂಭಿಸಿದೆ. “ನಿರ್ಭಯ” ಎನ್ನುವ ಯುವತಿಯ ದಾರುಣ ಅಂತ್ಯದ ನಂತರ ಸಮಾಜ ಎಚ್ಚೆತ್ತು ಕೊಳ್ಳಲು ಆರಂಭಿಸುತ್ತಿದೆ. ಅದರ ನಡುವೆಯೇ ಮಹಿಳೆ ಲಕ್ಷ್ಮಣ ರೇಖೆಯನ್ನು ದಾಟಬಾರದ, ದಾಟಿದರೆ ಆಗುವ ದುಷ್ಪರಿಣಾಮಗಳ ಕುರಿತ ಬೋಧನೆಗಳು (ಮಧ್ಯ ಪ್ರದೇಶದ ಮಂತ್ರಿ ಮಹೋದಯ ಹೇಳಿದ್ದು) ಕೇಳಿ ಬರುತ್ತಿವೆ. ಮಹಿಳೆಯ ಮೇಲಿನ ಅತ್ಯಾಚಾರಕ್ಕೆ ಮಹಿಳೆಯನ್ನು ಹೊಣೆಗಾರಳನ್ನಾಗಿಸುವ ಮಾತುಗಳೂ ಕೇಳಿ ಬರುತ್ತಿವೆ.
ರಾಜಧಾನಿಯಲ್ಲಿ ಅಮಾಯಕ ಯುವತಿಯ ಮೇಲಿನ ಅತ್ಯಾಚಾರ ನಡೆದ ನಂತರ ಅತ್ಯಾಚಾರಕ್ಕೆ ಕಾರಣವಾಗುವ ಅಂಶಗಳನ್ನು ಚರ್ಚಿಸ ತೊಡಗಿದ ದೇಶಕ್ಕೆ ಮತ್ತೊಂದು ರೀತಿಯ ಆಘಾತ ರಾಜಕಾರಣಿಗಳ ಮಾತಿನಿಂದ. ಹಿಂದುತ್ವ ರಾಷ್ಟ್ರವಾದೀ ಸಂಘಟನೆ ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್ ಈ ಚರ್ಚೆಗೆ ಮತ್ತಷ್ಟು ಬಿಸಿ ಹೆಚ್ಚಿಸಿದರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ. ಪತಿ ಮತ್ತು ಪತ್ನಿ ಸಾಮಾಜಿಕ ಕರಾರಿನ ಕಟ್ಟುಪಾಡಿನ ಒಳಗೆ ತಮ್ಮ ಜವಾಬ್ದಾರಿ ನಿರ್ವಹಿಸಬೇಕು, ಪತಿ ಹೊರಗೆ ದುಡಿದರೆ ಮಹಿಳೆ ಮನೆಯೊಳಗಿದ್ದು ತನ್ನ ಜವಾಬ್ದಾರಿ ಪೂರೈಸಬೇಕು. ಈ ಜವಾಬ್ದಾರಿಗಳು ಅದಲು ಬದಲಾದಾಗ ಅಥವಾ ಮಹಿಳೆ ತನ್ನ ಜವಾದ್ಬಾರಿ ಮರೆತು ಮನೆಯ ಹೊರಗಿನ ಚಟುವಟಿಕೆಗಳಲ್ಲಿ ನಿರತಳಾದಾಗ ಆಗುವ ಪರಿಣಾಮಗಳನ್ನು ವಿಶ್ಲೇಷಿಸಿ ವಿವಾದದ ಸೃಷ್ಟಿಗೆ ಕಾರಣರಾದರು. ಅತ್ಯಾಚಾರ ನಡೆಯುತ್ತಿರುವುದು ವಿದೇಶೀ ಸಂಸ್ಕಾರ ಪ್ರೇರಿತ ‘ಇಂಡಿಯಾ’ ದಲ್ಲಿ, ಸಂಪ್ರದಾಯಸ್ಥ ‘ಭಾರತ’ದಲ್ಲಿ ಅಲ್ಲ ಎನ್ನುವ ಮಾತಿನೊಂದಿಗೆ ದೇಶದೊಳಗೇ ಮತ್ತೊಂದು ದೇಶವನ್ನು ಕಾಣುವ ವ್ಯರ್ಥ ಪ್ರಯತ್ನ ಸಹ ಮಾಡಿದರು ಭಾಗವತ್. ಮಾಧ್ಯಗಳು, ಸಾಮಾಜಿಕ ವೆಬ್ ತಾಣಗಳ ಮೂಲಕ ನಗರಗಳಲ್ಲಿ ನಡೆಯುತ್ತಿರುವ ಅತ್ಯಾಚಾರದ ವರದಿಯಾದರೂ ಓದಲಿಕ್ಕೆ ಸಿಗುತ್ತಿದೆ. ವರದಿಯಾಗದ, ಬೆಳಕಿಗೆ ಬಾರದ ಕಾರಣಕ್ಕಾಗಿ ಗ್ರಾಮಾಂತರ ಪ್ರದೇಶಗಳು ಸುರಕ್ಷಿತ ಎನ್ನುವ ಭಾವನೆ ಒಂದು ಭ್ರಮೆ ಅಷ್ಟೇ.
ಸಾಹಿತ್ಯ, ಕವಿತೆಗಳಲ್ಲಿ, ಸಿನಿಮಾಗಳಲ್ಲಿ ಮುಕ್ತತೆಯನ್ನು ಬಯಸುವ ನಾವು ನಮ್ಮ ಯುವಜನರ ನಡತೆಗೆ ಏಕೆ ಕಡಿವಾಣ ತೊಡಿಸಬೇಕು? ಕಥೆ ಕಾದಂಬರಿ, ಜಾಹೀರಾತು, ಸಿನೆಮಾಗಳಲ್ಲಿ ಎಗ್ಗಿಲ್ಲದೆ ಲೈಂಗಿಕತೆ ತುರುಕಿ ಮಜಾ ಕಾಣುವ ಜನ ಅತ್ಯಾಚಾರದಂತಹ ಘಟನೆಗಳು ಸಂಭವಿಸಿದಾಗ ಹೈರಾಣಾಗುವುದಾದರೂ ಏಕೆ ಎನ್ನುವುದೇ ಅರ್ಥವಾಗುವುದಿಲ್ಲ. ಎಲ್ಲೇ ಕಣ್ಣಾಡಿಸಿದರೂ ಲೈಗಿಕತೆ, ನಗ್ನತೆಯ ದರ್ಶನ ವಾದಾಗ ಆಗುವ ಅನಾಹುತಕ್ಕೆ ಸಮಾಜ ಹೊಣೆ ಹೊರಬೇಕು. ಅಥವಾ ಮುಕ್ತತೆ, ಕ್ರಿಯಾಶೀಲತೆ ಹೆಸರಿನಲ್ಲಿ ನಗ್ನತೆ, ಅಶ್ಲೀಲತೆ ಸೆಕ್ಸ್ ಅನ್ನು ವೈಭವೀಕರಿಸುವುದಾದರೆ ಅಂಥ ಚಿತ್ರ ಗಳನ್ನು ನೋಡಿದ ನಂತರ ಉಂಟಾಗುವ ಉದ್ದೀಪನಕ್ಕೂ ಒಂದು ಔಟ್ ಲೆಟ್ ಸಮಾಜ ನಿರ್ಮಿಸಬೇಕು. ನಮ್ಮ ಚಿತ್ರಗಳಲ್ಲಿ ಕಾಣ ಸಿಗುವ ನರ್ತನ ವನ್ನಾದರೂ ನೋಡಿ, ವಾತ್ಸಾಯನನ ಎಲ್ಲಾ ಭಂಗಿಗಳೂ ಒಂದೆರಡು ಹಾಡುಗಳಲ್ಲಿ ಕಾಣಲು ಲಭ್ಯ. ಗಂಡಿನ ಒಳ ಉಡುಪಿನಿಂದ ಹಿಡಿದು ಕಾರಿನ ಟೈರ್ ಗಳ ಜಾಹೀರಾತಿಗೂ ಬೇಕು ಹೆಣ್ಣು. ಒಂದು ಕಡೆ ನಗ್ನತೆಯ ನಗ್ನ ಪ್ರದರ್ಶನ ಮತ್ತೊಂದು ಕಡೆ ಹುಡಗರು ಹುಡುಗಿಯರು ದಾರಿ ತಪ್ಪ ಬಾರದು ಎನ್ನುವ ಕಡಿವಾಣ, ಹೆಣ್ಣಿನ ಕನ್ಯತ್ವ ಕಾಪಾಡಿಕೊಳ್ಳಬೇಕಾದ ಕುರಿತು ವಿಪರೀತ ಕಾಳಜಿ. ಹೆಣ್ಣನ್ನು ಭೋಗದ ವಸ್ತುವನ್ನಾಗಿ ಮಾತ್ರ ಕಾಣಲು ಸಮಾಜ ಉತ್ಸುಕತೆ ತೋರಿಸಿದರೆ ನವ ದೆಹಲಿಯಲ್ಲಿ ನಡೆದಂಥ ಅಮಾನುಷ, ದುರದೃಷ್ಟಕರ ಘಟನೆಗಳಿಗೂ ಸಾಕ್ಷಿ ನಿಲ್ಲಬೇಕಾಗುತ್ತದೆ.
ಸಮಾಜ ಗಂಡಿನ ಪ್ರಾಮುಖ್ಯತೆ ಬಗ್ಗೆ ಅತೀವ ಗಮನ ನೀಡುತ್ತಿರುವುದೂ ಸಹ ಮಹಿಳೆಯ ದಾರುಣ ಅವಸ್ಥೆಗೆ ಮತ್ತೊಂದು ಕಾರಣ. ಹುಟ್ಟುವ ಮಗು ಹೆಣ್ಣು ಎಂದು ಖಾತ್ರಿಯಾದ ಕೂಡಲೇ ಭ್ರೂಣ ಹತ್ಯೆ ಮೂಲಕ ಹೆಣ್ಣು ಮಗಳನ್ನು ಕೊಲೆಗೈಯ್ಯಲು ಹೇಸದ ಸಮಾಜದಿಂದ ಒಳ್ಳೆಯತನವನ್ನು ನಿರೀಕ್ಷಿಸುವುದು ಕಷ್ಟಕರವಾದ ಕೆಲಸವೇ. ಇನ್ನು ಭ್ರೂಣಾವಸ್ಥೆಯಿಂದ ಭಡ್ತಿ ಪಡೆದು ಧರಿತ್ರಿ ಮುಟ್ಟಿದ ಕೂಡಲೇ ತನ್ನ ಹುಟ್ಟನ್ನು ಪ್ರಪಂಚಕ್ಕೆ ತಿಳಿಸಲು ತಂದೆ ತಾಯಿಗಳಿಗೂ, ಆ ಶುಭ ವಾರ್ತೆಯನ್ನು ಕೇಳುವ ಜನರಿಗೂ ಒಂದು ತೆರನಾದ ಸಂಕಟ… ಅಯ್ಯೋ, ಹೆಣ್ಣಾ? ಹೆಣ್ಣು ಅಬಲೆ, ಹೆಣ್ಣಿನ ಬುದ್ಧಿ ಮೊಣಕಾಲ ಕೆಳಗೆ, ಮುಂತಾದ ಮಾತುಗಳನ್ನು ಕೇಳುತ್ತಾ ಬೆಳೆಯುವ ಗಂಡು ಮಕ್ಕಳಿಗೆ ಹೆಣ್ಣಿನ ಮೇಲೆ ಗೌರವ ತೋರುವುದಾದರೂ ಹೇಗೆ? ಹೆಣ್ಣಿನ ಬುದ್ಧಿ ಮೊಳ ಕಾಲ ಕೆಳಗೆ, ಮುಂತಾದ ಮಾತುಗಳ ಮೂಲಕ ಹೆಣ್ಣಿನ ಅಸ್ತಿತ್ವದ ಕುರಿತು ಕೀಳರಿಮೆ ಬರುವಂಥ ನಡತೆಗಳೂ ಸಹ ಕಾರಣ ಮಹಿಳೆಯ ವಿರುದ್ಧ ನಡೆಯುತ್ತಿರುವ ಹಿಂಸೆ, ಅತ್ಯಾಚಾರ. ಹೆಣ್ಣನ್ನು ದೇವಿ, ‘ಮಾತಾ ಶ್ರೀ’ ಎಂದು ಪೂಜಿಸುವ, ಆದರಿಸುವ ಸಮಾಜವೇ ಸಂದರ್ಭ ಬಂದಾಗ ಮಹಿಳೆ ವಿರುದ್ಧ ಹೇಸಿಗೆ ಹುಟ್ಟಿಸುವ ಕೆಲಸಕ್ಕೂ ಮುಂದಾಗುವುದು ಅರ್ಥವಾಗದ ಒಗಟು. ಮಹಿಳೆಯರ ಮೇಲಿನ ದೌರ್ಜನ್ಯ ಕಂಡು ಬೇಸತ್ತ ಒಬ್ಬ ಮಹಿಳೆ ಹೇಳುವುದು, “ಹೆಣ್ಣು ಮಕ್ಕಳನ್ನು, ಸಂಗೀತ ಕಲಿಯಲಿಕ್ಕೋ, ನೃತ್ಯ ಕಲಿಯಲಿಕ್ಕೋ ಕಳಿಸಬೇಡಿ, ಬದಲಿಗೆ ಕರಾಟೆ, ಜೂಡೋ ಕಲಿಯಲು ಪ್ರೋತ್ಸಾಹಿಸಿ” ಇಂಥ ಮಾತು ಓರ್ವ ಹೆಣ್ಣು ಮಗಳ ಬಾಯಿಂದ ಬರಬೇಕಾದರೆ ಗಂಡಿನ ಕುರಿತ ಆಕೆಯ ಅಪನಂಬಿಕೆ ನಮಗೆ ವೇದ್ಯವಾಗುತ್ತದೆ.
ಬಹುಶಃ ವಿಶ್ವದಲ್ಲೇ ಅತೀ ಹೆಚ್ಚು ಪ್ರಭಾವೀ ಮಹಿಳಾ ರಾಜಕಾರಣಿಗಳು ಇರುವ ದೇಶ ನಮ್ಮದು. ಸರಕಾರವನ್ನು ಮುನ್ನಡೆಸುತ್ತಿರುವ ಮಹಿಳೆಯಿಂದ ಹಿಡಿದು, ವಿರೋಧ ಪಕ್ಷದ ನಾಯಕಿ. ಮುಖ್ಯ ಮಂತ್ರಿ, ಉನ್ನತ ಮಂತ್ರಿ ಪದವಿಗಳನ್ನು ಅಲಂಕರಿಸಿ ಕೂತ ಮಹಿಳೆಯರಿಗೆ ಅವರದೇ ಸಮಸ್ಯೆಗಳ ಅರಿವು ಇಲ್ಲದಿರುವುದು ಆಶ್ಚರ್ಯಕರ. ಇಷ್ಟೊಂದು ಮಹಿಳಾ ರಾಜಕಾರಣಿಗಳು ವಿಜ್ರಂಭಿಸುವ ದೇಶದಲ್ಲೇ ಹೆಣ್ಣಿನ ಪರಿಸ್ಥಿತಿ ಹೀಗಾದರೆ?
ಮಹಿಳೆಯರ ವಿರುದ್ಧ ನಡೆಯುವ ಯಾವುದೇ ಹಿಂಸೆ ಅತ್ಯಚಾರ ಗಳನ್ನು ವ್ಯವಸ್ಥೆ ಅತ್ಯಂತ ಗಂಭೀರವಾಗಿ ಪರಿಗಣಿಸಿ ತಕ್ಕ ಶಿಕ್ಷೆ ಯನ್ನು ಫಾಸ್ಟ್ ಟ್ರಾಕ್ ಕೋರ್ಟ್ ಗಳ ಮೂಲಕ ಕೊಡ ಮಾಡಿಸಬೇಕು. ಅತ್ಯಾಚಾರವೆಸಗುವ ಗಂಡಿನ ವಯಸ್ಸಿನ ಮಿತಿಯನ್ನು ಹದಿನೆಂಟರಿಂದ ಹದಿನೈದಕ್ಕೆ ಇಳಿಸಬೇಕು. ನವ ದೆಹಲಿಯಲ್ಲಿ ಅತ್ಯಾಚಾರವೆಸಗಿದ ಪುರುಷರ ಪೈಕಿ ಹದಿನೇಳು ವಯಸ್ಸಿನ ಹುಡುಗನ ಪಾತ್ರ ಅತ್ಯಂತ ಕ್ರೂರವಂತೆ. ಚಿಕ್ಕ ವಯಸ್ಸಿನಲ್ಲೇ ಹಡಬೆ ಕೆಲಸಕ್ಕೆ ಕೈ ಹಚ್ಚುತ್ತಿರುವ ಸಮೂಹಕ್ಕೆ ಶಿಕ್ಷೆಗೆ ಅವಶ್ಯವಾದ ಪರಿಮಿತಿಯನ್ನು ಕೆಳಕ್ಕಿಳಿಸಿದಾಗಲೇ ಇತರರಿಗೆ ಎಚ್ಚರಿಕೆಯ ಘಂಟೆ. ಅತ್ಯಾಚಾರಿಗೆ ನೇಣಿನ ಶಿಕ್ಷೆಯನ್ನಲ್ಲದೆ ಬೇರಾವುದೇ ಶಿಕ್ಷೆಗೂ ಒಳಪಡಿಸಬಾರದು. ಏಕೆಂದರೆ, ಮಹಿಳೆಯ ವಿರುದ್ಧ ನಡೆಯುವ ಅತ್ಯಾಚಾರ ಒಂದು ರೀತಿಯ crime against humanity.
pic courtesy: http://www.womenundersiege.org
ಮಾತು ಚಂದ, ಮೌನ ಚಂದ
ಮಾತು ಚಂದ, ಮೌನ ಚಂದ…. ಕೆಲವೊಂದು ನಲ್ನುಡಿ, ಶುಭಾಷಿತಗಳನ್ನು ಕೊಟ್ಟಿದ್ದೇನೆ, ಓದಿ,
conptemplate ಮಾಡಿ , ಚೆನ್ನಿದ್ದರೆ ಮಿತ್ರರೊಂದಿಗೆ ಹಂಚಿ ಕೊಳ್ಳಿ.
The flowering moments of the mind
Drop half their petals in our speech.
–Oliver Wendell Holmes, Sr.,
Man is born with the faculty of speech. Who gives it to him? He who gives the bird its song. Joseph Joubert
Speech was made to open man to man, and not to hide him; to promote commerce, and not betray it. David Lloyd (1), State Worthies
If you your lips would keep from slips,
Five things observe with care;
To whom you speak, of whom you speak,
And how, and when, and where.
– William Edward Norris, Thirlby Hall
I am a barbarian here, because I am not understood by anyone.
[Lat., Barbarus his ego sum, quia non intelligor ulli.]
God, that all-powerful Creator of nature and architect of the world, has impressed man with no character so proper to distinguish him from other animals, as by the faculty of speech. Quintilian (Marcus Fabius Quintilianus), De Institutione Oratoria (II, 17, 2)
According to Solomon, life and death are in the power of the tongue; and as Euripides truly affirmeth, every unbridled tongue in the end shall find itself unfortunate; for in all that ever I observed in the course of worldly things, I ever found that men’s fortunes are oftener made by their tongues than by their virtues, and more men’s fortunes overthrown thereby, also, than by their vices. Sir Walter Raleigh (1)
I will speak daggers to her, but use none. William Shakespeare
There are laws to protect the freedom of the press’s speech, but none that are worth anything to protect the people from the press. Mark Twain (pseudonym of Samuel Langhorne Clemens), In License of the Press
ಪತ್ರಿಕಾ ಸ್ವಾತಂತ್ರ್ಯದ ರಕ್ಷಣೆಗೆ ಕಾನೂನುಗಳಿವೆ, ಆದರೆ ಪತ್ರಿಕೆಗಳಿಂದ ಜನರನ್ನು ರಕ್ಷಿಸಲು ಯಾವುದೇ ಕಾನೂನುಗಳಿಲ್ಲ, ಎಂಥ ವಿಪರ್ಯಾಸ ಅಲ್ಲವೇ?
ದಕ್ಷಿಣೆಗೆ ತಕ್ಕ ಪ್ರದಕ್ಷಿಣೆ
ದಕ್ಷಿಣೆಗೆ ತಕ್ಕ ಪ್ರದಕ್ಷಿಣೆ, ಕಂತೆಗೆ ತಕ್ಕ ಬೊಂತೆ. ಈ ಗಾದೆಗಳನ್ನು ಕೇಳಿಯೇ ಇರುತ್ತೀರಿ. ನೀವೆಷ್ಟು ಪೀಕಲು ತಯಾರೋ ಅಷ್ಟು ಮಜಬೂತಾದ ಫಲ ನಿಮಗೆ ಸಿಗುತ್ತದೆ.
ನನ್ನೂರು ಭದ್ರಾವತಿಗೆ ಹೋಗಿದ್ದಾಗ ನಡೆದ ಘಟನೆ. ಹರಟುತ್ತಾ ಇರುವಾಗ ಮನೆಯ ಹತ್ತಿರ ಇರುವ ಮಸ್ಜಿದ್ ನ ಬಗ್ಗೆ ಮಾತು ಬಂತು. ನಮಾಜ್ ನ ಸಮಯ ಕೊಡುವ ‘ಅದಾನ್’ (ಪ್ರಾರ್ಥನಾ ಕರೆ) ಅಲ್ಲಿದ್ದ ನಮ್ಮ ಪರಿಚಯದ ವ್ಯಕ್ತಿಯೊಬ್ಬರು ಕೊಡುತ್ತಿದ್ದರು. ಒಂದು ದಿನ “ಕರೆ” ಮುಗಿದ ಕೂಡಲೇ ಮಸ್ಜಿದ್ ನ ಪದಾಧಿಕಾರಿಯೊಬ್ಬರು ಕೇಳಿದರು, “ನೀವು ಕೊಡುವ ಅದಾನ್ ಸ್ವಲ್ಪ ಬೇಗನೆ ಮುಗಿದು ಬಿಡುತ್ತದೆ, ಇನ್ನಷ್ಟು ರಾಗವಾಗಿ ಕೊಡಬಾರದೇ” ಎಂದು ನಯವಾಗಿ ಆಕ್ಷೇಪಿಸಿದರು. ತನ್ನ ಮೇಲೆ ಎರಗಿ ಬಂದ ಆಕ್ಷೇಪದಷ್ಟೇ ನಯವಾಗಿ ಅದಾನ್ ಕೊಡುವ ವ್ಯಕ್ತಿ ‘ನೀವು ಕೊಡುವ ಸಂಬಳಕ್ಕೆನಾನು ಕೊಡುತ್ತಿರುವ “ಆದಾನ್” ನ್ಯಾಯವಾಗೇ ಇದೆ, ಹೆಚ್ಚು ಕೊಟ್ಟರೆ ಇನ್ನಷ್ಟು ದೀರ್ಘವಾಗಿ, ರಾಗವಾಗಿ ಕೊಡುವೆ’ ಎಂದು ಉತ್ತರಿಸಿದರು. ಇದನ್ನು ಕೇಳಿ ನನಗೆ ತಬ್ಬಿಬ್ಬು, ದೇವರ ಕಾರ್ಯಕ್ಕೂ ಕಾಂಚಾಣದ ನಂಟು ಬೇಕೇ ಎಂದು.
ಮಸ್ಜಿದ್ ನ ಸಧ್ಯದ ಹಣಕಾಸು ಪರಿಸ್ಥಿತಿ ನೋಡಿದಾಗ ಸುದೀರ್ಘ, ಸುಶ್ರಾವ್ಯ ಅದಾನ್ ಕೇಳುವ ಭಾಗ್ಯ ಆಕ್ಷೇಪಿಸಿದ ವ್ಯಕ್ತಿಗೆ ಲಭಿಸುವ ಯೋಗ ಇಲ್ಲ.
ಜಪಾನ್ ದೇಶದ ಜನಸಂಖ್ಯೆ ವರ್ಷ ಕಳೆದಂತೆ ಇಳಿಮುಖ
ಜಪಾನ್ ದೇಶದ ಜನಸಂಖ್ಯೆ ವರ್ಷ ಕಳೆದಂತೆ ಇಳಿಮುಖ ವಾಗುತ್ತಿದ್ದು ಕಂಪೆನಿಗಳು, ಸರಕಾರಗಳು, ಮಾರುಕಟ್ಟೆಗಳು ಜನರನ್ನು ಹುರಿದುಂಬಿಸುತ್ತಿವೆ ಮಕ್ಕಳನ್ನು ಹೆರಲು. ತಮ್ಮ ಜೋಡಿಗಳೊಂದಿಗೆ ಹೆಚ್ಚಿನ ಸಮಯ ಕಳೆಯಲು ಕಂಪೆನಿಗಳ ಉತ್ತೇಜನದಿಂದ ಹಿಡಿದು ದೊಡ್ಡ ಕುಟುಂಬಕ್ಕೆ ಶಾಪಿಂಗ್ ವೌಚರ್ ಪ್ರದಾನ ಮಾಡುವವರೆಗೆ ಆಮಿಷಗಳು galore ಈ ದೇಶದಲ್ಲಿ.
ಜಪಾನೀಯರು ನೀರಸ ಸಂಭೋಗಿಗಳು. ತಮ್ಮ ಅಜೆಂಡಾ ದಲ್ಲಿ ಸಂಭೋಗಕ್ಕೆ ಕೊನೆಯ ಸ್ಥಾನ. ಜಪಾನೀ ಜೋಡಿ ಲೈಂಗಿಕವಾಗಿ ವರ್ಷದಲ್ಲಿ ೪೫ ಸಲ ಮಾತ್ರ ಕೂಡುತ್ತಾರಂತೆ. ಅದೇ ಸಮಯ ಜಾಗತಿಕ ಸರಾಸರಿ ವರ್ಷಕ್ಕೆ ೧೦೩ ಸಂಭೋಗ ಗಳು (ಅಷ್ಟೇನಾ.., ಏನಾಗಿದೆ ಹೈಕ್ಳುಗಳಿಗೆ? ). ಸರಾಸರಿಗಿಂತ ಅರ್ಧಕ್ಕೂ ಕಡಿಮೆ. ಈ ನಿರಾಸಕ್ತಿಗೆ ಸೋಮಾರಿತನವೋ, ಸಮಯದ ಅಭಾವವೋ (ಮೂರೂವರೆ ನಿಮಿಷಕ್ಕೂ ‘ಬರ’ ವೋ?) ಅಥವಾ ಮತ್ಯಾವುದಾದರೂ ಜೈವಿಕ ಕಾರಣವೋ ಅಲ್ಲ. ಶಯ್ಯಾ ಗೃಹದ ಚಟುವಟಿಕೆ ಚಾತುರ್ಯಕ್ಕಿಂತ ಬೋರ್ಡ್ ರೂಂ, ಕ್ಯೂಬಿಕಲ್ ಗಳಲ್ಲಿ ಹೆಚ್ಚು ಸಾಮರ್ಥ್ಯ ತೋರಿಸುವ “ಕೆರಿಯರ್ ಡ್ರಿವನ್” ಗುರಿ. ಅಷ್ಟು ಮಾತ್ರವಲ್ಲ, ಜಪಾನೀಯರು ತಡವಾಗಿ ಮದುವೆಯಾಗುತ್ತಾರೆ. ಮದುವೆಯಾಗಲು ತಡವಾದಾಗ ಎಲ್ಲವೂ ತಡವೇ. ಅಲ್ವಾ?
ಜಪಾನ್ ನ ಈಗಿನ ಜನಸಂಖ್ಯೆ ಸುಮಾರು ೧೩ ಕೋಟಿ. ಬೆಡ್ ರೂಂ ನ ಬಹಿಷ್ಕಾರ ಹೀಗೇ ಮುಂದುವರೆದರೆ 2105 ರ ಹೊತ್ತಿಗೆ ಜಪಾನ್ ಜನಸಂಖ್ಯೆ ಕೇವಲ ನಾಲ್ಕೂವರೆ ಕೋಟಿಯಾಗುತ್ತಂತೆ. ಹಾಗಾಗಿ ಸರಕಾರ, ಮತ್ತು ವ್ಯವಸ್ಥೆ ಹೇಗಾದರೂ ಜೋಡಿಗಳನ್ನು “ಚಂದ್ರ ಮಂಚ” ಕೆ ನೂಕಲು ಉತ್ಸುಕತೆ ತೋರಿಸುತ್ತಿರುವುದು.
ಕಾರ್ಮಿಕರ ಕೊರತೆ ನೀಗಿಸಲು “ರೋಬೋಟ್” ಕಂಡು ಹಿಡಿದ ಜಪಾನ್ ಜನಸಂಖ್ಯೆಯ ಇಳಿತವನ್ನು ತಡೆಯಲು ಯಾವ ಯಂತ್ರ ಕಂಡು ಹಿಡಿಯಬಹುದೇನೋ?
ಅಕ್ಟೋಬರ್ ಒಂದು, ೧೯೬೨
ಅಕ್ಟೋಬರ್ ಒಂದು, ೧೯೬೨. ಈ ದಿನ ಅಮೆರಿಕೆಯ ಕರಿಯರ ಪಾಲಿಗೆ ವಿಶೇಷದಿನ. ಇಂದು ಅಮೆರಿಕೆಯ ಮಿಸ್ಸಿಸಿಪ್ಪಿ ವಿಶ್ವವಿದ್ಯಾಲಯದಲ್ಲಿ ಪ್ರಪ್ರಥಮವಾಗಿ ಕಪ್ಪುಜನಾಂಗಕ್ಕೆ ಸೇರಿದ ವಿದ್ಯಾರ್ಥಿಯನ್ನು ಸೇರಿಸಿಕೊಳ್ಳಲಾಯಿತು. ಅಮೆರಿಕೆಯಚರಿತ್ರೆಬಲ್ಲವರಿಗೆ ಕರಿಯ – ಬಿಳಿಯ ಜನಾಂಗದ ನಡುವಿನ ಕಂದಕ, ತಾರತಮ್ಯದ ಅರಿವು ಇದ್ದೇ ಇರುತ್ತದೆ. ಅಮೆರಿಕೆಯ ಈ ಜನಾಂಗಬೇಧ ನೀತಿ ೧೯೬೨ರಲ್ಲಿ ಮಾತ್ರವಲ್ಲ ಈಗಲೂ ಕೂಡ ಪ್ರಸ್ತುತ. ವ್ಯತ್ಯಾಸವೆಂದರೆ ಈಗಿನ ನೀತಿ ಅಲಿಖಿತ ಎನ್ನಬಹುದು. ಅಂದರೆ ಸರಕಾರ ಮತ್ತು ವ್ಯವಸ್ಥೆ ಜನಾಂಗ ಬೇಧಒಳ್ಳೆಯದಲ್ಲ ಎಂದು ಎಷ್ಟೇ ಸಾರಿದರೂ ಜನ ಮಾತ್ರ ಕೇಳಲೊಲ್ಲರು. ಎಲ್ಲರೂಅಲ್ಲ. ಸಾಕಷ್ಟುಮಂದಿ. ಹುಟ್ಟುಗುಣ….
ಮಿಸ್ಸಿಸಿಪ್ಪಿ ಪ್ರಾಂತ್ಯ ಜನಾಂಗ ಬೇಧ ನೀತಿಗೆ ಹೆಸರುವಾಸಿ. segregationist ಗಳ ತವರೂರು. ಇಲ್ಲಿನ ವಿಶ್ವವಿದ್ಯಾಲದಲ್ಲಿ ಕಪ್ಪುವಿರೋಧಿ ನೀತಿಅಂತ್ಯಗೊಂಡ ಸಂಭ್ರಮ ಈಗ ಅಮೆರಿಕೆಯಲ್ಲಿ.
ಅಮೆರಿಕೆಯ ಈಗಿನ ಅಧ್ಯಕ್ಷ ಬರಾಕ್ ಒಬಾಮ ಕಪ್ಪು ಜನಾಂಗಕ್ಕೆ ಸೇರಿದವರು. ನಾಲ್ಕು ವರ್ಷಗಳ ಹಿಂದೆ ನೆಡದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವನ್ನು ಸಾಧಿಸಿದವರು. ಇದೇ ವರ್ಷದ ನವೆಂಬರ್ತಿಂಗಳಿನಲ್ಲಿ ಮರುಆಯ್ಕೆಗಾಗಿ ರಿಪಬ್ಲಿಕನ್ಪಕ್ಷದ ಮಿಟ್ರಾಮ್ನಿಯವರೊಂದಿಗೆಸೆಣಸುತ್ತಿದ್ದಾರೆ. ಒಬಾಮಡೆಮಾಕ್ರಾಟ್.
ಅಮೆರಿಕೆಯಲ್ಲಿ ಈಗಚುನಾವಣೆಯ ಬಿಸಿ, ಅದರೊಂದಿಗೇ ಹಣಕಾಸು ತಾಪತ್ರಯಗಳ ಬಿಸಿ, ಸಲಿಂಗಿಗಳ ವಿವಾಹದ ಬಿಸಿ, ವಲಸಿಗರ ಬಿಸಿ,….ತರಾವರಿಬಿಸಿ. ಈ ಬಿಸಿ ಸಾಲದುಎನ್ನುವಂತೆ ಒಬಾಮಾರನ್ನು ಹೇಗಾದರೂ ಸೋಲಿಸಲು ರಿಪಬ್ಲಿಕನ್ಪಕ್ಷ ಎಲ್ಲಾಅಸ್ತ್ರಗಳನ್ನೂ ಬಳಸುತ್ತಿದೆ. ಒಬಾಮಾ ಕರಿಯ, ಒಬಾಮ ಸಲಿಂಗಿಪರ, ಒಬಾಮ ಉದಾರವಾದೀ, ಒಬಾಮ anti-christ, ಕೊನೆಗೆಮಹಾಅಸ್ತ್ರಗಳಲ್ಲೇ ಘನಘೋರ ಅಸ್ತ್ರ ಎನ್ನಬಹುದಾದ ಒಬಾಮ ಬಹುಶಃ ಓರ್ವಮುಸ್ಲಿಂ ಎನ್ನುವ ಶಂಕೆ. ಶಂಕೆ, ಗುಮಾನಿ, ಬಹುಶಃಗಳೇ ಇಂದು ಪ್ರಪಂಚವನ್ನು ನಿಷ್ಕಾರುಣ್ಯವಾಗಿ ಹುರಿಯುತ್ತಿರುವುದು. ಒಬಾಮ ಮುಸ್ಲಿಂ ಎನ್ನುವ ಈ ಶಂಕೆ ಜನರಲ್ಲಿ ಬಿತ್ತಿದರೆ ಒಬಾಮ ಚಳ್ಳೆಹಣ್ಣು ತಿನ್ನುವುದು ಖಚಿತ ಎನ್ನುವುದು ರಿಪಬ್ಲಿಕನ್ ಪಂಡಿತರ ಲೆಕ್ಕಾಚಾರ. ಶಂಕೆಗಳು, ಬಹುಶಃಗಳು ಸರ್ವನಾಶವಾಗಿ ಜನ ತಿಳಿವಳಿಕೆ ಪ್ರದರ್ಶಿಸಿಯಾರೇ ಎನ್ನುವುದು ಕಾದು ನೋಡಬೇಕಾದ ಬೆಳವಣಿಗೆ.
ನೋಡಿ, ಈ ಪವಾಡಸ’ದೃಶ್ಯ’
ತನ್ನನ್ನು ಬಡಿದು, ಘಾಸಿಯಾದರೂ ನೇತಾಡುತ್ತಿರುವ ಟ್ರಕ್ ಅನ್ನು ನೀರಿನ ಪಾಲಾಗಲು ಬಿಡದೆ ಪವಾಡ ಸದೃಶ ರೀತಿಯಲ್ಲಿ ಹಿಡಿದಿಟ್ಟ ಸೇತುವೆ ವಂದನಾರ್ಹ. ಟ್ರಕ್ ಸವಾರ ಪಾನಮತ್ತನಾಗಿ ಚಲಾಯಿಸುತ್ತಿದ್ದನೋ, ಅಥವಾ ನಿಯಂತ್ರಣ ತಪ್ಪಿತೋ ಗೊತ್ತಿಲ್ಲ, ತಾನಂತೂ ಪಾರಾದ. ಈ ಘಟನೆ ಬ್ರೆಜಿಲ್ ನಲ್ಲಿ ಸಂಭವಿಸಿದ್ದು.
ಚಿತ್ರ ಎಗರಿಸಿದ್ದು:


