ನಂಬಲು ಅಸಾಧ್ಯವಾದ ರಾಜಕೀಯ ಘಟನೆ ಅಮೇರಿಕೆಯಲ್ಲಿ. ಸರಪಳಿ ಬಿಗಿದು ಆಫ್ರಿಕಾ ದೇಶಗಳಿಂದ ಗುಲಾಮಗಿರಿಗಾಗಿ ಅಮೆರಿಕೆಯ ಕಡಲತೀರದ ಮೇಲೆ ಎಸೆಯಲ್ಪಟ್ಟ ಕರಿಯರ ಪೈಕಿಯವರಾದ ಬರಾಕ್ ಒಬಾಮ ಅಮೆರಿಕೆಯ ಅಧ್ಯಕ್ಷ. ಇದನ್ನು ನೋಡಿದವರಿಗೆ ತಿರುಕನ ಕನಸು ನೆನಪಾಗದಿರದು.
ಕೇವಲ ಕೆಲವೇ ದಶಕಗಳವರೆಗೆ ಮತ ಚಲಾಯಿಸಲೂ ಸಾಧ್ಯವಾಗದಿದ್ದ ನಾಡಿಗೆ ಕರಿಯ ಅಧ್ಯಕ್ಷ. ಕ್ರೈಸ್ತರಾಗಿದ್ದಾರೂ ಬಣ್ಣ ಕಪ್ಪು ಎಂಬ ಒಂದೇ ಕಾರಣಕ್ಕೆ ಚರ್ಚುಗಳಿಗೆ ಪ್ರವೇಶವಿಲ್ಲ. ಬಿಳಿಯರು ಹೋಗುವ ಶಾಲೆಗೆ ಕರಿಯರ ಮಕ್ಕಳು ಹೋಗುವಂತಿಲ್ಲ. ಕರಿಯ ಅಪ್ಪಿತಪ್ಪಿಯೂ ಬಿಳಿ ಹೆಣ್ಣನ್ನು ಮದುವೆಯಾಗುವುದಿರಲಿ, ಕಣ್ಣೆತ್ತಿಯೂ ನೋಡುವಂತಿಲ್ಲ. ಸಾರ್ವಜನಿಕ ಬಸ್ಸುಗಳಲ್ಲಿ ಮುಂದಿನ ಬಾಗಿಲಿನಿಂದ ಹತ್ತುವಂತಿಲ್ಲ. ಒಂದೇ ಎರಡೆ ಅವರ ಮೇಲೆ ನಡೆದ ಅತಿರೇಕಗಳು. ಆ ದೇವರು ಬಿಳಿಯರ ಅಹಂಕಾರಕ್ಕೆ ಸರಿಯಾದ ಮದ್ದನ್ನೇ ಅರೆದ.
ತಮ್ಮ ಉದ್ಘಾಟನಾ ಭಾಷಣದಲ್ಲಿ, ಅರವತ್ತು ವರ್ಷಗಳ ಹಿಂದೆ ತನ್ನ ತಂದೆಗೆ ಹೋಟೆಲಿನಲ್ಲಿ ಊಟ ನಿರಾಕರಿಸಿರಬಹುದಾದ ಅಮೇರಿಕೆಯಲ್ಲಿ ಇಂದು ನಿಮ್ಮೆಲ್ಲರೆದುರಿಗೆ ಸತ್ಯಪ್ರತಿಜ್ಞೆ ಸ್ವೀಕರಿಸಲು ನಿಂತಿದ್ದೇನೆ ಎಂದು ಭಾವುಕರಾದ ಒಬಾಮ ನುಡಿದರು.
ಬೈ ಬೈ ೨೦೦೮
The AccoLade ಎನ್ನೋ ರಾಕ್ ಬ್ಯಾಂಡ್ ಈಗ ಹೆಚ್ಚು ಸುದ್ದಿಯಲ್ಲಿದೆ. ಇದರಲ್ಲೆನಪ್ಪ ವಿಶೇಷತೆ ಎಂದು ನೀವು ಕೇಳಬಹುದು, ಇದು ಒಂದು ಬರೇ ಯುವತಿಯರ ಬ್ಯಾಂಡ್, ಇದರಲ್ಲೂ ವಿಶೇಷತೆ ಇಲ್ಲ ಎನ್ನಿ. ವಿಶ್ವದಾದ್ಯಂತ ಹರಡಿವೆ ಇಂಥ all girls bandಗಳು. ಈಗ fact of the matter ಗೆ ಬರೋಣ.