ಬನ್ನಿ..ಮನೆಗೆ

ಸುಸ್ವಾಗತ,

ಮನೆಯೊಳಕ್ಕೆ ಬಂದಿದ್ದೀರ, ಉಪಚರಿಸಲು ವಿಶೇಷವಾಗಿ ಏನೂ ಇಲ್ಲ ನನ್ನಲ್ಲಿ….

ನಿಲ್ಲಿ, ಸಾಕಷ್ಟು ಸ್ನೇಹವಿದೆ, ಬೇಕಷ್ಟು ಮುಗುಳ್ನಗುವಿದೆ. “ಸೀದಾ ಸಾದಾ” ಜನರ ಗುಂಪಿನಲ್ಲಿ ನನಗೆ ಸುಲಭ ಪ್ರವೇಶ ಸಿಗುತ್ತದೆ. ಕ್ಷೌರ ದಂಗಡಿಯ ಚರ್ಚಾ ವಿಷಯದಲ್ಲಿ ಆಸಕ್ತಿ (ಇಲ್ಲಿ ಎಲ್ಲವೂ ಚರ್ಚಿತ ). ಹೆಸರಿಟ್ಟು ಕರೆಯುವ ವಾಡಿಕೆ ನಿಮ್ಮ ಸೀಮೆ ಕಡೆ ಇದ್ದರೆ ಅಬ್ದುಲ್ ಎಂದು ಕರೆದುಕೊಳ್ಳಿ ನನ್ನ.

ಊರಾ…? ಭದ್ರಾವತಿ !

ನನ್ನ ಬಗ್ಗೆ ಸಾಕಿಷ್ಟು. ಇನ್ನೂ ಹೆಚ್ಚು ಕೇಳಿದರೆ ನನ್ನ ಬೆಕ್ಕು ನಿಮ್ಮನ್ನು too nosey ಅಂದು ಕೊಳ್ಳಬಹುದು.

ನೆಂಪಾದಾಗೆಲ್ಲಾ ನನ್ ಸೇತ್ವೆ ಕಡೆ ಮಕ ಆಕ್ತೀರಿ ತಾನೇ? ನನ್ ಸೇತ್ವೆಗೆ ಆರು ಕಮಾನುಗಳು… ಅಯ್ಯೋ ಒಂದೊಂದ್ರುದು ಒಂದೊಂದ್ ಕತೆ.

14 thoughts on “ಬನ್ನಿ..ಮನೆಗೆ

  1. ಎಚ್  ಆನಂದರಾಮ ಶಾಸ್ತ್ರೀ's avatar ಎಚ್ ಆನಂದರಾಮ ಶಾಸ್ತ್ರೀ ಹೇಳುತ್ತಾರೆ:

    ಎಲ್ಲರಂತೆ ಭವಸಾಗರದ ಜಂಜಾಟದಲ್ಲಿ ಸಿಲುಕಿರುವ ನಾನು ಅದೆಷ್ಟೋ ಸಹೃದಯರ ಹೃದಯವನ್ನು ಇನ್ನೂ ಅರಿತಿಲ್ಲ. ಇಂದು ನಿಮ್ಮ ಹೃದ್ಯ ಬರವಣಿಗೆಗಳನ್ನೋದಿ ನಿಮ್ಮ ಸುಹೃದಯದರಿವು ನನಗಾಯಿತು. ನಿಮ್ಮ ಸಾಹಿತ್ಯರಚನಾಸಾಮರ್ಥ್ಯದ ಅರಿವೂ ಉಂಟಾಯಿತು. ಹೀಗೇ ಬರೆಯುತ್ತಿರಿ.

    ಅಂದಹಾಗೆ, ಭದ್ರಾವತಿಯಲ್ಲಿ ನನ್ನ ಅಕ್ಕ ಇದ್ದಾರೆ. ಅವರ ಮಕ್ಕಳು ಪದ್ಮನಿಲಯ ಹೋಟೆಲ್‌ನ ಮಾಲೀಕರು. ವಿದ್ಯಾರ್ಥಿಯಾಗಿದ್ದಾಗ ಪೇಪರ್ ಟೌನ್ ಪ್ರೌಢಶಾಲೆಯ ಸಮಾರಂಭಕ್ಕೆ ನಾನು ದಾವಣಗೆರೆಯಿಂದ ಬಂದ ನೆನಪು. ನಿಮ್ಮೂರಿನ ಆಕಾಶವಾಣಿಯಲ್ಲಿ ದಶಕಗಳ ಹಿಂದೆ ದಂಡಿಯಾಗಿ ಕಾರ್ಯಕ್ರಮಗಳನ್ನು ನೀಡಿದ್ದೇನೆ.

    ಮಧುರ ನೆನಪುಗಳು ಮನದೆದುರು ನಿಲ್ಲಲು ಕಾರಣರಾದಿರಿ. ಧನ್ಯವಾದ.

  2. Pradeep's avatar Pradeep ಹೇಳುತ್ತಾರೆ:

    ತುಂಭಾ ದಿನದ ನಂತರ ಬಂದಿರುವೆ, ಇನ್ನು ಚಿಕ್ಕ ಹುಡುಗ, ಪಾಪಗಳನ್ನು ಹೊರೋಕೆ ಹೇಗೆ ಸಾದ್ಯ? ಇರಲಿ, ನಿಮ್ಮ ಬರವಣಿಗೆ ತುಂಭಾ ಹಿಡಿಸಿತು. ಹೇಗಿದೆ ಕೆಲಸ?,

    ಪ್ರದೀಪ್

  3. Ambika's avatar Ambika ಹೇಳುತ್ತಾರೆ:

    ನಿಮ್ಮನೆಗೆ ಬರಬೇಕು ಅಂದರೆ ಲಾಗಿನ್ ಆಗಬೇಕಾ ? ಉಚಿತ ಪ್ರವೇಶ ಇದೆಯಾ ?
    ಸಾಹಿತ್ಯದ ಊಟ ಕೊಡ್ತೀರಿ ಅಂತ ಗೊತ್ತಾಯ್ತು. ಬರ್ಲಾ, ಲಾಗಿನ್ ಅಂತ ಬ್ಲಾಗ್ನಲ್ಲಿ ಎಲ್ಲಿ ಬರೆದಿದೆ ಅಂತ ಹುಡುಕ್ತಾ ಇದ್ದೆ.
    ಸಾಹಿತ್ಯದೂಟದ ಸವಿ ನೀಡುತ್ತಿರುವ ನಿಮಗೆ ಧನ್ಯವಾದಗಳು.
    ಅಂಬಿಕಾ

  4. ಈದಿನದ ಉದಯವಾಣಿಯ ಅಶೋಕ ಕುಮಾರ ರ “ನಿಸ್ತ೦ತು ಸ೦ಸಾರ“ ಅ೦ಕಣದಲ್ಲಿ ಹಳೇಸೇತುವೆಯನ್ನು ಓದುಗರಿಗೆ ಪರಿಚಯಿಸಿದ್ದಾರೆ. ಅದಕ್ಕಾಗಿ ಅಶೋಕರಿಗೂ ಹಾಗೂ ನಿಮಗೂ ಧನ್ಯವಾದಗಳು.
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

  5. ರವಿ's avatar ರವಿ ಹೇಳುತ್ತಾರೆ:

    ಬರ್ರಿ ಸೇತ್ಮೆ ಮೇಲೆ…ಇಲ್ಲಿಂದ ಎಲ್ಲಾ ಕಾಣ್ತೈತೆ ಅಂತ ಹೇಳ್ತೀರಿ, ಬಂದ್ರೆ ಏನೂ ಕಾಣ್ತಾ ಇಲ್ಲ.. ಎಲ್ಲ ಹಳೇದೇ.. ಎಲ್ಲಿದ್ದೀರಿ ಅಬ್ದುಲ್? ಪ್ರಪಂಚದ ಚಿತ್ರ ವಿಚಿತ್ರ ಸಂಗತಿಗಳನ್ನು ತಿಳಿಸುವ ವಿಶಿಷ್ಟ ಬ್ಲಾಗ್ ನಿಮ್ಮದು. ಹಳೇ ಸೇತ್ವೆ ಇರಬಹುದು ಅದರೂ ಬಹಳ ಗಟ್ಟಿ ಇರತ್ತೆ ಬಿಡಿ. ದಯವಿಟ್ಟು ಟ್ರಾಫಿಕ್ ಹೆಚ್ಚಿಸಿ.. 🙂

ನಿಮ್ಮ ಟಿಪ್ಪಣಿ ಬರೆಯಿರಿ