ನನ್ನ ಫ್ಲಾಟ್ ನ ಹತ್ತಿರ ಐದಾರು ಸೌದಿ ಹುಡುಗರು ಬೀದಿ ಫುಟ್ ಬಾಲ್ ಆಡುತ್ತಿದ್ದರು. ಆಟದ ಮಧ್ಯೆ ಸುಮಾರು ೧೦-೧೨ ವರ್ಷ ಪ್ರಾಯದ ಹುಡುಗ ಅಲ್ಲೇ ಪಕ್ಕದಲ್ಲಿ ಊರುಗೋಲಿನೊಂದಿಗೆ ನಿಂತಿದ್ದ ವ್ಯಕ್ತಿಯ ಹತ್ತಿರ ಹೋಗಿ ಆತನ ಕಾಲಿಗೆ ಹೇಗೆ ಏಟಾಯಿತು ಎಂದು ಅನುಕಂಪದಿಂದ ವಿಚಾರಿಸಿ, ಆತನಿಗೆ ಹಸ್ತ ಲಾಘವ ನೀಡಿ ಮರಳಿದ ತನ್ನ ಆಟ ಮುಂದುವರೆಸಲು.
�ಬದುಕಿನ ನಾಗಾಲೋಟದಲ್ಲಿ ನಮಗೆ ಇಂಥ ದಯೆ ತೋರಿಸಲು ಸಮಯ ಸಿಗೋಲ್ಲ, ಅಥವಾ ಅದರ ಕಡೆ ನಾವು ಗಮನ ಹರಿಸೋಲ್ಲ. ಈ ಪುಟ್ಟ ಹುಡುಗ ಒಂದು ಸುಂದರ ಪಾಠ ನನಗೆ ನೀಡಿದ. ಎಲ್ಲೆಲ್ಲೂ ಹಿಂಸೆ, ಅಸಹನೆ, ಹಗೆ, ಧ್ವೇಷ, ಅವುಗಳ ಮಧ್ಯೆ ಇಂಥ ಅವಿಸ್ಮರಣೀಯ ದೃಶ್ಯ.
ಅರಬ್ ಅಥವಾ ಅರಬೇತರ, ಮಾನವೀಯತೆ ಮಾತ್ರ ನಿರಂತರ, ಅಲ್ವಾ?
#ಅರಬ್ #ದಯೆ #ಅನುಕಂಪ #ಸೌದಿ