ಹೊಡಿಯೋ ಗಂಡನಿಗೆ ಪ್ರೀತಿ ಜಾಸ್ತಿ ಅಂತೆ

ಹೊಡಿಯೋ ಗಂಡನಿಗೆ ಪ್ರೀತಿ ಜಾಸ್ತಿ ಅಂತೆ. ನಮ್ಮಲ್ಲಿ ಮಾತ್ರ ಅಲ್ಲ, ರಶ್ಯಾದಲ್ಲೂ ಇದೇ ನಂಬಿಕೆ.

ರಷ್ಯಾದಲ್ಲಿ, ಹಿಂಸೆಗೆ ತಿರುಗುವ ಗೃಹ ಕಲಹಕ್ಕೆ ಶಿಕ್ಷೆ ಕಡಿಮೆ ಮಾಡುವ ಬಗೆಗಿನ ಕಾಯಿದೆಗೆ ಅಧ್ಯಕ್ಷ ಪ್ಯೂಟಿನ್ ಸಹಿ ಹಾಕಿದ್ದಾರೆ. ಅದರ ಬೆನ್ನಲ್ಲೇ ಅಲ್ಲಿನ ಪ್ರಸಿದ್ಧ ಪತ್ರಿಕೆಯೊಂದು ಗಂಡಂದಿರಿಂದ ಹೊಡೆತ ತಿನ್ನೋ ನಾರೀಮಣಿಗಳಿಗೆ ಮುತ್ತಿನ ಹಾರದಂಥ ಸಲಹೆಯನ್ನೂ ಕರುಣಿಸಿದೆ. ಅದೆಂದರೆ…

ಮಹಿಳೆಯರು ತಮ್ಮ ಮೈಮೇಲಿನ ಬರೆ, ಬಾಸುಂಡೆಗಳ ಬಗ್ಗೆ ಹೆಮ್ಮೆ ತಾಳಬೇಕಂತೆ. ಶಿವ ಸಿವಾ…ಎಲ್ಲಿಗ್ ಬಂದು ಮುಟ್ತಪ್ಪಾ ಈ ತಿಳಿಗೇಡಿತನ?

ತಡೀರಿ, ಇನ್ನಷ್ಟು ಕೋಸಂಬ್ರಿ ಬರ್ತಾ ಇದೆ…

ಅಲ್ಲಿನ ಖ್ಯಾತ ಸಮಾಜ ಶಾಸ್ತ್ರಜ್ಞ ಈ ಮುತ್ತನ್ನು ಉದುರಿಸಿದ, ಹೆಕ್ಕಿಕೊಳ್ರಪ್ಪಾ ಅಂತ. ಅದೇನೂಂದ್ರೆ….

ಹೊಡಿಯೋ ಬಡಿಯೋ ಗಂಡುಸ್ರು ಗಂಡು ಮಕ್ಳನ್ನೇ ಹುಟ್ಟುಸ್ತಾರಂತೆ.

ಅಲ್ಲಾ, ಇದೆಲ್ಲಾ ಓದಿದ್ ಮ್ಯಾಲೆ, ಒಂದ್ಸಲ ರಷ್ಯಾಗ್ ಹೋಗಿ ಹಣಕಿ ಹಾಕ್ ಬರೋಣ ಅಂತ ಅನ್ನುಸ್ತಾ ಇಲ್ವಾ?

ಈಗ ಮಲ್ಕಳಿ, ಬಾಸುಂಡೆ, ಬೋಂಡಾ ಎಲ್ಲಾ ಕನಸಲ್ಲಿ ಪಾರ್ಸಲ್ ಬರತ್ತೆ. ಗುಡ್ ನೈಟ್.

ನಿಮ್ಮ ಟಿಪ್ಪಣಿ ಬರೆಯಿರಿ