kiss and tell. ಕಿಸ್ ಅಂಡ್ ಟೆಲ್ ಎಂದರೆ ಯಾವುದಾದರೂ ಹುಡುಗಿಯನ್ನು ಪಟಾಯಿಸಿ ತನ್ನ ಮಿತ್ರ ವೃಂದಕ್ಕೆ ಟಾಮ್ ಟಾಮ್ ಮಾಡೋದು. ಇದಕ್ಕೆ ಕಿಸ್ ಅಂಡ್ ಟೆಲ್ ಎನ್ನುತ್ತಾರೆ. ಇದು ಸರಿಯಾದ ವರ್ತನೆಯಲ್ಲ ಆದರೂ ಈ ವರ್ತನೆ ಹುಡುಗರಿಗೆ ಕಿಕ್ ಕೊಡುತ್ತದೆ, ಅವನ ಪ್ರತಿಷ್ಠೆ ಮಿತ್ರ ರ ಸರ್ಕಲ್ ನಲ್ಲಿ ಹೆಚ್ಚುತ್ತದೆ. ಕಿಕ್ ಮತ್ತು ಪ್ರತಿಷ್ಠೆ ಬಂದಾಗ ಹೆಣ್ಣಿನ ಭಾವನೆಗೆ, ಮಾನಕ್ಕೆ ಕಿಮ್ಮತ್ತಿಲ್ಲ. ಇರಲಿ, ಇಷ್ಟು ಸಾಕು ಕಿಸ್ ಅಂಡ್ ಟೆಲ್ ನ ಪುರಾಣ. ಈಗ ‘ಕಿಲ್ ಅಂಡ್ ಟೆಲ್’ ಗೆ ಬರೋಣ. ಏನಪ್ಪಾ ಇದು ಕಿಲ್ ಅಂಡ್ ಟೆಲ್? ಹೊಸ ವಿದ್ಯಮಾನ?
ಕಳೆದ ಮೇ ತಿಂಗಳಲ್ಲಿ ಅಮೇರಿಕಾ ಬಿನ್ ಲಾಡೆನ್ ನ ಬೇಟೆ ಆಡಿತು. ಅಮೆರಿಕೆಯ ನಾವಿಕ ಸೇನೆಯ ಸೀಲ್ ಕಮಾಂಡೋಗಳು ಅಚ್ಚರಿದಾಯಕ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದ ಸೇನೆಯ ಕೇಂದ್ರದ ಬಳಿಯೇ ಅವಿತಿದ್ದ ಲಾಡೆನ್ ನನ್ನು ಮುಗಿಸಿ ಅಮೆರಿಕನ್ನರು ನಿರಾಳ ಭಾವ ಅನುಭವಿಸುವಂತೆ ಮಾಡಿದರು. ಬಿನ್ ಲಾಡೆನ್ ಅಡಗುತಾಣದ ಬಗ್ಗೆ ವಿವರ ಕೊಟ್ಟಿದ್ದು ಪಾಕಿಸ್ತಾನದ ವೈದ್ಯನೊಬ್ಬ. ಈಗ ಸೀಲ್ ಕಮಾಂಡೋಗೆ ಸೇರಿದ ಒಬ್ಬ ಈ ಕಾರ್ಯಾಚರಣೆಯ ಬಗ್ಗೆ ಪುಸ್ತಕ ಬರೆದ. ಅಮೆರಿಕೆಗೆ ಈ ಕ್ರಮದಿಂದ ಅಸಮಾಧಾನ. ಅತ್ಯಂತ ರಹಸ್ಯ ಕಾರ್ಚಾರಣೆ ಯನ್ನ ಈ ರೀತಿ ಬಹಿರಂಗ ಗೊಳಿಸಿದರೆ ಆಗುವ ಪರಿಣಾಮದ ಬಗ್ಗೆ ಆತಂಕ. ಈ ಪುಸ್ತಕ ಬರೆದ ಸೀಲ್ ಕಮಾಂಡೋ ಮಾಡಿದ್ದು kill and tell “ಕಿಲ್ ಅಂಡ್ ಟೆಲ್” ಆಲ್ವಾ?