ಈತನ ಹೆಣ್ಣಿನ ಚಪಲವೇ…

ನಮ್ಮ ಕಡೆಯ ಗುಬ್ಬಿಯನ್ನು ಹೋಲುವ “ಮಾರ್ಶ್ ರೆನ್” marsh wren ಉತ್ತರ ಅಮೇರಿಕಾ ಪ್ರದೇಶದಲ್ಲಿ ಕಾಣ ಸಿಗುವ ಒಂದು ವಿಶಿಷ್ಟ ಗುಣಗಳನ್ನ ಪ್ರದರ್ಶಿಸುವ ಪಕ್ಷಿ. ಇವು polygynous, ಅಂದರೆ ಎಷ್ಟು ಸಾಧ್ಯವೋ ಅಷ್ಟು ಹೆಣ್ಣು ಗಳೊಂದಿಗೆ ಕೂದಲು ಬಯಸುವ ಪೋಲಿ ಹಕ್ಕಿ. ಈ ಹಕ್ಕಿ ಹಗಲೂ ರಾತ್ರಿಯೆನ್ನದೆ ಹಾಡುತ್ತದಂತೆ. ಸುಮ್ಮಾರು ಇನ್ನೂರು ತೆರನಾದ ಗೀತೆಗಳನ್ನು ಹಾಡಲು ಇವಕ್ಕೆ ಸಾಧ್ಯವಂತೆ. ಬಹುಶಃ ಈ ಕಾರಣ ಕ್ಕಾಗೇ ಇರಬೇಕು ಇವುಗಳ ಬಲೆಯಲ್ಲಿ ಬೀಳಲು ಹೆಣ್ಣುಗಳು ತವಕಿಸೋದು. ಇವುಗಳ ಹೆಣ್ಣಿನ ಚಪಲ ಎಷ್ಟಪ್ಪಾ ಎಂದರೆ ಒಂದು ಹಕ್ಕಿ ತನ್ನ ಕೊಕ್ಕಿನಲ್ಲಿ ಜೇಡನ ನನ್ನು ಹಿಡಿದು ಕೊಂಡು, ಬ್ಯಾಲನ್ಸ್ ಮಾಡುತ್ತಾ  ಹೆಣ್ಣನ್ನು ಆಕರ್ಷಿಸಲು ಹಾಡಲು ಪ್ರಯತ್ನಿಸಿದ್ದು ಒಬ್ಬ ಪಕ್ಷಿ ಪರಿಣಿತ ನೋಡಿದ್ದಾನಂತೆ.  ಇವುಗಳ ಸಾಮರ್ಥ್ಯ ಇಷ್ಟಕ್ಕೆ ಮಾತ್ರ ಸೀಮಿತ ಅಲ್ಲ, ಕನಿಷ್ಠ ಪಕ್ಷ ೧೪ ರಿಂದ ೨೨ ಗೂಡು ಗಳನ್ನು ಸಹ ಕಟ್ಟುತ್ತವಂತೆ.  

ಇವು ಡಮ್ಮಿ ಗೂಡುಗಳು. ತನ್ನನ್ನು ತಿನ್ನಲು ಬರುವ ಶತ್ರುಗಳಿಗೆ ಚಳ್ಳೆ ಹಣ್ಣು ತಿನ್ನಿಸಲು. ಸದ್ದಾಮ್ ಹುಸೇನ್ ತನ್ನನ್ನು ಹತ್ಯೆ ಗೈಯಲು ಬರುವವರಿಗೆ ಫೂಲ್ ಮಾಡಲು ತನ್ನಂತೆಯೇ ಇರುವ ಸುಮಾರು ೧೨ ಜನರನ್ನು ನೇಮಕ ಮಾಡಿದ್ದನಂತೆ. ಈ ಹಕ್ಕಿ ಸದ್ದಾಮ್ ಗಿಂತಲೂ ಜಾಣ.

ಈಗ ಹೇಳಿ, ಈ ಮಾರ್ಶ್ ರೆನ್ ಪಕ್ಷಿ ಹೈ ಸ್ಕೂಲಿನಲ್ಲಿದ್ದಾಗ ಆಂಗ್ಲ ವ್ಯಾಕರಣದಲ್ಲಿ ತಲೆ ತಿಂದ ‘ರೆನ್ ಅಂಡ್ ಮಾರ್ಟಿನ್’ ಗಿಂತ ಎಷ್ಟೋ ವಾಸಿ, ಆಲ್ವಾ?

2 thoughts on “ಈತನ ಹೆಣ್ಣಿನ ಚಪಲವೇ…

  1. SSNK's avatar Kumar ಹೇಳುತ್ತಾರೆ:

    ನಿಮ್ಮ ಲೇಖನವನ್ನು ಓದಿದಾಗ ನನಗೆ ನೆನಪಾಗಿದ್ದು, ಇದೇ ತರಹ ಅನೇಕ ರೀತಿಯಲ್ಲಿ ಹಾಡುವ ಮತ್ತು ಎಲ್ಲ ರೀತಿಯ ಶಬ್ದಗಳನ್ನೂ ಅನುಕರಿಸುವ ಮತ್ತೊಂದು ಹಕ್ಕಿ:
    http://ssnarendrakumar.blogspot.com/2012/08/lyrebird-this-is-amazing-bird.html

ನಿಮ್ಮ ಟಿಪ್ಪಣಿ ಬರೆಯಿರಿ