ರಾಮಾಯಣದಲ್ಲಿ ನಮ್ಮೆಲ್ಲರ ಕಲ್ಪನೆಯನ್ನು ಹಿಡಿದಿಡುವ ಮಹತ್ತರ ಪಾತ್ರ ಎಂದರೆ ಹನುಮಂತನದು. ಸ್ವಾಮಿ ನಿಷ್ಠೆ ಮತ್ತು ಶೌರ್ಯಗಳ ಸಂಕೇತವಾದ ಹನುಮಾನ್ ಹಲವು ಹೆಸರುಗಳಿಂದ ನಮಗೆ ಪರಿಚಿತ. ಚಿಕ್ಕವನಿದ್ದಾಗ ನಮ್ಮ ನೆರೆಯವರೊಂದಿಗೆ ಭದ್ರಾವತಿ ಸಮೀಪದ ಸುಣ್ಣದ ಹಳ್ಳಿಯ ಆಂಜನೇಯನ ದೇವಸ್ಥಾನಕ್ಕೆ ಒಂದೆರಡು ಬಾರಿ ಭೇಟಿ ಕೊಟ್ಟು ದೇವಸ್ಥಾನದಲ್ಲಿ ನೇತು ಹಾಕಿದ್ದ ಘಂಟೆ ಬಾರಿಸಿ ಪ್ರಸಾದ ಸವಿದಿದ್ದೆ. ಭಾರತದಲ್ಲಿ ಆಂಜನೇಯನ ದೇವಸ್ಥಾನಗಳಿಗೆ ಬರವಿಲ್ಲ. ಆದರೆ ಪಾಕಿಸ್ತಾನದಲ್ಲೂ ಆಂಜನೇಯನ ಇರುವಿಕೆ ಇಂದು ನನ್ನ ಕಣ್ಣಿಗೆ ಬಿತ್ತು. ಲಾಹೋರ್ ನಗರದ ಸಂಗ್ರಹಾಲಯದಲ್ಲಿ ವಿರಾಜಮಾನ ಹನುಮಂತನ ಚಿತ್ರ ಮೇಲಿನದು.
ಚಿತ್ರ ಕೃಪೆ: ಪಾಕಿಸ್ತಾನಿ ವನಿತೆ ಮಾಹಮ್ ತಾರಿಕ್ ರವರ flikr ಖಾತೆಯಿಂದ

ವಸ್ತು ಸಂಗ್ರಹಾಲಯದಲ್ಲಿರುವುದರಿಂದ ಅದಿನ್ನೂ ಭದ್ರವಾಗಿದೆ.
ಪಾಕಿಸ್ತಾನದಲ್ಲಿ ಸಹಸ್ರಾರು ದೇವಾಲಯಗಳು ನಾಶವಾಗಿವೆ, ಅಲ್ಲಿದ್ದ ಅದ್ಭುತ ವಿಗ್ರಹಗಳು ಭಗ್ನಗೊಂಡಿದೆ.
ಬಾಂಗ್ಲಾದೇಶದಲ್ಲೂ ಇದೇ ಕಥೆ. ಅಲ್ಲಿ ನಾಶವಾಗಿರುವ ದೇವಾಲಯಗಳು ಅಸಂಖ್ಯಾತ.
ಆಫ಼್ಘಾನಿಸ್ತಾನದಲ್ಲಿ ಕೆಲವು ವರ್ಷಗಳ ಹಿಂದೆ ಬಾಮಿಯಾನ್ ಬುದ್ಧನ ಪುರಾತನ ವಿಗ್ರಹಗಳನ್ನು ನಾಶಗೊಳಿಸಿದ ಸುದ್ದಿಗಳು ಪತ್ರಿಕೆಗಳಲ್ಲಿ ಅನೇಕ ದಿನಗಳವರೆಗೆ ಬಂದಿತ್ತು.
ಪಾಕಿಸ್ತಾನದಿಂದ ಇಂದು ಬಂದಿರುವ ಸುದ್ದಿ ನೋಡಿ: http://www.ndtv.com/article/world/historic-hindu-temple-vandalised-in-pakistan-213547?pfrom=home-otherstories
ಈ ರೀತಿ ಮಾಡಿದವರನ್ನು ಮತಾಂಧರೆಂದು ಕರೆದು ಸಮಾಧಾನ ಮಾಡಿಕೊಂಡುಬಿಡುತ್ತೇವೆ.
ಆದರೆ, ಮುಸ್ಲಿಂ ಬಹುಸಂಖ್ಯಾತ ದೇಶಗಳಲ್ಲಿ ಏಕೆ ಈ ರೀತಿಯ ಮತಾಂಧತೆ ಹೆಚ್ಚಿದೆ?
ಅವರೇಕೆ ಅನ್ಯರ ನಂಬಿಕೆಗಳನ್ನು ಗೌರವಿಸುವುದಿಲ್ಲ? ಅದೇಕೆ ಅಷ್ಟೊಂದು ಅಸಹಿಷ್ಣುತೆ!?
ಒಂದು ಪ್ರದೇಶ ಮುಸಲ್ಮಾನ ಬಹುಸಂಖ್ಯಾತವಾದೊಡನೆ ಈ ರೀತಿ ಆಗುತ್ತದೆಯೇ?