Bridgestone ಟೈರ್ ನವರ ಜಾಹೀರಾತು. we are by your side. ಮತ್ತೊಂದು ಕಂಪೆನಿಯೂ ಇದೇ ರೀತಿಯ ಅರ್ಥ ಬರುವ ಜಾಹೀರಾತನ್ನು ಮಾಡಿತ್ತು. ಅಮೆರಿಕೆಯ ವಿರುದ್ಧದ ೯/೧೧ ಧಾಳಿಯ ನಂತರ ಕಂಗೆಟ್ಟ ಅಮೆರಿಕೆಯ ಅಧ್ಯಕ್ಷ ಜಾರ್ಜ್ ಬುಶ್ ಕ್ರುದ್ಧರಾಗಿ ವಿಶ್ವವನ್ನು ಕೇಳಿದ್ದು ನೀವು ನಮ್ಮ ಪರವೋ, ಅಲ್ಲವೋ? ಈ ಮಾತುಗಳಿರಬೇಕು ಜಾಹೀರಾತಿಗೆ ಸ್ಫೂರ್ತಿ.
ಒಂದು ರೀತಿಯ ಬೀದಿ ಜಗಳಗಂಟರ ಟೋನ್ ಎನ್ನಬಹುದು ಜಾರ್ಜ್ ಬುಶ್ ರದು. ಆದರೆ ಅಮೆರಿಕೆಯ ಅಧ್ಯಕ್ಷ ಎಂದ ಮೇಲೆ ‘ಸಬ್ ಕುಚ್ ಚಲ್ತಾ ಹೈ’. ಅಮೆರಿಕೆಯನು ಸಾಂತ್ವನ ಗೊಳಿಸಲು ವಿಶ್ವದ ನಾಯಕರಿಗಳ ದಂಡು ಅಮೆರಿಕೆಯ ರಾಜಧಾನಿಗೆ ಬಂದಿತು. ಬಂದವರು ಶ್ವೇತಭವನದಲ್ಲಿ ಅಧ್ಯಕ್ಷರನ್ನು ಭೆಟ್ಟಿ ಮಾಡಿದ ನಂತರ ಅಲ್ಲಿ ಇರಿಸಲಾಗಿದ್ದ ದಾಖಲೆ ಪುಸ್ತಕದಲ್ಲಿ ತಮ್ಮ ಬೆಂಬಲ ಅಮೆರಿಕೆಗೆ ಸಾರಿದರು. ಈ ಘಟನೆಯ ನಂತರ, ಮತ್ತು ತನ್ನ ಅಧಿಕಾರಾವಧಿ ಉದ್ದಕೂ ಜಾರ್ಜ್ ಬುಶ್ ವಿಶ್ವಕ್ಕೆ gaffe ಗಳನ್ನು ಉಣಬಡಿಸುತ್ತಾ ಹೋದರು. ಅಂಥ gaffe ಗಳ ಬಗ್ಗೆ ನೆನಪಾದಾಗಲೆಲ್ಲಾ ನಿಮ್ಮೊಂದಿಗೆ ಮೆಲುಕು ಹಾಕುತ್ತೇನೆ.