ವೇದ ಸುಳ್ಳಾದರೂ, ಗಾದೆ ಸುಳ್ಳಾಗದು. ಈ ಕೆಳಗಿನ ಗಾದೆ ಸ್ವಲ್ಪ ವಿಚಿತ್ರವಾಗಿದೆ, tread carefully.
“A man who likes a lot of salt in his food is very much in love with his wife.” – Albanian saying.
ಮೇಲಿನದು ಅಲ್ಬೇನಿಯಾ ದೇಶದ ಗಾದೆ. ತನ್ನ ಆಹಾರದಲ್ಲಿ ಹೆಚ್ಚು ಉಪ್ಪನ್ನು ಬಯಸುವವನು ತನ್ನ ಹೆಂಡತಿಯಲ್ಲಿ ಹೆಚ್ಚು ಅನುರಕ್ತನಾಗಿರುವನು.
ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ ಎನ್ನುವ ಗಾದೆ ನಮ್ಮಲ್ಲಿ ಪ್ರಚಲಿತವಿದ್ದರೆ ಅಲ್ಬೇನಿಯಾದ ಗಾದೆ ಅರ್ಧಾಂಗಿನಿಯ ಕಡೆ ವಾಲುವಂಥದ್ದು. ಅದರಲ್ಲೇನು ತಪ್ಪು ತಕ್ಕಳಿ, ನಮಗೆ ‘ಅಮ್ಮ’ ಪ್ರಯಾರಿಟಿ, ಅವರಿಗೆ ‘ಅಮ್ಮಾವ್ರು’ ಪ್ರಯಾರಿಟಿ ಅಷ್ಟೇ.
ವಿ. ಸೂ: ಮಡದಿಯನ್ನು ಇಂಪ್ರೆಸ್ ಮಾಡಲೆಂದು ಉಪ್ಪು ಜಾಸ್ತಿ ಹಾಕಿಸಿಕೊಂಡು ಬಿ. ಪಿ. ಯನ್ನು ತಾರಕಕ್ಕೇರಿಸಿ ಕೊಂಡೆ ಎಂದು ಮಾತ್ರ ನನ್ನನ್ನು ಹಳಿಯಬೇಡಿ.