ಸುತ್ತೀ ಬಳಸೀ ನಾವು ಹೇಳುತ್ತಿದ್ದ ಸ್ಥಳಕ್ಕೇ ಬರುತ್ತಿದೆ ವಿಶ್ವ. ಹುಡುಗಿಯರು ತುಂಡು ಲಂಗ ತೊಡಬಾರದಂತೆ. ಓಹೋ, ತಾಲಿಬಾನಿಗಳಿಗೆ ಏನು ಕೆಲಸ, ಇಂಥ ಕೆಲಸಕ್ಕೆ ಬಾರದ ವಿಷಯಗಳ ಕಡೆಗೇ ಅವರ ಗಮನ ಅಂದಿರಾ? ತಾಲಿಬಾನ್ ಗವಿ ಸೇರ್ಕೊಂತು, ಮುಲ್ಲಾ ಉಮರ ಸತ್ನಂತೆ, ಅಂಗಂತ ನ್ಯೂಸು.
ಮೇಲಿನ ಈ ತುಂಡು ಲಂಗದ ಕಟ್ಟಳೆ ಬಂದಿದ್ದು ತಾಲಿಬಾನ್ ನಿಂದ ಅಲ್ಲ. ಇಂಗ್ಲೆಂಡಿನ ಶಾಲೆಯೊಂದು ತುಂಡು ಲಂಗ ತೊಡಕೂಡದು ಎಂದು ತಾಕೀತು ಮಾಡಿದೆ ತನ್ನ ವಿದ್ಯಾರ್ಥಿನಿಯರಿಗೆ.
ತುಂಡು ಲಂಗ ಮೊಣಕಾಲಿನಿಂದ ಸ್ವಲ್ಪ, ಒಂಚೂರು ಮೇಲಿದ್ದರೆ ಸಾಕು ಎಂದರೆ ಹುಡುಗಿಯರು ಈ ನಿಯಮವನ್ನು ಉಲ್ಟಾ ಮಾಡಿ ಕೊಂಡು ಮೇಲಿನಿಂದ ಒಂಚೂರು ಕೆಳಗೆ ಉಡಲು ಆರಂಭಿಸಿದಾಗ ಶಾಲೆಗೆ ತೊಡಕಾಗಿ ಕಂಡಿತು. ಶಾಲೆಯ ಅಧಿಕಾರಿಣಿ ಹೇಳಿದ ಮಾತು “the pupils cycled to school and short skirts looked “dreadful” on girls who cycled. “We have a very active curriculum and trousers are much more practical and comfortable.” ತುಂಡು ಲಂಗ ತೊಟ್ಟು ಸೈಕಲ್ ಹೊಡೀವಾಗ “dreadful” ಆಗಿ ಕಾಣುತ್ತಂತೆ. “ಡ್ರೆಡ್ ಫುಲ್ಲೋ”, “ಡಿಲೈಟ್ ಫುಲ್ಲೋ” ನೋಡುಗನ ಕಣ್ಣಿನ ಮೇಲೆ ಡಿಪೆಂಡ್ಸ್.
“ಬಾ, ಇಲ್ಬಂದು ನೋಡು” ಎಂದು ಕರೆ ನೀಡುವ ಉಡುಗೆ ನಮ್ಮ ಹುಡುಗಿಯರು ತೊಡೋದು ಬೇಡ ಎನ್ನುವ ಕಾರಣಕ್ಕಾಗಿ ಪೋರಿಯರು ಪ್ಯಾಂಟ್ ಧರಿಸಲು ನಾವು ಆದೇಶಿಸಿದ್ದು ಎಂದು ಶಾಲೆಯ ಅಂಬೋಣ. ಈಗ ಮೇಲಿನ ಶಾಲೆ ಸೆಕ್ಯುಲರ್ ಆಗಿರದೆ ಬೇರೆ ಯಾವುದಾದರೂ ಆಗಿದ್ದಿದ್ದರೆ? ಮುಸ್ಲಿಮರು ನಡೆಸುವುದಾಗಿದ್ದಿದ್ದರೆ? ಓಹೋ, ಬಂದರು ತಾಲಿಬಾನಿಗಳು, ಪ್ರಪಂಚವನ್ನ ಆರನೇ ಶತಮಾನಕ್ಕೋ, ಶಿಲಾಯುಗಕ್ಕೋ ಕರೆದು ಕೊಂಡು ಹೋಗಲು ನೋಡುವ ಮೂಲಭೂತ ವಾದಿಗಳು ಎಂದು ಜರೆದು ತಮ್ಮ ನಾಲಗೆಯ, ಕೀಲಿಮಣೆಯ, ಲೇಖನಿಯ ಚಪಲ ತೀರಿಸಿ ಕೊಳ್ಳುತ್ತಿದ್ದರು.