ಮಗಳ ಹೆಸರು “ಫೇಸ್ ಬುಕ್”

ಉತ್ತರ ಆಫ್ರಿಕಾ ಮತ್ತು ಮಧ್ಯಪ್ರಾಚ್ಯದ ಕ್ರಾಂತಿಗಳನ್ನು ಗಮನಿಸಿದವರಿಗೆ ಆ ಕ್ರಾಂತಿಗಳ ಹಿಂದೆ ಸಾಮಾಜಿಕ ವೆಬ್ ತಾಣಗಳು ಹೇಗೆ ಕೆಲಸ ಮಾಡಿದವು ಎಂದು ತಿಳಿದೇ ಇದೆ. ಈಜಿಪ್ಟ್ ದೇಶದ ಕ್ರಾಂತಿಯಲ್ಲಿ ಫೇಸ್ ಬುಕ್ ಮತ್ತು ಟ್ವಿಟ್ಟರ್ ಗಳ ಪಾತ್ರ ಹಿರಿದು.  ಮೊದಲ ಸಲ ತಂದೆಯಾದ ಜಮಾಲ್ ಇಬ್ರಾಹೀಂ ಹುಟ್ಟಿದ ಮಗುವಿಗೆ ಫೇಸ್ ಬುಕ್ ಎಂದು ಹೆಸರಿಟ್ಟು ಒಬ್ಬ ಸರ್ವಾಧಿಕಾರಿಯನ್ನು ಪದಚ್ಯುತಿಗೊಳಿಸುವಲ್ಲಿ ಸಕ್ರಿಯ ಪಾತ್ರ ವಹಿಸಿದ ಫೇಸ್ ಬುಕ್ ಗೆ ತನ್ನದೇ ಆದ ವಿಚಿತ್ರ ಆದರೂ ವಿಶಿಷ್ಟ ರೀತಿಯಲ್ಲಿ ಕೃತಜ್ಞತೆ ಸಲ್ಲಿಸಿದ. ಹಾಗೆಯೇ ಫೇಸ್ ಬುಕ್ ನ ಸ್ಥಾಪಕ Mark Zuckerberg  ಈ gesture ನಿಂದ ಇಂಪ್ರೆಸ್ ಆಗಿ ತನ್ನ ಮಗಳಿಗೆ ಏನಾದರೂ ಉಡುಗೊರೆ ಕಳಿಸಬಹುದು ಎನ್ನುವ ಆಸೆ ಕೂಡಾ ಇರಬಹುದೇ ಇಬ್ರಾಹೀಮನ ಮನದಾಳದಲ್ಲಿ?  

ಸುಮಾರು ಎಂಟು ಕೋಟಿ ಜನಸಂಖ್ಯೆಯ ಈಜಿಪ್ಟ್ ನಲ್ಲಿ ಫೇಸ್ ಬುಕ್ ಉಪಯೋಗಿಸುವವರು ಸುಮಾರು ೫೦ ಲಕ್ಷವಂತೆ.

3 thoughts on “ಮಗಳ ಹೆಸರು “ಫೇಸ್ ಬುಕ್”

  1. Mahesh's avatar Mahesh ಹೇಳುತ್ತಾರೆ:

    ಖಂಡಿತವಾಗಿಯೂ ನೂರಾರು ಜನರನ್ನು ಒಗ್ಗೂಡಿಸುವ ಕೆಲಸವನ್ನು ಫೇಸ್ ಬುಕ್ ಮಾಡಿದೆ. ಅದೇರೀತಿ ಫೇಸ್ ಬುಕ್ ನ್ನು ಕಂಡು ಹಿಡಿದ ವ್ಯಕ್ತಿಗೆ ಇನ್ನೂ ಕೇವಲ ೨೬ ವರ್ಷ ಎನ್ನುವದೂ ಕೂಡ ಅಷ್ಟೇ ಆಶ್ಚರ್ಯಕರ ವಿಷಯ.

  2. ರವಿ's avatar Ravi ಹೇಳುತ್ತಾರೆ:

    ಫೇಸ್-ಬುಕ್, ಟ್ವಿಟ್ಟರು, ಗೂಗಲ್ ಗಳು ಜನರನ್ನು ಒಗ್ಗೂಡಿಸುವಲ್ಲಿ ದೊಡ್ಡ ಪಾತ್ರವನ್ನೇನೋ ವಹಿಸಿದವು. ಸರಕಾರದ ವಿರುದ್ಧ ಹೋಗುವ ಇವುಗಳ ಧೈರ್ಯ ಏನಿದ್ದರೂ ಬಡ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಮಾತ್ರ. ಜೂಲೆಯನ್ ಅಸ್ಸಾಂಜ್ (ವಿಕಿಲೀಕ್ಸ್) ಅಮೇರಿಕಾದ ಬಂಡವಾಳ ಹೊರಗೆಳೆದಾಗ ಇವೇ ಮಾಧ್ಯಮಗಳು ಮೌನ ವಹಿಸಿದ್ದವು. ಪೇಯ್-ಪಾಲ್ ಅಂತೂ ವಿಕಿ ಲೀಕ್ಸ್ ನ ಖಾತೆಯನ್ನೇ ಮುಚ್ಚಿತ್ತು. ಇಸ್ಲಾಂ ರಾಷ್ಟ್ರಗಳ ಕ್ರಾಂತಿಯಲ್ಲಿ ಬಹುಷಃ ಅಮೆರಿಕದ ಆಟ ಇದ್ದೆ ಇದೆ. ಕ್ರಾಂತಿ ಒಳ್ಳೆಯದೇ. ಆದರೆ, ಕ್ರಾಂತಿಯ ನಂತರ ಅಮೆರಿಕಾದ ತಾಳಕ್ಕೆ ಕುಣಿದರೆ ಜನರ ಬದುಕು “ಬೆಂಕಿಯಿಂದ ಬಾಣಲೆಗೆ” ಆಗುವುದು ಸತ್ಯ (ಇರಾಕ್ ದಂತೆ).

  3. ರವಿ's avatar Ravi ಹೇಳುತ್ತಾರೆ:

    ಸಹೋದರ ಅಬ್ದುಲ್ಲರೆ, ಮೇಲೆ ಹೇಳಿದ ನನ್ನ ಊಹೆ ಇನ್ನೂ ಬಲವಾಗುತ್ತಿದೆ. ಗದ್ದಾಫಿ ಕೆತ್ತವನಾಗಿದ್ದರೆ ಜನ ಕೆಳಗೆ ಇಳಿಸಲಿ. ಆದರೆ ಅಧುನಿಕ ವಸಾಹತುಶಾಹಿಗೆ ಜನ ತಲೆ ಬಾಗಿದರೆ ಜನ ತಕ್ಕ ಬೆಲೆ ತೆರಬೇಕಾಗುತ್ತದೆ. ಇಂದಿನ (೧೨ ಮಾರ್ಚ್ ೨೦೧೦) ಉದಯವಾಣಿಯ ಒಂದು ಲೇಖನ (ಎಲ್ಲವನ್ನೂ ಕೊಟ್ಟವನಿಗೆ ತಿರುಗಿ ಬೀಳುವುದು) ಓದಿ. ನನ್ನ twitpic ನಲ್ಲೂ ಇದೆ ಈ ಲೇಖನ (http://twitpic.com/48n68t). ಕ್ರಾಂತಿಯನ್ನು ಟೀವಿ ಮಾಧ್ಯಮಗಳು ಬಿಂಬಿಸುವ ರೀತಿ ಮಾತ್ರ ಜಾಗತೀಕರಣದ (ಆಧುನಿಕ ವಸಾಹತುಶಾಹಿ) ಕ್ಯಾಮೆರಾದ ಲೆನ್ಸ್ ಮೂಲಕ.

ನಿಮ್ಮ ಟಿಪ್ಪಣಿ ಬರೆಯಿರಿ