ಹಂದಿಯೊಂದಿಗೆ ಸೆಣಸಬಾರದು

“ಹಂದಿಯೊಂದಿಗೆ ಸೆಣಸಬಾರದು, ನೀವು ಕೊಳಕಾಗುವುದು ಮಾತ್ರವಲ್ಲ, ಹಂದಿಗೆ ಇದು ಖುಷಿಯನ್ನೂ ಕೊಡುತ್ತದೆ”.

ವಾದ ವಿವಾದ, ಕಲಹ, ವೈಮನಸ್ಸು ಅತಿಯಾಗಿ ವಾದಿಸುವವರು ಎಷ್ಟೇ ತಪ್ಪಿದ್ದರೂ ತಮ್ಮ ಪಟ್ಟನ್ನು ಬಿಡದೆ ವಿತಂಡವಾದಕ್ಕೂ, ತಾವೇ ಸರಿ ಎಂದು ತೋರಿಸುವ ಉತ್ಸುಕತೆಯಲ್ಲಿ ಮೊಂಡುತನ ತೋರಿಸಿ ಕತ್ತೆಯನ್ನು ಕುದುರೆಯಾಗಿಸುವ ಪರಿಶ್ರಮ ಪಟ್ಟಾಗ ಮೇಲಿನ ಗಾದೆ ಅನ್ವಯವಾಗುತ್ತದೋ ಏನೋ? ಮೊಂಡು ತನದಿಂದ  ಚರ್ಚೆಯ ಧಾಟಿ ತಪ್ಪುತ್ತದೆ, ಮತ್ತೊಬ್ಬನ ವಿಚಾರಗಳನ್ನ ಒಪ್ಪಿ ಬಿಟ್ಟರೆ ತಮ್ಮ ಅಹಂ ಗೆ ಆಗುವ ಪೆಟ್ಟನ್ನು ನೆನೆದು ತಾವೇ ಸರಿ ಎಂದು ಕೊನೆಯವರೆಗೂ ಸಾಧಿಸಲು ವ್ಯರ್ಥ ಪ್ರಯತ್ನ ಮಾಡುವ ಜನರನ್ನು ನಾವು ಕಂಡೇ ಇರುತ್ತೇವೆ. ಆಂಗ್ಲ ಭಾಷೆಯಲ್ಲಿ live with the difference ಎನ್ನುತ್ತಾರೆ ಮತ್ತು agreeing to disagree ಎಂದೂ ಹೇಳುತ್ತಾ ವಾದ ವಿವಾದಗಳು ಮಾತುಕತೆಯ ರೂಪ ತಾಳಿದಾಗ ಈರ್ವರೂ ಯಾವ ರೀತಿ ನಡೆದು ಕೊಳ್ಳಬೇಕು ಎನ್ನುವತ್ತ ಮೇಲಿನ ಎರಡು ಮಾತುಗಳು ಮಾರ್ಗದರ್ಶನವೀಯುತ್ತವೆ. ಆದರೆ ಸುಶಿಕ್ಷಿತರಲ್ಲೇ ಅಸಹನೆ ಮನೆ ಮಾಡಿದರೆ ಚರ್ಚೆ ಬೀದಿ ಜಗಳದ ರೀತಿ acrimonious ಆಗುತ್ತದೆಯೇ ಹೊರತು ಏನನ್ನೂ ಕಲಿಯಲು ಸಾಧ್ಯವಾಗುವುದಿಲ್ಲ.

One thought on “ಹಂದಿಯೊಂದಿಗೆ ಸೆಣಸಬಾರದು

  1. Narendra's avatar Narendra ಹೇಳುತ್ತಾರೆ:

    ವಾದ ಮಾಡುವ ಇಬ್ಬರಿಗೂ ಇದು ಅನ್ವಯವಾಗುತ್ತದೆ ಅಲ್ಲವೆ.
    ನೀವು ಇದನ್ನು ವಾದ ಮಾಡುವ ಒಂದು ಪಕ್ಷದವರಾಗಿ ಹೇಳುತ್ತಿರುವಿರೋ ಅಥವಾ ತ್ರಯಸ್ತರಾಗಿ ಗಮನಿಸಿ ಹೇಳುತ್ತಿರುವಿರೋ ತಿಳಿಯಲಿಲ್ಲ.

    ಏನಾದರಾಗಲೀ, ನೀವು ಹೇಳಿದ್ದು ಸರಿಯಾಗಿದೆ.
    ಆದರೆ, ಅದನ್ನು ವಾದ ಮಾಡುವಾಗ ನೆನಪಿಟ್ಟುಕೊಂಡರೆ ಉತ್ತಮ.

ನಿಮ್ಮ ಟಿಪ್ಪಣಿ ಬರೆಯಿರಿ