ವ್ಯಾನಿಟಿ ಬ್ಯಾಗ್ ಬಗ್ಗೆ ಒಂದು ಸ್ವಾರಸ್ಯಕರವಾದ ಲೇಖನ ಸಂಪದದಲ್ಲಿ ಪ್ರಕಟವಾಯಿತು. ವ್ಯಾನಿಟಿ ಬ್ಯಾಗ್ ಒಳಗೆ ಏನಿದೆ ಎಂದು ಕೇಳುವುದೂ, ಚೋಲಿ ಕೆ ಪೀಛೆ ಕ್ಯಾ ಹೈ ಎಂದು ಕೇಳುವುದೂ ಒಂದೇ ಎಂದು ನನ್ನ ಅಭಿಪ್ರಾಯ. ಹೆಂಗಳೆಯರು ತಮ್ಮ ಬ್ಯಾಗ್ ಬಗ್ಗೆ ತುಂಬಾ protective. ಅದರಲ್ಲೇನು ಬದನೆ ಕಾಯಿ ಇದ್ದರೂ ಗುಟ್ಟನ್ನು ಮಾತ್ರ ಬಿಟ್ಟು ಕೊಡುವುದಿಲ್ಲ. ಹೆಣ್ಣೇ ರಹಸ್ಯ ಅಲ್ಲವೇ? ಇನ್ನು ಬ್ಯಾಗ್ ತಾನೇ ಹೇಗೆ ಭಿನ್ನವಾದೀತು? ನಾನು ಪ್ರೌಢ ಶಾಲೆಯಲ್ಲಿದ್ದಾಗ ಕನ್ನಡ ಪಂಡಿತರೊಬ್ಬರು ಹೇಳಿದ್ದು ನೆನಪಿಗೆ ಬಂತು; ವ್ಯಾನಿಟಿ ಬ್ಯಾಗ್ ಅಂದ್ರೆ ಏನು ಗೊತ್ತೇನ್ರೋ, “ಜಂಭದ ಬ್ಯಾಗ್” ಅಂತ. ಅದನ್ನು ಹಿಡ್ಕೊಂಡು ಕಾಡು ಕುದ್ರೆ ಥರ ಹೋಗೋ ಹೆಂಗಸರನ್ನು ನೋಡಿದ್ದೀರಾ ಎಂದು ತಮಾಷೆಯಾಗಿ ಹೇಳಿದ್ದರು. ಅದೇನೇ ಇರಲಿ ನನಗಂತೂ ವ್ಯಾನಿಟಿ ಬ್ಯಾಗು ಮಹಿಳೆಯರಷ್ಟೇ ಸಂಕೀರ್ಣ. ಅದರೊಳಗೆ ಏನಿದೆ ಎಂದು ಕೇಳಿದರೆ ನಿಮ್ಮ ವಯಸ್ಸೆಷ್ಟು ಎಂದು ಕೇಳಿದರೆ ಎಷ್ಟು ಕೋಪ ಬರುತ್ತೋ ಅದಕ್ಕಿಂತ ಹೆಚ್ಚು ಕೋಪ ಬರುತ್ತದೆ. ಪಾಶ್ಚಾತ್ಯ ಮಹಿಳೆಯರ ಬ್ಯಾಗಿನಲ್ಲಿ ಟೂತ್ ಬ್ರಶ್ ಮತ್ತು ಕಾಂಡೋಮ್, ಪಿಲ್ಸ್ ಇರುತ್ತದೆ ಎಂದು ಎಲ್ಲೋ ಓದಿದ ನೆನಪು. ನಮ್ಮ ಮಹಿಳೆಯರ ಬ್ಯಾಗ್ನಲ್ಲಿ ನನಗೆ ತಿಳಿದಂತೆ ಬಾಯಿ ವಾಸನೆ ಹೋಗಲಾಡಿಸುವ “ಮಿಂಟ್” ಗಳು, ಕುಂಕುಮದ ಡಬ್ಬಿ, ಒಂದಿಷ್ಟು ಪೌಡರ್ರು, ಪುಟಾಣಿ ಮಗು ಇದ್ದರೆ diapers ಇತ್ಯಾದಿ. ಊಪ್ಸ್, ಮರೆತೆ. ತಮ್ಮ ಗಂಡಂದಿರ ಜೇಬಿನಿಂದ ಕದ್ದ ಹಣ? ಓಹ್, ಅದು ಬ್ಯಾಗ್ನಲ್ಲಿರೋಲ್ಲ, ಬದಲಿಗೆ ಕುಪ್ಪುಸದ ಒಳಗೆ ಇರುತ್ತೆ.
ನನಗಂತೂ ನಮ್ಮ ಹಳೆ ಕಾಲದ ಸಾಮಾನ್ಯವಾಗಿ ಅಜ್ಜಿಯರು ತಮ್ಮ ಸೊಂಟಕ್ಕೆ ಸಿಕ್ಕಿಸಿಕೊಳ್ಳುವ ಪುಟಾಣಿ, embroidery ಮಾಡಿದ ಬಟ್ಟೆಯ ಚೀಲ (pouch) ಇದೆಯಲ್ಲ, ಅದೇ ಇಷ್ಟ. ಅದರಲ್ಲಿ ಒಂದೆರಡು ಅಡಿಕೆಯ ತುಂಡುಗಳು, ಒಣಗಿದ ವೀಳ್ಯ, ಒಂದಿಷ್ಟು ಪುಡಿಗಾಸು… pouch ನಷ್ಟೇ ನೇರ, ಸರಳ.
ನನಗಂತೂ ನಮ್ಮ ಹಳೆ ಕಾಲದ ಸಾಮಾನ್ಯವಾಗಿ ಅಜ್ಜಿಯರು ತಮ್ಮ ಸೊಂಟಕ್ಕೆ ಸಿಕ್ಕಿಸಿಕೊಳ್ಳುವ ಪುಟಾಣಿ, embroidery ಮಾಡಿದ ಬಟ್ಟೆಯ ಚೀಲ (pouch) ಇದೆಯಲ್ಲ, ಅದೇ ಇಷ್ಟ. ಅದರಲ್ಲಿ ಒಂದೆರಡು ಅಡಿಕೆಯ ತುಂಡುಗಳು, ಒಣಗಿದ ವೀಳ್ಯ, ಒಂದಿಷ್ಟು ಪುಡಿಗಾಸು… pouch ನಷ್ಟೇ ನೇರ, ಸರಳ.
>>embroidery ಮಾಡಿದ ಬಟ್ಟೆಯ ಚೀಲ (pouch) ಇದೆಯಲ್ಲ, ಅದೇ ಇಷ್ಟ. <<
ನಾವಿದನ್ನು ’ಸಂಚಿ’ ಅನ್ನುತ್ತೇವೆ.