ದಿನಾ ಬೆಳಗಾದರೆ ಮುಂಬೈ ಸ್ಟಾಕ್ ನ ಬಗ್ಗೆ, dow jones index ಮತ್ತು new york ಸ್ಟಾಕ್ exchange ಗಳ ಪಾಯಿಂಟ್ಸ್ ಬಗ್ಗೆ ಕೆಲವರು ಆತಂಕ ಮತ್ತು ತವಕದಿಂದ ಕೂತರೆ, ಇನ್ನು ಕೆಲವರು ಇಂದು ಮತ್ತೆ ನಮ್ಮ ಮುಖ್ಯ ಮಂತ್ರಿಗಳು ಗಳ ಗಳ ಅತ್ತರೆ ಎಂದು ಕುತೂಹಲದಿಂದ ವೀಕ್ಷಿಸುವುದು ಒಂದು ಪರಿಪಾಠವಾಗಿದೆ. ರಾಜ್ಯದ ರಾಜಕಾರಣ ದಿನೇ ದಿನೇ ವೈವಿದ್ಯತೆ ಕಾಣುತ್ತಿದ್ದು ಈ ವೈವಿಧ್ಯತೆಗೆ ಕಾರಣ ಹೊರಗಿನ ರಾಜ್ಯದವರು ಎನ್ನುವ ಅಂಶ ಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಿದೆ. ಆಂಧ್ರ ಮೂಲದ ರೆಡ್ಡಿ ಸೋದರರ ಚದುರಂಗದಾಟಕ್ಕೆ ನಮ್ಮ ರಾಜ್ಯದ ಸೀದಾ ಸಾದಾ ಮನುಷ್ಯನ ಕಬಡ್ಡಿ ಕಸರತ್ತುಗಳು ಸೋತು ಸುಣ್ಣವಾಗುತ್ತಿದ್ದು ರಾಜ್ಯದ ಜನತೆಗೆ ಪುಕ್ಕಟೆ ಮನರಂಜನೆ ಒದಗಿಸುತ್ತಿದೆ.
ಸರಿ ಮು. ಮಂತ್ರಿಗಳು take the bull by its horn ತತ್ವವನ್ನು ಅಳವಡಿಸಿಕೊಂಡು ಅಧಿಕಾರ ಉಳಿಸಿಕೊಳ್ಳುವುದನ್ನು ಬಿಟ್ಟು ಆಟಿಕೆ ಕಳಕೊಂಡ ಮಗುವಿನಂತೆ ಏಕೆ ಅಳುತ್ತಿದ್ದಾರೆ ಎನ್ನುವುದು ಅರ್ಥವಾಗದ ವಿಷಯ. ರಾಜಕಾರಣಿಗಳಿಗೆ ಅಧಿಕಾರ ಎನ್ನುವುದು ಮಕ್ಕಳಿಗೆ ಆಟಿಕೆ ಇದ್ದಂತೆ. ಅದು ಕೈ ತಪ್ಪಿದಾಗ ಅಥವಾ ಯಾರಾದರೂ ಕಸಿದುಕೊಳ್ಳಲು ಹವಣಿಸಿದಾಗ ವಿಹ್ವಲರಾಗುವುದೂ ಸಹಜವೇ. ಅದರಲ್ಲೇನೂ ತಪ್ಪಿಲ್ಲ ಎನ್ನಿ. ಜೀವನ ಪೂರ್ತಿ ಜನಸೇವೆ ಮಾಡಿ ಬದುಕಿನ ಮುಸ್ಸಂಜೆಯ ಕ್ಷಣಗಳಲ್ಲಿ ಒಂದಿಷ್ಟು ಅಧಿಕಾರದ ರುಚಿ ಉಣ್ಣುವ ಎಂದರೆ ಅದಕ್ಕೂ ಒಲ್ಲೆ ಎನ್ನುವ spoil sport ಆಡಿ ಖುಷಿ ಪಡುವ ವಿರೋಧಿಗಳು. ಎಡ್ಡಿಜೀ ಮು. ಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದಾಗ ನನಗನ್ನಿಸಿದ್ದು ಈ ಸಾಧಾರಣ, ಕಪಟತನ ಅರಿಯದ ವ್ಯಕ್ತಿಯನ್ನು ಘಟಾನುಘಟಿ ಗಳು ಹರಿದು ತಿನ್ನುವುದರಲ್ಲಿ ಸಂಶಯವಿಲ್ಲ ಎಂದು. ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಅಧಿಕಾರ ಏರಿದ ಭಾಜಪಕ್ಕೂ ಅಧಿಕಾರದ nuances ಏನು ಎನ್ನುವುದು ತಿಳಿಯಲಿಲ್ಲ. ಅದು ಕಲಿಯುವ ಹೊತ್ತಿಗೆ ಕುಮಾರ ಸ್ವಾಮಿ ಅಂಡ್ ಕಂಪನಿ ಸರಕಾರದ ಚರಮಗೀತೆ ಹಾಡಿ ಚಿಯರ್ಸ್ ಎಂದು ಕುಣಿಯಬಹುದು ಮತ್ತು ಎಡ್ಡಿಜಿ ಶರಣ ಶರಣೆಯರ ನಾಡಿಗೆ ಮರಳಿ ವಚನ ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳಬಹುದು.