ಆಫೀಸಿನಿಂದ ಸಂಜೆ ಮನೆಗೆ ಬಂದೆ. ೫ ವರುಷದ ನನ್ನ ಮಗ ಹಿಶಾಮ್ ಮಿತ್ರನ ಪಾರ್ಟಿಗೆ ಮಾಲಿಗ್ ಹೋಗಿದ್ದ. ೧ ವರ್ಷದ hyper active ಪುತ್ರಿ “ಇಸ್ರಾ” ನಿದ್ದೆ ಹೋಗಿದ್ದಳು. ಲ್ಯಾಪ್ಟಾಪ್ ತೆರೆದು ಇನ್ನೂ ಕೂತಿಲ್ಲ, ಒಳಗೆ ಬಂದ ಕೂಡಲೇ ಶುರುವಾಯಿತಾ ನಿಮ್ಮದು ಎಂದು ಮಡದಿ ದೂರಿದಳು. ಮಕ್ಕಳಿಲ್ವಲ್ಲಾ, ಅದಕ್ಕೇ ಎಂದೆ. ಕೆರಳಿದ ಆಕೆ, ನಾನೇನೂ ಮೂಕಿಯಾ ಮಾತನಾಡದೆ ಇರೋಕೆ ಅಥವಾ ಸತ್ತಿದ್ದೀನ ಎಂದು ಮೇಲೆ ಬಿದ್ದಳು. ಅವಳ ರೂಪ ಕಂಡು ಬೆದರಿದ ನಾನು ನನ್ನ ಲ್ಯಾಪ್ ಟಾಪಿಗೆ ಏನೋ ಬಂದಿದೆ ಗ್ರಹಚಾರ ಎಂದು ಕೂಡಲೇ ಅದನ್ನು ಮಡಚಿ ಅವಳೊಂದಿಗೆ ಮಾತಿಗಿಳಿದೆ.
ಅಲ್ಲಾ, ಎಲ್ರ ಹೆಂಡ್ರೂ ಹೀಗೋ ಅಥವಾ ನನ್ನ ಪಾಲಿಗೆ ಬಂದ ಪ್ರಸಾದ ಮಾತ್ರ ಹೀಗೋ, ಕೊಂಚ ಬಿಡಿಸಿ ಹೇಳಣ್ಣ.
John Gray ಅವರ “Men are from Mars, Women are from Venus” ಓದಿ ಸಾರ್ 😉
ಬಿಡುಗಡೆಯಾದ ದಿನವೇ ಓದಿ ಆಯಿತು ಗ್ರೇ ಪುಸ್ತಕವನ್ನ. ಅದನ್ನು ಬರೆದು ಆತ ದುಡ್ಡು ಮಾಡಿದನೆ ಹೊರತು ಸಂಬಂಧವೇನೂ ಸುಧಾರಿಸಲಿಲ್ಲ, (ನಗು).