“ಬೆಂಗಳೂರಿಗರೆ ನಿಮ್ಮ ಕಚೇರಿ, ಕಾಲೇಜಿನಿಂದ ಹೊರಬನ್ನಿ, ನಿಮ್ಮ ಹಕ್ಕುಗಳಿಗೆ ಬದ್ಧರಾಗಿರಿ ಮತ್ತು ಮೂಲಭೂತವಾದಿಗಳನ್ನು ಕಿತ್ತು ಒಗೆಯಿರಿ.”
ಫೆಬ್ರವರಿ 14ರಂದು ಪ್ರೇಮಿಗಳ ದಿನ ಆಚರಿಸುವುದು ಭಾರತೀಯ ಸಂಸ್ಕೃತಿಗೆ ವಿರುದ್ಧ, ಅಂಥ ಆಚರಣೆಗೆ ಅವಕಾಶ ನೀಡುವುದಿಲ್ಲ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅವರು ಹಿಡಿದಿರುವಪಟ್ಟಿಗೆ ಪ್ರತಿಯಾಗಿ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಲ್ಲಿ ಪ್ರೊಫೆಸರಾಗಿರುವ ರಾಜಕೀಯ ವಿಶ್ಲೇಷಕ ರಾಜೀವ್ ಗೌಡ ಅವರು ಬೆಂಗಳೂರಿನ ವಿದ್ಯಾವಂತರಿಗೆ ಕರೆ ನೀಡಿದ್ದಾರೆ.
this sort of confrontationist approach will not serve anyone. ಸಮಾಜದ ಬಗೆಗಿನ ರಾಜೀವ್ ಗೌಡರ ಕಳಕಳಿ ಅರ್ಥವಾಗುವಂಥದ್ದೆ. ಆದರೆ ಪರಿಸ್ಥಿತಿ aggravate ಆಗಲು ಬಿಟ್ಟರೆ ಪುಂಡರಿಗೆ ಲಾಭ ಹೊರತು ಶಾಂತಿಪ್ರಿಯರಿಗಲ್ಲ. ಹೊಡಿ ಬಡಿ ಕಡಿ ಎನ್ನೋ ಒಂದು ಸಂಸ್ಕೃತಿ ರಾಷ್ಟ್ರೀಯತೆಯ ಸೋಗು ಹಾಕಿಕೊಂಡು ಓಡಾಡುತ್ತಾ ನಮ್ಮೆಲ್ಲರ ಸಹನೆಯನ್ನು ಮತ್ತು ಒಳ್ಳೆಯತನವನ್ನೂ ಪರೀಕ್ಷಿಸುತ್ತಿರುವ ಈ ಕ್ಲಿಷ್ಟಕರ ಸನ್ನಿವೇಶದಲ್ಲಿ ನಾವು ದುಗುಡದಿಂದ ವರ್ತಿಸುವುದು ಕ್ಷೇಮವಲ್ಲ. ನಮ್ಮ ಸಂಸ್ಕೃತಿಯ ಹಿರಿಮೆ ಬಗ್ಗೆ ನಮ್ಮ ಯುವಜನರಿಗೆ ಹೇಳೋಣ. ನಮ್ಮ ಯುವಜನತೆ ವಿವೇಚನಾಶೀಲರು, ಯಾವುದನ್ನು ಆರಿಸಬೇಕು ಯಾವುದನ್ನು ತಿರಸ್ಕರಿಬೇಕೆನ್ನುವುದನ್ನು ಅವರ ವಿವೇಚನೆಗೆ ಬಿಡೋಣ. ಸಂವಾದದಿಂದ ಮಾತ್ರ ಶಾಂತಿ ಮತ್ತು ಮುನ್ನಡೆ ಸಾಧ್ಯ. valentines ಮತ್ತು ಇತರ ಕಾಸು ಕಾಲ ಹರಣ ಮಾಡುವ ನಿರರ್ಥಕ ಆಚರಣೆಗಳಿಂದ ಯಾವುದೇ ಪ್ರಯೋಜನವಿಲ್ಲ ಎಂದು ತಿಳಿಹೇಳುವ ಅಭಿಯಾನ ಪ್ರಾರಂಭಿಸೋಣ. ವಿಚಾರಗಳನ್ನು ಯಾರ ಮೇಲೂ ಹೇರುವುದು ಬೇಡ. ಶಾಲಾ ಕಾಲೇಜು ಮಟ್ಟಗಳಲ್ಲಿ ಚರ್ಚೆಗಳು ನಡೆಯಲಿ. ಒಂದಲ್ಲ ಒಂದು ಕ್ಷುಲ್ಲಕ ಕಾರಣ ಇಟ್ಟುಕೊಂಡು ಬೀದಿಗಿಳಿಯುವ ಅಸಹ್ಯ, ಕನಿಕರ ಹುಟ್ಟಿಸುವ ಚಾಳಿಗಳನ್ನು ಚಿವುಟಿ ಹಾಕೋಣ. ಈ ನಮ್ಮ ದೇಶವನ್ನು ವಿಶ್ವ ರಾಷ್ಟ್ರಗಳ ಸಮೂಹದಲ್ಲಿ ಧ್ರುವ ನಕ್ಷತ್ರದಂತೆ ಹೊಳೆಯುವಂತೆ ಮಾಡೋಣ.
ಕೇವಲ ೬೦ ವರ್ಷಗಳ ಹಿಂದೆ ನಮ್ಮಂತೆ ಅತಿ ಬಡ ರಾಷ್ಟ್ರವಾಗಿದ್ದ ದಕ್ಷಿಣ ಕೊರಿಯಾ ಇಂದು ಬಲಾಡ್ಯ ಶ್ರೀಮಂತ ರಾಷ್ಟ್ರಗಳ ಸಾಲಿಗೆ ಸೇರಿದ್ದು ಒಗ್ಗಟ್ಟಿನಿಂದ, ಸಂಯಮದಿಂದ ನಡೆದುಕೊಂಡಿದ್ದರಿಂದ.