ಇಸ್ಲಾಂ ಮತ್ತು ಭಯೋತ್ಪಾದನೆ ಒಂದಕ್ಕೊಂದು ಪೂರಕವೋ ಏನೋ ಎನ್ನುವಂತೆ ಮಿಳಿತವಾಗಿಬಿಟ್ಟಿದೆ. ದಿನಪತ್ರಿಕೆ ತೆರೆದಾಕ್ಷಣ ಕಣ್ಣಿಗೆ ಬೀಳುವುದು, ಮುಸ್ಲಿಂ ಮತಾಂಧತೆ, ಬಾಂಬು, ಹತ್ಯೆ, ಜಿಹಾದ್, ಫಿದಾಯೀನ್. ಮುಸ್ಲಿಂ ಟೀಕಾಕಾರರ ಅವ್ಯಾಹತ ವಾಗ್ದಾಳಿ. ಒಟ್ಟಿನಲ್ಲಿ ಇಸ್ಲಾಮನ್ನು ಭಯೋತ್ಪಾದನೆ, ಮತಾಂಧತೆ ಹಾಗೂ ಮೂಲಭೂತವಾದದೊಂದಿಗೆ ಜೋಡಿಸಲು ಉತ್ಸಾಹ, ಹುನ್ನಾರ.
ಆದರೆ ವಸ್ತುನಿಷ್ಠವಾಗಿ ನೋಡಿದಾಗ ಮತ್ತು ಧರ್ಮಗ್ರಂಥಗಳನ್ನು ತಿರುವಿಹಾಕಿದಾಗ ನಮಗೆ ಕಾಣುವುದು ಬೇರೆಯೇ.
ಮುಸ್ಲಿಮನಾಗಿ ಹುಟ್ಟಿದ ನಾನು ನನ್ನ ಧರ್ಮದ ಬಗ್ಗೆ ಮತ್ತಷ್ಟು ತಿಳಿಯಲು, ಅಪನಂಬಿಕೆಯನ್ನು ಹೋಗಲಾಡಿಸಲು, ಅಪವಾದವನ್ನು ನೀಗಿಸಲು ಪ್ರಯತ್ನಿಸುವಾಗ ಒಬ್ಬರು ಕೇಳಿದರು, ಕುಂಬ್ಳೆ ಕಾಯಿ ಕಳ್ಳ ಎಂದರೆ ನೀನೇಕೆ ಬೆನ್ನು ಮುಟ್ಟಿಕೊಂಡು ನೋಡ್ತೀಯ ಅಂತ. ಬೆನ್ನು ಮುಟ್ಟಿಕೊಂಡಾಗ ಬೂದಿ ಮೆತ್ತಿಕೊಂಡಿತ್ತು, ಅದಕ್ಕೆ ಸಂಶಯ ನಿವಾರಿಸಿಕೊಳ್ಳೋಣ ಎಂದು ಉತ್ತರಿಸಿದೆ.
ಇಸ್ಲಾಂನ ಮೂಲ ಅರ್ಥ ಶಾಂತಿ ಎಂದು. ಪರಸ್ಪರರು ಭೇಟಿಯಾದಾಗ “ಅಸ್ಸಲಾಂ ಅಲೈಕುಂ” ಎಂದಾಗ ಅಲ್ಲಿ ನಾವು ಬಯಸುವುದು ಶಾಂತಿಯನ್ನು. ಪ್ರತಿಯೊಂದು ನಮಾಜಿನ ಮುಕ್ತಾಯ ಆಗುವುದು ” ಅಸ್ಸಲಾಂ ಅಲೈಕುಂ ವ ರಹಮತುಲ್ಲಃ‘ ಎಂದು. ಇಲ್ಲೂ ಶಾಂತಿಯದೆ ಮಂತ್ರ.
ದಿನದ ಐದು ಹೊತ್ತು ಪ್ರಾರ್ಥಿಸಲು ಉತ್ತೇಜಿಸುವ, ಆಜ್ಞಾಪಿಸುವ ಇಸ್ಲಾಂ ಒಂದು spiritual “ಆಧ್ಯಾತ್ಮಿಕ” ಧರ್ಮವೇ? ಪ್ರತಿ ವರ್ಷವೂ ಒಂದು ತಿಂಗಳು ಪೂರ್ತಿ ಹಗಲಿನಲ್ಲಿ ಊಟ, ನೀರು ಮತ್ತು ಲೈಂಗಿಕ ಸಂಬಂಧವನ್ನು ನಿಷೇಧಿಸುವ ಇಸ್ಲಾಂ ascetic “ವಿರಕ್ತ” ಧರ್ಮವೇ?
ಪವಿತ್ರ ಕುರಾನಿನ ಹಲವೆಡೆ ” ಜಿಹಾದ್”ನ ಕರೆ ಕೊಡುವ ಇಸ್ಲಾಂ “ಹಿಂಸಾ” ಧರ್ಮವೇ?
ಈ ಆಧಾರದ ಮೇಲೆ ಇಸ್ಲಾಮನ್ನು ಇದು ಆಧ್ಯಾತ್ಮಿಕ ಧರ್ಮ ಎಂದು ಅಥವಾ ಹಿಂಸಾ ಧರ್ಮ ಎಂದು ನಿರ್ಣಯಿಸಲು ಸಾಧ್ಯವಿಲ್ಲ.
ಸಾಮಾಜಿಕ ನ್ಯಾಯ ಮತ್ತು ಉನ್ನತ ಮಟ್ಟದ ಧಾರ್ಮಿಕತೆಯನ್ನು, ನೈತಿಕತೆಯನ್ನು ಪ್ರತಿಪಾದಿಸುವ ಇಸ್ಲಾಂ ಜಿಹಾದನ್ನು ಬಯಸುವುದು ಓರ್ವನ ಜೀವ, ಪರಿವಾರ, ಸಂಪತ್ತು ಮತ್ತು ಗೌರವ ಇವುಗಳನ್ನು ಅತಿಕ್ರಮಿಸುವವರ ವಿರುದ್ಧ ಮಾತ್ರ. ತನ್ನ ತಾಯ್ನಾಡಿನಿಂದ ಉಚ್ಚಾಟನೆ ಮಾಡುವವರ ವಿರುದ್ಧ. ಆದರೆ ಪ್ರಸಕ್ತ ಸನ್ನಿವೇಶದಲ್ಲಿ ಜಿಹಾದ್ ಹೂಡುವ ಅವಶ್ಯಕತೆ ಮುಸ್ಲಿಮರಿಗಿಲ್ಲ.
ದಾರಿ ತಪ್ಪಿದ, ಧರ್ಮದ ಸಿದ್ದಾಂತಗಳನ್ನು ತಮಗಿಷ್ಟ ಬಂದಂತೆ ತಿರುಚಿ ರಕ್ತ ಹರಿಸುವ ಅವಿವೇಕಿಗಳು ನೈಜ ಮುಸ್ಲಿಮರಲ್ಲ.
________________________________________________________________________
ಕೋಣೆಯೊಳಗೆ ಆನೆ. ಕಣ್ಣ ಮುಂದೆ ಧುತ್ತೆಂದು ಪ್ರತ್ಯಕ್ಷ ವಾಗಿದ್ದರೂ, ಅಥವಾ ಕಂಡೂ ಕಾಣದಂತೆ ಇದ್ದು ಅದರ ಉಪಸ್ಥಿತಿ ಕೋಣೆ ಯಲ್ಲಿ ಇಲ್ಲ ಎನ್ನುವ ಭ್ರಮೆಯನ್ನು ಪ್ರದರ್ಶಿಸುವುದಕ್ಕೆ, ಆಂಗ್ಲ ಭಾಷೆಯಲ್ಲಿ elephant in the room ಎನ್ನುತ್ತಾರೆ. ಏಕೆಂದರೆ ಕೋಣೆಯೊಳಗೆ ಅಕಸ್ಮಾತ್ ಆನೆಯೊಂದಿದ್ದರೆ ಅದನ್ನು ನಮ್ಮ ಕಣ್ಣಿಗೆ ಕಾಣದಂತೆ ವರ್ತಿಸುವುದು ಅಸಾಧ್ಯ. ಆನೆಯ ಗಾತ್ರ ಅಂಥದ್ದು ನೋಡಿ.
‘ವಿಕಿ’ ಯಲ್ಲಿ ಸಿಕ್ಕ ಮಾಹಿತಿಯಂತೆ ‘ಆಕ್ಸ್ ಫರ್ಡ್’ ಆಂಗ್ಲ ನಿಘಂಟಿನ ಪ್ರಕಾರ ‘ಕೋಣೆಯೊಳಗೆ ಆನೆ’ ಗಾದೆಯನ್ನು ಪ್ರಪ್ರಥಮವಾಗಿ ಉಪಯೋಗಿಸಿದ್ದು ೧೯೫೯ ರಲ್ಲಿ new york times ಅಂಕಣದಲ್ಲಿ. ಶಾಲೆಗಳಿಗೆ ಧನಸಹಾಯ ದ ಬಗೆಗಿನ ಚರ್ಚೆಯಲ್ಲಿ ‘ ಈ ಸಮಸ್ಯೆ ಕೋಣೆಯೊಳಗಿನ ಆನೆಯ ಥರ, ಇದು ಎಷ್ಟು ದೊಡ್ಡದು ಎಂದರೆ ನಿಮ್ಮಿಂದ ಇದನ್ನ ನಿರ್ಲಕ್ಷಿಸಲು ಸಾಧ್ಯವಿಲ್ಲ” ಎನ್ನುವ ಮಾತನ್ನು ಉಪಯೋಗಿಸಲಾಯಿತು.
ಇನ್ನು ನಮ್ಮ ಕನ್ನಡದಲ್ಲಿ ಇದಕ್ಕೆ ಪರ್ಯಾಯವಾಗಿ ಜಾಣ ಕುರುಡು ಎನ್ನುತ್ತಾರೆ. ಆದರೆ ಜಾಣ ಕುರುಡು ಎನ್ನುವ ಮಾತು ‘ಎಲಿಫಂಟ್ ಇನ್ ದ ರೂಂ’ ನಷ್ಟು ಪರಿಣಾಮಕಾರಿಯಲ್ಲ. ನಮಗೆ ಆನೆಯ ಉಪಮೆಯೇ ಮೇಲು. ಚಿಕ್ಕ ಪುಟ್ಟ, ದೊಡ್ಡ ವಿವಾದ ಎಬ್ಬಿಸದ ವಿಷಯದ ಬಗ್ಗೆ ಜಾಣ ಕುರುಡನ್ನು ಪ್ರದರ್ಶಿಸಿ, ಹೆ..ಹೆ ಎಂದು ಹಲ್ಲು ಕಿರಿದು ತಪ್ಪಿಸಿ ಕೊಳ್ಳಬಹುದು. ಸಾಕ್ಷಾತ್ ಆನೆಯೇ ಕೋಣೆಯೊಳಗೆ ವಕ್ಕರಿಸಿ ಕೊಂಡಾಗ ಚರ್ಮ ಉಳಿಸಿ ಕೊಳ್ಳುವುದು ಸ್ವಲ್ಪ ಕಷ್ಟದ ಪಾಡೇ ಸರಿ.
ಭಾಷೆ ಮತ್ತು ಅದು ಒಳಗೊಳ್ಳುವ ಗಾದೆ ಉಪಯೋಗ ಪ್ರಸಕ್ತ ಪರಿಸ್ಥಿಗೆ, ಬೆಳವಣಿಗೆಗೆ ಅಳವಡಿಸಿದಾಗ ಅದರ ಪರಿಣಾಮ ಮನ ಮುಟ್ಟುವಂತಿರುತ್ತದೆ. ವಿಚಾರವನ್ನು ಸಲೀಸಾಗಿ ಗ್ರಹಿಸಲೂ ಸಾಧ್ಯವಾಗುತ್ತದೆ. ಮಾತುಗಳಲ್ಲಿ ಗಾದೆಯನ್ನು ಒಳಪಡಿಸಿ ಕೊಂಡು ಮಾತನ್ನಾಡುವ ರಾಜಕಾರಣಿ, ಜನರನ್ನು ಮಂತ್ರ ಮುಗ್ಧ ಗೊಳಿಸಲು ಸಮರ್ಥನಾದಾಗ ಅವನು ‘ಒರೇಟರ್’ ಎನಿಸಿ ಕೊಳ್ಳುತ್ತಾನೆ, ತನ್ನ ರಾಜಕೀಯ ಅಥವಾ ವೈಚಾರಿಕ ಧಂಧೆಯಲ್ಲಿ ಯಶಸ್ಸು ಕಾಣುತ್ತಾನೆ.
ಈಗ ಬನ್ನಿ, ಭಾಷೆಯ ‘ಬಾಳೆಲೆ’ ಯಿಂದ ರಾಜಕೀಯದ ಬಾಣಲೆಗೆ. ಪ್ರವಾಸಿಗರ ಅಚ್ಚುಮೆಚ್ಚಿನ ನಗರ ರಾಜಸ್ಥಾನದ ಜೈಪುರದಲ್ಲಿ ನಮ್ಮನ್ನಾಳು ತ್ತಿರುವ ಕಾಂಗ್ರೆಸ್ ಪಕ್ಷದ “ಚಿಂತನ್ ಶಿವಿರ್” ( ಚಿಂತನ ಶಿಬಿರ) ಸಮಾವೇಶ. ಇಲ್ಲಿ ಕಾಂಗ್ರೆಸ್ ನ ಯುವರಾಜ ಎಂದು ಗುರುತಿಸಲ್ಪಡುತ್ತಿರುವ ರಾಹುಲ್ ಗಾಂಧಿ ಪಕ್ಷದ ಉಪಾಧ್ಯಕ್ಷ ಸ್ಥಾನಕ್ಕೆ ಚುನಾಯಿತರಾದರು. ನೆಹರೂ ಕುಟುಂಬದವರ ಕೈಯ್ಯಲ್ಲೇ ತಾನೇ ಕಾಂಗ್ರೆ ಇರೋದು. ಇದು ಬಹಿರಂಗ ಗುಟ್ಟು. ಪ್ರಶ್ನಿಸಿದರೆ, ಜನರೇ ಇದಕ್ಕೆ ಕ್ಯಾತೆ ತೆಗೆಯದೆ ತೆಪ್ಪಗಿರುವಾಗ ನೀವ್ಯಾರು ಪ್ರಶ್ನಿಸಲು ಎಂದು ಕಾಂಗ್ರೆಸ್ಸಿಗರ ಎದಿರೇಟು. ಸರಿ ರಾಹುಲ್ ಚುನಾಯಿತ ರಾದರು, ಮುಂದಿನ ಮಹಾ ಚುನಾವಣೆಯಲ್ಲಿ ಪಕ್ಷವನ್ನ ಮುನ್ನಡೆಸಲು. ಆದರೆ ಪ್ರಜಾಪ್ರಭುತ್ವದಲ್ಲಿ ವಂಶ ಪರಂಪರೆ ಬಗ್ಗೆ ದೇಶದ ಅತಿ ದೊಡ್ಡ ವಿರೋಧ ಪಕ್ಷ ಭಾಜಪ ತಕರಾರು ತೆಗೆಯುತ್ತಾ ನೇತಾರ ಅರುಣ್ ಜೆತ್ಲೀ ದೇಶವನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆಗಳಿಗೆ ಕಾಂಗ್ರೆಸ್ ಪಕ್ಷದಲ್ಲ್ಲಿ ಇರುವ ಉತ್ತರ ಎಂದರೆ ವಂಶಪರಂಪರೆಯನ್ನು ಪ್ರಜಾಪ್ರಭುತ್ವದ ಮೇಲೆ ಹೇರುವುದು ಮಾತ್ರ ಎಂದು ಟೀಕೆ ಮಾಡಿದರು. ‘ಚಿಂತನ ಶಿಬಿರ’ ನಮ್ಮ ದೇಶಕ್ಕೆ ‘ಚಿಂತಾಜನಕ’ ರಾಜಕಾರಣದ ಮುಂದುವರಿಕೆಗೆ ಎಡೆ ಮಾಡೀತೆಂದು ಪಂಡಿತರ ಅಳಲು. ಭಾಜಪ ದಿಂದ ಈ ಕಟು ಟೀಕೆ ಯನ್ನು ಕಾಂಗ್ರೆಸ್ಸಿಗರು ಖಂಡಿತ ನಿರೀಕ್ಷಿಸಿಯೇ ಇರುತ್ತಾರೆ. ಸ್ವತಂತ್ರ ಭಾರತದ ಬಹುಪಾಲು ಅವಧಿ ಇವರ ಆಳ್ವಿಕೆಯನ್ನೇ ತಾನೇ ದೇಶ ಕಂಡಿರೋದು. ಎಲ್ಲಾ ತಂತ್ರ ಕುತಂತ್ರಗಳ ವರಸೆಯೇ ಇವರಲ್ಲಿ ಇರುತ್ತದೆ. ರಾಹುಲ್ ರನ್ನು ಪಟ್ಟಾಭಿಷೇಕ ಮಾಡಿ ಭಾಜಪದ ತಕರಾರಿಗೆ ತನ್ನದೇ ಆದ ಮದ್ದನ್ನು ಅರೆಯಿತು ಕಾಂಗ್ರೆಸ್. ಅದೆಂದರೆ ನಮ್ಮ ದೇಶದಲ್ಲಿ ಭಾಜಪ-ಆರೆಸ್ಸೆಸ್ ನೇತೃತ್ವದಲ್ಲಿ ದೇಶವನ್ನು ಅಸ್ಥಿರಗೊಳಿಸಲು ಹಿಂದೂ ಭಯೋತ್ಪಾದನಾ ಕ್ಯಾಂಪ್ ಗಳು ಕೆಲಸ ಮಾಡುತ್ತಿವೆ ಎಂದು. ದೇಶದ ಭದ್ರತೆಯ ಜವಾಬ್ದಾರಿ ಹೊತ್ತ ಗೃಹ ಮಂತ್ರಿಗಳ ಬಾಯಿಂದ ಬಿತ್ತು ಸಿಡಿಲಿನಂಥ ಮಾತು. ಆದರೆ ಇಂಥ ಮಾತುಗಳು ಆಗಾಗ ಕೇಳಿ ಬರುತ್ತಾ ಇರುವುದು ನಾವು ಓದಿದ್ದೇವೆ. ಕಾಂಗ್ರೆಸ್ ನ ದಿಗ್ವಿಜಯ ಸಿಂಗ್ ರಿಂದ ಹಿಡಿದು ಮಾಜಿ ಗೃಹ ಮಂತ್ರಿ ಚಿದಂಬರಂವರೆಗೆ ಎಲ್ಲರೂ ಈ ಕುರಿತು ಹೇಳಿಕೆ ನೀಡಿದ್ದಾರೆ. ದೇಶದ ಹಲವೆಡೆ ಬಾಂಬ್ ಸ್ಫೋಟಗಳು ನಡೆದು ಅದರ ಹಿಂದಿನ ಕೈವಾಡವನ್ನು ಬಹಿರಂಗಗೊಳಿಸಿದ ಪೊಲೀಸ್ ಅಧಿಕಾರಿ ಹುತಾತ್ಮ ಹೇಮಂತ್ ಕರ್ಕರೆ ದೇಶವಾಸಿಗಳ ಹುಬ್ಬೇರುವಂತೆ ಮಾಡಿದ್ದರು. ಹೇಮಂತ್ ಕರ್ಕರೆ ನೇತೃತ್ವದಲ್ಲಿ ನಡೆದ ವಿಚಾರಣೆ ಹಲವು ಜನರ ಬಂಧನಕ್ಕೂ ಕಾರಣವಾಯಿತು. ವಿಚಾರಣೆಯಲ್ಲಿ ಕಹಿ ಸತ್ಯ ಸಹ ಹೊರ ಬಂದಿತು. ಆದರೆ ಭಾಜಪದ ಲಾಲ್ ಕೃಷ್ಣಾ ಅಡ್ವಾಣಿ ಯಾಗಲೀ ಪಕ್ಷದ ಬೇರಾವುದೇ ನಾಯಕರಾಗಲೀ ಈ ವಿಚಾರಣೆಯನ್ನು ಕಾಂಗ್ರೆಸ್ ಪ್ರೇರಿತ ಎಂದು ಟೀಕಿಸಿದ ರೇ ಹೊರತು ಆತ್ಮಾವಲೋಕನ ಮಾಡಿಕೊಳ್ಳುವ ಗೊಡವೆಗೆ ಹೋಗಲಿಲ್ಲ. ದೇಶದ ಅತೀ ಜವಾಬ್ದಾರೀ ಹುದ್ದೆಗಳಲ್ಲಿ ಇರುವ ಗೃಹ ಮಂತ್ರಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು, ಇವರು ನಡೆಸಿದ ವಿಚಾರಣೆಗಳುಮ ಬಂಧಿತರು ನೀಡಿದ ಹೇಳಿಕೆಗಳು, ಇವೆಲ್ಲವೂ ಸುಳ್ಳಿನ ಸರಮಾಲೆ ಯಾಗಲು ಸಾಧ್ಯವೇ? ಎಂದು ಪ್ರಶ್ನಿಸಿ ಕೊಳ್ಳಲಿಲ್ಲ. ಭಯೋತ್ಪಾದನೆಗೆ ಧರ್ಮದ ಲೇಪ ಬೇಡ ಎಂದು ಎಲ್ಲಾ ಪ್ರಜ್ಞಾವಂತರ ಅಭಿಪ್ರಾಯ. ಇಸ್ಲಾಮಿ ಭಯೋತ್ಪಾದನೆ, ಹಿಂದೂ ಭಯೋತ್ಪಾದನೆ ಎಂದು ಕೃತ್ಯ ಎಸಗಿದವರ ಧರ್ಮ ವನ್ನು ಸೇರಿಸಿ ವರ್ಣಿಸುವ ಅಗತ್ಯ ಇಲ್ಲ. ಯಾವ ಧರ್ಮವೂ ಹೊಡೀ, ಬಡೀ, ಕಡೀ ಎಂದು ಹೇಳಿ ಕೊಡುವುದಿಲ್ಲ. ಮುಸ್ಲಿಮರು ನಡೆಸಿದ ಹಿಂಸೆಯ ವಿರುದ್ಧ ಮುಸ್ಲಿಂ ವಿಧ್ವಾಂಸರು ಬಹಿರಂಗ ಹೇಳಿಕೆ ಕೊಟ್ಟಿದ್ದಾರೆ. ಸಮುದಾಯವನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಭಯೋತ್ಪಾದನೆ ಪರಿಹಾರವಲ್ಲ ಎನ್ನುವ ಕಿವಿ ಮಾತನ್ನೂ ಹೇಳಿದ್ದಾರೆ. ಈ ನಿಲುವು ಸ್ವಾಗತಾರ್ಹ. ಆದರೆ ಭಾಜಪ ಮತ್ತು ಅದನ್ನು ಬೆಂಬಲಿಸುವ ಸಂಘಟನೆಗಳು ಕೋಣೆಯೊಳಗಿರುವ ಆನೆಯ ರೀತಿ ಕುರುಡು ಭಾವವನ್ನು ತಳೆಯುವುದು ತರವಲ್ಲ. ಆನೆಯ ಇರುವು ಬಹಿರಂಗವಾಗಿದೆ. ಅದರ ಬಗ್ಗೆ ಮಾಡಬೇಕಾದ, ತಳೆಯಬೇಕಾದ ನಿಲುವಿನ ಬಗ್ಗೆ ಪಕ್ಷ ಗಂಭೀರವಾಗಿ ಯೋಚಿಸಿ ಕ್ರಮ ತೆಗೆದುಕೊಳ್ಳಬೇಕು. ನಿರಾಕಾರಣಾ ಮನೋಭಾವದಿಂದ ಯಾರಿಗೂ ಲಾಭವಾಗದು.
ಬದಲಾಗುತ್ತಿರುವ ವಿಶ್ವ ರಾಜಕಾರಣದಲ್ಲಿ ಭಾರತದ ಪಾತ್ರ ಹಿರಿದು. ಪ್ರಜಾಪ್ರಭುತ್ವ, ಜಾತ್ಯಾತೀತ ಮೌಲ್ಯಗಳು ನಮ್ಮ ರಾಜಕಾರಣದಲ್ಲಿ ಪ್ರತಿಫಲಿಸಬೇಕು. ಅಸಹನೆ, ಮತಾಂಧತೆಯ ಸುಳಿಯಲ್ಲಿ ಸಿಕ್ಕ ದೇಶಗಳ ಅವಸ್ಥೆಯಲ್ಲಿ ನಮಗೂ ಪಾಠವೊಂದಿದೆ ಎನ್ನುವುದನ್ನು ಮನಗಾಣಬೇಕು.
A very good one….keep it up…i loved u r kannada
really .. hats off.
ಅಬ್ದುಲ್ ಅವರಿಗೆ ನಮಸ್ತೇ.
ನಿಜ. ಯಾವುದೇ ಧರ್ಮವನ್ನು ಯಾವುದೋ ಒಂದು ಮಗ್ಗುಲಿಂದ ನೋಡಲು, ಅದು ‘ಇಂಥದ್ದೇ’ ಎಂದು ತೀರ್ಮಾನಿಸಲು ಸಾಧ್ಯವಿಲ್ಲ. ನಮ್ಮ ನಮ್ಮ ಧರ್ಮಗಳಲ್ಲಿನ ಒಳಿತನ್ನು ಸ್ವೀಕರಿಸಿ ಆಚರಿಸುತ್ತಾ, ಕೆಡುಕನ್ನು ಎತ್ತಿ ಆಡಿ- ತಿರಸ್ಕರಿಸಿ ದೂರವಿಡುತ್ತಾ ನಮ್ಮ ಪಾಡಿಗೆ ಬಾಳಿಕೊಂಡರೆ ಯಾವ ನೋವಿಗೂ ಆಸ್ಪದವಿರುವುದಿಲ್ಲ. ಬಹುಶಃ ಹಿಂದೆಂದಿಗಿಂತ ಹೆಚ್ಚು ಪ್ರಮಾಣದಲ್ಲಿ ಈ ಆಧುನಿಕ ಯುಗದಲ್ಲಿ ಜಾತಿ ಆಧಾರಿತ ದ್ವೇಷ ಹೊತ್ತುರಿಯುತ್ತಿದೆ. ಈ ವಿಡಂಬನೆಗೆ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯದಾಗಿದೆ.
ಸೌಹಾರ್ದ-ಸಹಬಾಳ್ವೆಗಳ ಆಶಯ ಹೊತ್ತ ನಿಮ್ಮೊಂದಿಗೆ ನಾವೆಲ್ಲರೂ ಇದ್ದೇವೆ. ದಯವಿಟ್ಟು ಈ ನಿಟ್ಟಿನಲ್ಲಿ ಮತ್ತಷ್ಟು ಬರೆಯಿರಿ.
ಅಲ್ಲಾ ಹಾಫಿಜ್
ಚೇತನಾ
dearsir u r perfectly right..but your type of thinking muslims is only 20% in our india
ಇಸ್ಲಾಂ ಅಂದರೆ ಶಾಂತಿ ಅಂತ ನೀವು ಹೇಳುತ್ತಿರುವಿರಿ.
ಅದೇನಾದರೂ ನಿಜವಾಗಿದ್ದರೆ, ಜಗತ್ತಿನಲ್ಲಿ ಇಷ್ಟೊಂದು ಹಿಂಸೆಯೇ ಇರುತ್ತಿರಲಿಲ್ಲ!
ಇಸ್ಲಾಂ ಹುಟ್ಟಿದಂದಿನಿಂದ ಇಂದಿನವರೆಗೆ ಕೇವಲ ಹಿಂಸೆಯೇ ಕಾಣುತ್ತಿದೆಯಲ್ಲಾ?
ಮಹಮದ್ ಪೈಗಂಬರ್ ಕೂಡಾ ಯುದ್ಧಗಳನ್ನು ನಡೆಸಿದರಲ್ಲಾ……ಬುದ್ಧನಂತೆ ಅಹಿಂಸೆಯನ್ನು ಶಾಂತಿಯನ್ನು ಬೋಧಿಸಲಿಲ್ಲವಲ್ಲಾ!?
ಇಂದಿಗೂ ಜಗತ್ತಿನಾದ್ಯಂತ ಎಲ್ಲೆಲ್ಲಿ ಭಯೋತ್ಪಾದಕತೆ ಇದೆಯೋ ಅಲ್ಲೆಲ್ಲಾ ಇಸ್ಲಾಂ ನ ಚಹರೆ ಕಾಣುತ್ತಿರುವುದು ಸುಳ್ಳೇ!?
ಮುಸಲ್ಮಾನರಲ್ಲದವರನ್ನು “ಕಾಫಿರ್” ಎಂದು ಕಾಣುವುದು, ಅವರನ್ನು ಮುಸಲ್ಮಾನನನ್ನಾಗಿ ಮಾಡುವುದು……
“ದಾರ-ಉಲ್-ಇಸ್ಲಾಂ” ಇಸ್ಲಾಂನ ರಾಷ್ಟ್ರವಾದರೆ, “ದಾರ-ಉಲ್-ಹರಬ್” ಇಸ್ಲಾಂನ ಅನುಸರಣೆ ಮಾಡದ ದೇಶ……
ಏನು ಇವಲ್ಲಾ? ಇಸ್ಲಾಂ ಅನುಯಾಯಿಗಳಲ್ಲದವರನ್ನು ಮತಾಂತರಿಸುವ ಹಠವೇಕೆ?
ಎಲ್ಲರು ಅವರವರ ಪಾಡಿಗೆ ತಮ್ಮ ಮತ-ಧರ್ಮಗಳನ್ನು ಅನುಸರಿಸಿದರೆ ಹಿಂಸೆಗೆ ಎಲ್ಲಿ ಸ್ಥಾನ?
ಎಲ್ಲಿಯವರೆಗೆ ಬೇರೆ ಮತದವರನ್ನು ತಮ್ಮ ಮಠಕ್ಕೆ ಸೆಳೆಯುವುದು ಇರುವುದೋ, ಅದನ್ನು ಮಾಡಲು ಹಿಂಸೆಯ ದಾರಿಗೆ ಇಳಿದರು ತಪ್ಪಿಲ್ಲ ಎನ್ನುವ ಭಾವನೆ ಇರುತ್ತೋ,
ಅಲ್ಲಿಯವರೆಗೆ ಈ ಜಗತ್ತಿನಲ್ಲಿ ಹಿಂಸೆ ಇದ್ದೆ ಇರುತ್ತದೆ.
ನೀವು ನಿಜಕ್ಕೂ ಶಾಂತಿಯ ಪ್ರೇಮಿಯೇ ಆಗಿದ್ದರೆ, ಮೊದಲು “ಕಾಫಿರ್” ಎಂಬ ಪದವನ್ನು ನಿಮ್ಮ ಗ್ರಂಥಗಳಿಂದ, ನಿಮ್ಮ ಮನಸ್ಸುಗಳಿಂದ ತೆಗೆದು ಹಾಕಿ.
ಮತಾಂತರ ಮಾಡುವುದು ತಪ್ಪೆಂದು ಸಾರ್ವಜನಿಕವಾಗಿ ಗೋಷಣೆ ಮಾಡಿರಿ.
ಆ ರೀತಿ ಮಾಡುವವರು ಸ್ವರ್ಗಕ್ಕೆ ಹೋಗುವುದಿಲ್ಲ, ಬದಲಾಗಿ ನರಕಕ್ಕೆ ಹೋಗುತ್ತಾರೆ ಎಂದು ಪ್ರಚುರಪಡಿಸಿ.
ಆಗ ಮಾತ್ರ ನಿಮ್ಮ ಉದ್ದೇಶದ ಕುರಿತಾಗಿ ನಂಬಿಕೆ ಬರಬಹುದು.
well said Mr. Narendra…
Love your site man keep up the good work
Narendra
May 18, 2010 @ 06:12:21
tumba chennagi narendra ravaru helidare
narendraravaru tumba chennagi helidare ಆ ರೀತಿ ಮಾಡುವವರು ಸ್ವರ್ಗಕ್ಕೆ ಹೋಗುವುದಿಲ್ಲ, ಬದಲಾಗಿ ನರಕಕ್ಕೆ ಹೋಗುತ್ತಾರೆ ಎಂದು ಪ್ರಚುರಪಡಿಸಿ. idu word sari ide
very good M,R ಅಬ್ದುಲ್ sir, thanku on keep it up, super
Not a single place in Quran does it allow you to kill an innocent person. People will point fingers at verses, by taking them out of the context and historical background. When one analyse this and read the whole Quran, you will see that Quran never allows you to kill an innocent person. Neither prophet Muhammad did this.
Allah says in the holy quraan,,,,,,,,
(that if anyone killed a person not in retaliation of murder, or (and) to spread mischief in the land – it would be as if he killed all mankind, and if anyone saved a life, it would be as if he saved the life of all mankind.)
(Holy Quraan)
More than what scriptures says, how the followers behave is more important.
Everybody knows that Gandhiji preached only “Ahimsa” or non-violence. But, today look at the people who profess in the name of Gandhiji – tens of thousands of people were killed by these people when Gandhi was killed in 1948 and when Indira Gandhi was killed in 1984.
In the same way, scriptures might have told only good things and others might be taking things out of context.
But, what about the followers – Look at Afazal Guru, Kasab, Laden, Madani, etc.
All these people profess in the name of same scripture to do violence!
Not just that – the community, the community leaders, none of them throw these terrorists out of the community or condemn these acts.
So, what should the world infer from these acts?
Also, prophet muhammed waged wars and killed people.
You can justify his action by giving many reasons.
But, war is a war and killing is a killing – it is a violent act, where many innocents would have died.
http://www.ndtv.com/article/world/historic-hindu-temple-vandalised-in-pakistan-213547?pfrom=home-otherstories
And look at how Muslim intellectuals like Dr.Zakir Naik create communal hatred: https://www.facebook.com/photo.php?fbid=471265336239483&set=a.377613775604640.94343.177413585624661&type=1&ref=nf